GBA
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದರ ಆಡಳಿತವನ್ನು ಪುನರ್ ರಚಿಸಿ ಕರ್ನಾಟಕ ಸರ್ಕಾರ 2025ರ ಸೆಪ್ಟೆಂಬರ್ 2 ರಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಆಡಳಿತ ಜಾರಿಗೊಳಿಸಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಐದು ಹೊಸ ಪಾಲಿಕೆಗಳನ್ನು ರಚನೆ ಮಾಡಲಾಗಿದ್ದು, ಬಿಬಿಎಂಪಿಯ ಮುಖ್ಯ ಕಚೇರಿ ಗ್ರೇಟರ್ ಬೆಂಗಳೂರು ಅಥಾರಿಟಿ ಪ್ರಧಾನ ಕಚೇರಿಯಾಗಿ ಬದಲಾಗಿದೆ. ಉಳಿದಂತೆ ಐದು ಭಾಗಗಳಾಗಿ ಗುರುತಿಸಲಾಗಿದ್ದು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ನಗರಗಳಾಗಿ ವಿಭಜಿಸಲಾಗಿದೆ. ಐಎಎಸ್, ಐಪಿಎಸ್ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯ ಸ್ವರೂಪಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಮಾಡಲಾಗಿದ್ದು ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಕೇಂದ್ರ ಹಣಕಾಸು ಸಚಿವರು ಸೇರಿ 73 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜಿಬಿಎ ಸದಸ್ಯರಾಗಿ ಬೆಂಗಳೂರಿನ ಮೂವರು ಸಂಸದರು, ಬೆಂಗಳೂರು ವ್ಯಾಪ್ತಿಯ ಶಾಸಕರನ್ನು ನೇಮಿಸಲಾಗಿದೆ.
5 ಪಾಲಿಕೆಗಳಿಂದ ಜಿಬಿಎ ಆರ್ಥಿಕ ದಿವಾಳಿ! ಅಂಕಿಅಂಶ ಸಹಿತ ಕಾರಣ ಬಿಚ್ಚಿಟ್ಟ ಬಿಜೆಪಿ ಮುಖಂಡ, ಸಿಎಂಗೆ ಪತ್ರ
5 ಹೊಸ ಬೆಂಗಳೂರು ಮಹಾನಗರ ಪಾಲಿಕೆಗಳ ರಚನೆಯಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿದ ಸಿಬ್ಬಂದಿ ವೇತನ ಮತ್ತು ನಿರ್ವಹಣಾ ವೆಚ್ಚಗಳು ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತೆ ಮಾಡಿ, ಬೆಂಗಳೂರಿನ ಭವಿಷ್ಯಕ್ಕೆ ದೊಡ್ಡ ಸವಾಲಾಗಲಿದೆ ಎಂದು ಅವರು ಹೇಳಿದ್ದಾರೆ.
- Shivaraj
- Updated on: Dec 1, 2025
- 12:01 pm
ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ
ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಹೊರತುಪಡಿಸಿ, ರಾಜ್ಯದ 18 ಮಹಾನಗರ ಪಾಲಿಕೆಗಳಲ್ಲಿನ ಆರೋಗ್ಯಾಧಿಕಾರಿ ಹುದ್ದೆಗಳನ್ನು ರದ್ದುಪಡಿಸಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯೂ ಇದರಲ್ಲಿ ಸೇರಿದ್ದು, ಈ ಹುದ್ದೆಗಳನ್ನು ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸೀನಿಯರ್ ಪ್ರೋಗ್ರಾಮರ್ ಮತ್ತು ಆಡಳಿತಾಧಿಕಾರಿ ಹುದ್ದೆಗಳಾಗಿ ಮರುನಾಮಕರಣ ಮಾಡಲಾಗಿದೆ. ಆರೋಗ್ಯ ವಿಭಾಗದ ಕಾರ್ಯಗಳು ಇಂಜಿನಿಯರ್ಗಳ ಅಧೀನದಲ್ಲಿ ಮುಂದುವರಿಯಲಿದೆ ಎಂದು ಹೇಳಲಾಗಿದೆ.
