AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಸ್ತಾದ್ ಭಗತ್ ಸಿಂಗ್’ ಪ್ರೀ ರಿಲೀಸ್ ಇವೆಂಟ್​​ಗೆ ದಿನಾಂಕ ನಿಗದಿ

Ustaad Bhagat Singh: ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾದ ಎದುರು ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗುತ್ತಿದ್ದು, ‘ಧುರಂಧರ್ 2’ಗೆ ಪೈಪೋಟಿ ನೀಡಲು ಭಾರಿ ಪ್ರಚಾರವನ್ನೇ ಚಿತ್ರತಂಡ ಮಾಡಬೇಕಿದೆ. ಆದರೆ ಈ ವರೆಗೂ ಸಿನಿಮಾದ ಮುಖ್ಯ ಆಕರ್ಷಣೆಯಾಗಿರುವ ಪವನ್ ಕಲ್ಯಾಣ್ ಪ್ರಚಾರಕ್ಕೆ ಇಳಿದೇ ಇಲ್ಲ. ಆದರೆ ಇದೀಗ ಪವನ್ ಕಲ್ಯಾಣ್ ಆಗಮನಕ್ಕೆ ದಿನಾಂಕ ನಿಗದಿ ಆಗಿದ್ದು, ಸಿನಿಮಾದ ಅದ್ಧೂರಿ ಪ್ರೀ ರಿಲೀಸ್​​ ಆಯೋಜನೆ ಮಾಡಲಾಗಿದೆ.

‘ಉಸ್ತಾದ್ ಭಗತ್ ಸಿಂಗ್’ ಪ್ರೀ ರಿಲೀಸ್ ಇವೆಂಟ್​​ಗೆ ದಿನಾಂಕ ನಿಗದಿ
ಪವನ್
ಮಂಜುನಾಥ ಸಿ.
|

Updated on: Mar 13, 2026 | 3:03 PM

Share

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್, ಆಂಧ್ರ ಪ್ರದೇಶದ ಡಿಸಿಎಂ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೂರನೇ ಸಿನಿಮಾ ಇದಾಗಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾದ ಎದುರು ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗುತ್ತಿದ್ದು, ‘ಧುರಂಧರ್ 2’ಗೆ ಪೈಪೋಟಿ ನೀಡಲು ಭಾರಿ ಪ್ರಚಾರವನ್ನೇ ಚಿತ್ರತಂಡ ಮಾಡಬೇಕಿದೆ. ಆದರೆ ಈ ವರೆಗೂ ಸಿನಿಮಾದ ಮುಖ್ಯ ಆಕರ್ಷಣೆಯಾಗಿರುವ ಪವನ್ ಕಲ್ಯಾಣ್ ಪ್ರಚಾರಕ್ಕೆ ಇಳಿದೇ ಇಲ್ಲ. ಆದರೆ ಇದೀಗ ಪವನ್ ಕಲ್ಯಾಣ್ ಆಗಮನಕ್ಕೆ ದಿನಾಂಕ ನಿಗದಿ ಆಗಿದ್ದು, ಸಿನಿಮಾದ ಅದ್ಧೂರಿ ಪ್ರೀ ರಿಲೀಸ್​​ ಆಯೋಜನೆ ಮಾಡಲಾಗಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರಚಾರ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾದ ನಾಯಕಿ ಶ್ರೀಲೀಲಾ ಮತ್ತು ನಿರ್ದೇಶಕ ಹರೀಶ್ ಶಂಕರ್ ಅವರುಗಳು ಕಾಲೇಜುಗಳು ಇನ್ನಿತರೆ ಕಡೆಗಳಿಗೆ ಹೋಗಿ ಸಿನಿಮಾದ ಪ್ರಚಾರ ಮಾಡುತ್ತಲಿದ್ದಾರೆ. ಆದರೆ ಸಿನಿಮಾಕ್ಕೆ ಸಿಗಬೇಕಿದ್ದ ಹೈಪ್ ಇನ್ನೂ ಸೃಷ್ಟಿಯಾಗಿಲ್ಲ. ಹೈಪ್ ಸೃಷ್ಟಿಯಾಗಬೇಕೆಂದರೆ ಪವನ್ ಕಲ್ಯಾಣ್ ಅಖಾಡಕ್ಕೆ ಇಳಿಯಲೇ ಬೇಕಿದೆ.

ಇದೇ ಕಾರಣಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಮಾರ್ಚ್ 15 ರಂದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ವಿಶಾಲವಾದ ಹೈದರಾಬಾದ್​​ನ ಯೂಸಫ್​​ಘಡದ ಪೊಲೀಸ್ ಗ್ರೌಂಡ್​​ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಹಾಗೂ ಸಿನಿಮಾದ ಇನ್ನೂ ಕೆಲವು ನಟ-ನಟಿಯರು ಭಾಗಿ ಆಗಲಿದ್ದಾರೆ. ಅತಿಥಿಯಾಗಿ ಪವನ್ ಅವರ ಆತ್ಮೀಯರಾದ ಕೆಲವು ರಾಜಕಾರಣಿಗಳು ಸಹ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಅನುಪಸ್ಥಿತಿಯಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತ ಶ್ರೀಲೀಲಾ

ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡೊಂದು ಈಗಾಗಲೇ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಮಾರ್ಚ್ 15ರಂದು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೇ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಮುಖ್ಯ ನಾಯಕಿಯಾಗಿ ಶ್ರೀಲೀಲಾ ಮತ್ತು ರಾಶಿ ಖನ್ನಾ ಸಹ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us