AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಬಿಎ ನಿರ್ಲಕ್ಷ್ಯಕ್ಕೆ ವಾಹನ ಸವಾರರಿಗೆ ಪ್ರಾಣಸಂಕಟ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ

ಜಿಬಿಎ ನಿರ್ಲಕ್ಷ್ಯಕ್ಕೆ ವಾಹನ ಸವಾರರಿಗೆ ಪ್ರಾಣಸಂಕಟ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ

ಪ್ರಸನ್ನ ಹೆಗಡೆ
|

Updated on:Jul 08, 2026 | 3:39 PM

Share

ಮುಖ್ಯಾಂಶಗಳು

  • ಜಿಬಿಎ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರಿಗೆ ಪೀಕಲಾಟ
  • ಓಕಳಿಪುರಂ ರೈಲ್ವೆ ಬ್ರಿಡ್ಜ್ ಕೆಳಗೆ ಬಾಯ್ತೆರೆದು ಕುಳಿತ ಗುಂಡಿ
  • ಗುಂಡಿಯಲ್ಲಿ ಕಾರಿನ ಚಕ್ರ ಸಿಲುಕಿ ಪರದಾಟ ನಡೆಸಿದ ಚಾಲಕ

ಬೆಂಗಳೂರಿನ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಜಿಬಿಎ ನಿರ್ಲಕ್ಷ್ಯದಿಂದಾಗಿ ಕಾರು ಚಾಲಕ ಪರದಾಡಿದ ಘಟನೆ ವರದಿಯಾಗಿದೆ. ಮಳೆ ನೀರು ಹರಿದುಹೋಗುವ ಕಬ್ಬಿಣದ ಸರಳುಗಳು ಮುರಿದುಹೋಗಿ, ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿತ್ತು. ಇದನ್ನು ಅರಿಯದ ಚಾಲಕ ಕಾರು ಚಲಾಯಿಸಿರುವ ಪರಿಣಾಮ ಟೈರ್ ಹೊಂಡದಲ್ಲಿ ಸಿಲುಕಿಕೊಂಡಿದೆ. ಮಳೆಗೆ ಹಾಕಲಾಗಿದ್ದ ಬ್ಯಾರಿಕೇಡ್ ಸಹ ಗಾಳಿಗೆ ಬಿದ್ದಿದ್ದು, ಅದನ್ನು ಸಹ ಸರಿಪಡಿಸಿಲ್ಲ ಎನ್ನಲಾಗಿದೆ.

ಬೆಂಗಳೂರು, ಜುಲೈ 08: ಜಿಬಿಎ ನಿರ್ಲಕ್ಷ್ಯದಿಂದ ಉಂಟಾಗುತ್ತಿದ್ದ ಭಾರೀ ಅನಾಹುತದಿಂದ ಕಾರು ಚಾಲಕ ಪಾರಾಗಿರುವ ಘಟನೆ ಬೆಂಗಳೂರಿನ ಓಕಳಿಪುರಂನಲ್ಲಿ ನಡೆದಿದೆ. ರಾಜೀವ್ ಗಾಂಧಿ ಅಷ್ಟ ಪಥ ರೈಲ್ವೆ ಬ್ರಿಡ್ಜ್ ಕೆಳಗಿರುವ ಗುಂಡಿಯಲ್ಲಿ ಕಾರಿನ ಚಕ್ರ ಸಿಲುಕಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೂನ್ 1ರಂದು ಇದೇ ಗುಂಡಿಯ ಬಗ್ಗೆ TV9ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದರೆ ಗುಂಡಿ ಬಗ್ಗೆ ನಿರ್ಲಕ್ಷ್ಯವನ್ನು ಜಿಬಿಎ ಮುಂದುವರಿಸಿದ ಪರಿಣಾಮ, ಅನಾಹುತಗಳು ನಡೆಯುತ್ತಲೇ ಇವೆ. ಇನ್ನೆಷ್ಟು ಅನಾಹುತಗಳಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತಕ್ಷಣ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jul 08, 2026 03:31 PM

Follow Us