- Sanjayya Chikkamath
- Updated on: Dec 1, 2025
- 9:45 am
ಬೆಂಗಳೂರಿನಲ್ಲಿ ಕಸಕ್ಕೆ ಬೆಂಕಿ ಹಚ್ಚಿದರೆ ಕ್ರಿಮಿನಲ್ ಕೇಸ್, ಒಂದು ವರ್ಷ ಜೈಲು: BSWML ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ
ಮನೆಯ ಕಸವನ್ನು ರಸ್ತೆಗೆ ತಂದು ಸುರಿಯುತ್ತಿದ್ದವರ ಮನೆ ಬಾಗಿಲಿಗೆ ಹೋಗಿ ಕಸವನ್ನು ಸುರಿದು ದಂಡ ಹಾಕುತ್ತಿದ್ದ ಅಧಿಕಾರಿಗಳು, ಇದೀಗ ಕಸಕ್ಕೆ ಬೆಂಕಿ ಹಾಕುವವರ ಮೇಲೆ ಎಫ್ಐಆರ್ ಫೈಲ್ ಮಾಡಿ ಜೈಲಿಗೆ ಕಳಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ (BSWML) ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
- Kiran Surya
- Updated on: Nov 28, 2025
- 7:54 am
ಬೆಂಗಳೂರಿನಲ್ಲಿ ನೀರಿನ ಬಿಲ್ ಬಾಕಿದಾರರಿಗೆ ಗುಡ್ ನ್ಯೂಸ್, ಸಚಿವ ಸಂಪುಟ ಮಹತ್ವದ ತೀರ್ಮಾನ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಗುಡ್ನ್ಯೂಸ್ವೊಂದು ಸಿಕ್ಕಿದೆ. ನೀರಿನ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ದಂಡ , ಬಡ್ಡಿ ಮತ್ತು ಇತರ ಶುಲ್ಕಗಳಲ್ಲಿ ಶೇ.100ರಷ್ಟು ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾದ್ರೆ, ಇದು ಯಾರಿಗೆಲ್ಲಾ ಅನ್ವಯಿಸಲಿದೆ ಎನ್ನುವ ವಿವರ ಇಲ್ಲಿದೆ.
- Ramesh B Jawalagera
- Updated on: Nov 27, 2025
- 7:35 pm
ಇದು ರಸ್ತೆಯೋ ಅಥವಾ ಡಂಪಿಂಗ್ ಯಾರ್ಡೋ?: ಜನರ ಸಮಸ್ಯೆ ಕೇಳೋರ್ಯಾರು?
ಸರ್ವಜ್ಞನಗರ ಮತ್ತು ಪುಲಕೇಶಿನಗರಗಳಲ್ಲಿ ಕಸದ ರಾಶಿಗಳು ತುಂಬಿವೆ. ಒಂದು ತಿಂಗಳಿಂದ ಕಸ ಸಂಗ್ರಹಿಸದ ಜಿಬಿಎ ವಿರುದ್ಧ ನಾಗರಿಕರು ಆಕ್ರೋಶಗೊಂಡಿದ್ದಾರೆ. ಶಾಸಕರಾದ ಕೆ.ಜೆ. ಜಾರ್ಜ್ ಮತ್ತು ಎ.ಸಿ. ಶ್ರೀನಿವಾಸ್ ನಡುವಿನ ಕ್ಷೇತ್ರದ ವ್ಯಾಪ್ತಿ ಗೊಂದಲದಿಂದ ಸಮಸ್ಯೆ ಉಲ್ಬಣಿಸಿದ್ದು, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರಾತ್ರಿ ವೇಳೆಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
- Prasanna Hegde
- Updated on: Nov 25, 2025
- 7:47 pm
ಗ್ರೇಟರ್ ಬೆಂಗಳೂರು ಅಥಾರಿಟಿಯ 5 ಪಾಲಿಕೆಗಳ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ
ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಬಳಿಕ ಜಿಬಿಎ ಚುನಾವಣೆಯ ಚರ್ಚೆ ನಡೆಯುತ್ತಿರೋ ಹೊತ್ತಲ್ಲೇ ಬೆಂಗಳೂರಿನ ಐದು ಪಾಲಿಕೆಗಳ ಹೊಸ ವಾರ್ಡ್ ರಚನೆ ಅಂತಿಮಗೊಳಿಸಿರೋ ಸರ್ಕಾರ, ಇದೀಗ ಅಂತಿಮ ವಾರ್ಡ್ ಪಟ್ಟಿ ರಿಲೀಸ್ ಮಾಡಿದೆ. ಸದ್ಯ ಜಿಬಿಎ ವ್ಯಾಪ್ತಿಯಲ್ಲಿ 369 ವಾರ್ಡ್ ರಚನೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇತ್ತ ಜಿಬಿಎ ಚುನಾವಣೆಯ ಚರ್ಚೆ ಹೊತ್ತಲ್ಲೇ ವಾರ್ಡ್ ಪುನರ್ ವಿಂಗಡನೆ ಮಾಡಿರೋದು ಜಿಬಿಎ ವ್ಯಾಪ್ತಿಯಲ್ಲಿ ಕುತೂಹಲ ಕೆರಳಿಸಿದೆ.
