AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುತ್ತಿರುವಾಗಲೇ ಬಸ್​​ನ ಬ್ರೇಕ್​​ ಫೇಲ್​​: ಗದಗ ಹೊಸ ಬಸ್​​ ನಿಲ್ದಾಣದ ಬಳಿ ತಪ್ಪಿದ ಭಾರಿ ದುರಂತ

Gadag News: ಗದಗ ಹಳೆ ಬಸ್ ನಿಲ್ದಾಣದಿಂದ ಹೊಸ ಸ್ಟ್ಯಾಂಡ್‌ಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಬ್ರೇಕ್ ಫೇಲ್ ಆಗಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏಕಾಏಕಿ ರಿವರ್ಸ್ ಬಂದ ಬಸ್‌ ಅಡಿ ಸಿಲುಕಿದ್ದ ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ಸವಾರರು ಕೂಡ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಘಟನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಲಿಸುತ್ತಿರುವಾಗಲೇ ಬಸ್​​ನ ಬ್ರೇಕ್​​ ಫೇಲ್​​: ಗದಗ ಹೊಸ ಬಸ್​​ ನಿಲ್ದಾಣದ ಬಳಿ ತಪ್ಪಿದ ಭಾರಿ ದುರಂತ
ಬಸ್​​ ಬ್ರೇಕ್​​ ಫೇಲ್​​ ಆಗಿ ನಡೆದಿರುವ ಅಪಘಾತImage Credit source: Tv9 Kannada
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Jul 08, 2026 | 4:58 PM

Share

ಮುಖ್ಯಾಂಶಗಳು

  • ಬ್ರೇಕ್​​ ಫೇಲ್​​ ಆಗಿ ಏಕಾಏಕಿ ಹಿಮ್ಮುವಾಗಿ ಚಲಿಸಿದ ಸರ್ಕಾರಿ ಬಸ್​​
  • ಗದಗ ಹೊಸ ಬಸ್​​ ನಿಲ್ದಾಣದ ಬಳಿ ತಪ್ಪಿದ ಭಾರಿ ಅನಾಹುತ
  • ಬಸ್​​ನಡಿ ಸಿಲುಕಿದ್ದ ಬೈಕ್​​ಗಳನ್ನು ಹೊರ ತೆಗೆಲು ಹರಸಾಹಸ

ಗದಗ, ಜುಲೈ 08: ನಿರ್ವಹಣೆಯ ಕೊರತೆಯಿಂದಾಗಿ ಕರ್ನಾಟಕದ ಸರ್ಕಾರಿ ನಿಗಮಗಳ ಸಾರಿಗೆ ಬಸ್​​ಗಳು ಡಕೋಟಾ ಆಗಿ ಮಾರ್ಪಡುತ್ತಿವೆ ಎಂಬ ಸಾರ್ವಜನಿಕರ ಗಂಭೀರ ಆರೋಪದ ನಡುವೆ ಇದಕ್ಕೆ ಪೂರಕವೆಂಬಂತೆ ಮೇಲಿಂದ ಮೇಲೆ ಘಟನೆಗಳು ನಡೆಯುತ್ತಿವೆ. ಹೆಡ್​​ಲೈಟ್​​ ಕಾರ್ಯನಿರ್ವಹಿಸಿದ ಕಾರಣ ಕಲಬುರಗಿಯಲ್ಲಿ ಮೊಬೈಲ್​​ ಟಾರ್ಚ್​​ನಲ್ಲಿ ಚಾಲಕ ಬಸ್​​ ಓಡಿಸಿದ್ದ ಘಟನೆ ಮಾಸುವ ಮುನ್ನವೇ ಇತ್ತ ಗದಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ಬ್ರೇಕ್ ಫೇಲ್ ಆಗಿ ಸಂಭವನೀಯ ಭಾರಿ ಅನಾಹುತ ತಪ್ಪಿದೆ.

