AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 18 Aug: ಚಿನ್ನದ ಬೆಲೆ ಅಲ್ಪ ಏರಿಕೆ; ಮೂರು ದಿನಗಳಿಂದ ಆದ ಒಟ್ಟು ಏರಿಕೆ 275 ರೂ

Gold Price 18 August 2026: ಚಿನ್ನದ ಬೆಲೆ ಮಂಗಳವಾರ ಗ್ರಾಮ್​ಗೆ 20 ರೂ ಹೆಚ್ಚಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 14,270 ರೂನಿಂದ 14,290 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 15,589 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 255 ರೂ ಇದೆ.

Gold Rates 18 Aug: ಚಿನ್ನದ ಬೆಲೆ ಅಲ್ಪ ಏರಿಕೆ; ಮೂರು ದಿನಗಳಿಂದ ಆದ ಒಟ್ಟು ಏರಿಕೆ 275 ರೂ
ಚಿನ್ನImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 18, 2026 | 10:39 AM

Share

ಮುಖ್ಯಾಂಶಗಳು

  • ಚಿನ್ನದ ಬೆಲೆ ಮಂಗಳವಾರ ಗ್ರಾಮ್​ಗೆ 20 ರೂ ಹೆಚ್ಚಿದೆ.
  • 22 ಕ್ಯಾರಟ್ ಚಿನ್ನದ ಬೆಲೆ 14,270 ರೂನಿಂದ 14,290 ರೂಗೆ ಏರಿದೆ.
  • ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ.

ನವದೆಹಲಿ, ಆಗಸ್ಟ್ 18: ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಸೋಮವಾರ ಗ್ರಾಮ್​ಗೆ 50 ರೂ ಹೆಚ್ಚಿದ್ದ ಬಂಗಾರದ ದರ (Gold Price) ಇವತ್ತು 20 ರೂ ಹೆಚ್ಚಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದರ ಬೆಲೆಯಲ್ಲಿ 275 ರೂಗಳಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ಮತ್ತು ಸಿಲ್ವರ್ ಬೆಲೆಗಳು ಇವತ್ತು ಇಳಿಕೆಯ ಹಾದಿಯಲ್ಲಿದ್ದರೂ, ನಿನ್ನೆಯ ಬೆಲೆಗೆ ಹೋಲಿಸಿದರೆ ಅಲ್ಪ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 18ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,589
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,290
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,692
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,290 ರೂ
  • ಚೆನ್ನೈ: 14,290 ರೂ
  • ಮುಂಬೈ: 14,290 ರೂ
  • ದೆಹಲಿ: 14,305
  • ಕೋಲ್ಕತಾ: 14,290 ರೂ
  • ಕೇರಳ: 14,290 ರೂ
  • ಅಹ್ಮದಾಬಾದ್: 14,295 ರೂ
  • ಜೈಪುರ್: 14,305
  • ಲಕ್ನೋ: 14,305
  • ಭುವನೇಶ್ವರ್: 14,290 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 141.27 ಡಾಲರ್ (13,513 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.097 ಡಾಲರ್ (200 ರುಪಾಯಿ)

ಇದನ್ನೂ ಓದಿ: ಅನಿವಾಸಿ ಭಾರತೀಯರ ಎಫ್​ಸಿಎನ್​ಆರ್ ಠೇವಣಿಗಳು: ಗಡುವನ್ನು ಒಂದು ತಿಂಗಳು ಹಿಂದೂಡಿದ ಆರ್​ಬಿಐ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,589 ರುಪಾಯಿ
  • ಮಲೇಷ್ಯಾ: 592 ರಿಂಗಿಟ್ (13,971 ರುಪಾಯಿ)
  • ದುಬೈ: 530.75 ಡಿರಾಮ್ (13,827 ರುಪಾಯಿ)
  • ಅಮೆರಿಕ: 145.50 ಡಾಲರ್ (13,921 ರುಪಾಯಿ)
  • ಸಿಂಗಾಪುರ: 191.30 ಸಿಂಗಾಪುರ್ ಡಾಲರ್ (14,318 ರುಪಾಯಿ)
  • ಕತಾರ್: 532.50 ಕತಾರಿ ರಿಯಾಲ್ (13,975 ರೂ)
  • ಸೌದಿ ಅರೇಬಿಯಾ: 547 ಸೌದಿ ರಿಯಾಲ್ (13,938 ರುಪಾಯಿ)
  • ಓಮನ್: 56.55 ಒಮಾನಿ ರಿಯಾಲ್ (14,052 ರುಪಾಯಿ)
  • ಕುವೇತ್: 44.12 ಕುವೇತಿ ದಿನಾರ್ (13,604 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Tue, 18 August 26

Follow Us