ಬಸ್​​ನಡಿ ಸಿಲುಕಿ ಪರದಾಟ

ಗದಗ ನಗರದ ಹಳೆ ಬಸ್ ನಿಲ್ದಾಣದಿಂದ ಹೊಸ ಸ್ಟ್ಯಾಂಡ್​​ಗೆ ತೆರಳುತ್ತಿದ್ದ ಬಸ್​​ನ​​ ಬ್ರೇಕ್​​ ಫೇಲ್​​ ಆಗಿದೆ. ಈ ವೇಳೆ ಏಕಾಏಕಿ ಬಸ್​​ ಹಿಮ್ಮುಖವಾಗಿ ಚಲಿಸಲು ಆರಂಭಿಸಿದ್ದು, ಹಿಂಭಾಗದಲ್ಲಿದ್ದ ಬೈಕ್​​ ಸವಾರರು ಅದೃಷ್ಟವಶಾತ್​​ ಬಚಾವ್​​ ಆಗಿದ್ದಾರೆ. ಹೀಗಿದ್ದರೂ ಓರ್ವರು ಬಸ್​​ನಡಿ ಸಿಲುಕಿ ಪರದಾಡಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಎಚ್ಚತ್ತು, ಅವರನ್ನು ರಕ್ಷಿಸಿದ್ದಾರೆ. ಅವಘಡದಲ್ಲಿ ಎರಡು ಬೈಕ್​​ಗಳು ಜಖಂ ಆಗಿದ್ದು, ಘಟನೆ ಬಳಿಕ ಸ್ಥಳದಿಂದ ಬಸ್​​ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿ. ಬಸ್​​ನಡಿ ಸಿಲುಕಿದ್ದ ಬೈಕ್​​ಗಳನ್ನು ಹೊರತೆಗೆಯಲು ಹರಸಾಹಸ ಪಡಲಾಗಿದ್ದು, ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಡಾ. ಚಂದ್ರು ಲಮಾಣಿ ಕಾರು ಚಾಲಕನ ಆತ್ಮಹತ್ಯೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​; ಶಾಸಕರ ವಿರುದ್ಧವೇ ಮೃತನ ಕುಟುಂಬಸ್ಥರಿಂದ ಗಂಭೀರ ಆರೋಪ

ಪ್ರತ್ಯಕ್ಷದರ್ಶಿಗಳು ಹೇಳೋದೇನು?

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಬಸ್​​ ಏಕಾಏಕಿ ವೇಗವಾಗಿ ರಿವರ್ಸ್​​ ಬಂದಿದೆ. ಈ ವೇಳೆ ಸ್ಥಳದಲ್ಲಿದ್ದವರು ಬೈಕ್ ಬಿಟ್ಟು ಹಾರಿ ಜೀವ ಉಳಿಸಿಕೊಂಡಿದ್ದಾರೆ. ಬಸ್​​ನ ಅಡಿ ಭಾಗದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಬೈಕ್​​ಗಳು ಬಸ್​​ನ ತಡೆದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಅಲ್ಲದೆ, ಮೊದಲೇ ಬಸ್ನ ಬ್ರೇಕ್​​ ಫೇಲ್ ಆಗಿತ್ತು. ಹೀಗಾಗಿ ಓರ್ವ ಮೆಕಾನಿಕ್​​ ಕೂಡ ವಾಹನದಲ್ಲಿದ್ದರು. ಇಳಿಜಾರು ಪ್ರದೇಶವಾದ ಕಾರಣ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಸ್ಥಳದಲ್ಲಿ ಸ್ಪೀಡ್​​ ಬ್ರೇಕರ್​​ ಕೂಡ ಬಸ್​​ನ ತಡೆಯುವಲ್ಲಿ ಸಹಕಾರಿಯಾದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಅಪಘಾತದ ವೇಳೆ ಬಸ್​​ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ. ​​​​

Published On - 4:18 pm, Wed, 8 July 26

Follow Us
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಇಂಡೋನೇಷ್ಯಾದ ಭವ್ಯ 'ಪ್ರಂಬಾನನ್' ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ
ಇಂಡೋನೇಷ್ಯಾದ ಭವ್ಯ 'ಪ್ರಂಬಾನನ್' ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