- Shanthamurthy
- Updated on: Nov 20, 2025
- 10:44 pm
ಬೆಂಗಳೂರು ಆಸ್ತಿ ಮಾಲೀಕರಿಗೆ ಜಿಬಿಎ ಗುಡ್ನ್ಯೂಸ್: ಫೇಸ್ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್ಲೈನ್ ಇ-ಖಾತಾ ಜಾರಿ
ಬೃಹತ್ ಬೆಂಗಳೂರು ಪ್ರಾಧಿಕಾರವು ಆಸ್ತಿ ಮಾಲೀಕರಿಗೆ ಇ-ಖಾತಾ ನೋಂದಣಿ ಸಮಸ್ಯೆಗಳನ್ನು ನಿವಾರಿಸಲು ಫೇಸ್ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದ್ದು, ದಾಖಲೆ ಪರಿಶೀಲನೆ ಸುಲಭವಾಗಲಿದೆ. ಆಸ್ತಿ ಮಾಲೀಕರು ಸುಲಭವಾಗಿ ಮತ್ತು ತ್ವರಿತವಾಗಿ ಇ-ಖಾತಾ ಪಡೆಯಲು ಇದು ಸಹಾಯಕವಾಗಲಿದೆ.
- Shanthamurthy
- Updated on: Nov 12, 2025
- 9:25 pm
ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಾರಣ ಏನು?
ಆರ್. ಆರ್. ನಗರ ರಸ್ತೆ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಜಿಬಿಎ ಕಚೇರಿ ಹಾಗೂ ನಿವೃತ್ತ ಎಂಜಿನಿಯರ್ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. 126 ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕೆಲಸ ಮತ್ತು ಕೆಲಸ ಮಾಡದೆಯೇ ಬಿಲ್ ಪಾವತಿ ಮಾಡಿರುವ ಆರೋಪಗಳಿವೆ. ದಕ್ಷಿಣ, ಉತ್ತರ, ಪಶ್ಚಿಮ ಪಾಲಿಕೆಗಳ ವ್ಯಾಪ್ತಿಯಲ್ಲೂ ತನಿಖೆ ನಡೆದಿದೆ. 250 ಕೋಟಿ ಮೌಲ್ಯದ ಹಗರಣದ ತನಿಖೆಗಾಗಿ ಒಟ್ಟು 12 ಕಡೆಗಳಲ್ಲಿ ರೇಡ್ ನಡೆಸಲಾಗಿದೆ.
- Prasanna Hegde
- Updated on: Nov 11, 2025
- 2:36 pm
ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಡೆಡ್ಲೈನ್ ಅಂತ್ಯ! ಅಂಕಿ ಅಂಶ ಬಿಚ್ಚಿಡದ ಜಿಬಿಎ
Bengaluru potholes; ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಉಳಿದುಕೊಂಡಿವೆ. ಜಿಬಿಎ ಐದು ತಂಡಗಳನ್ನು ರಚಿಸಿ 18,000 ಗುಂಡಿಗಳನ್ನು ಮುಚ್ಚಿರುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ ಪರಿಹಾರ ಕಲ್ಪಿಸಿಲ್ಲ. ವಯಸ್ಸಾದವರು, ಗರ್ಭಿಣಿಯರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವುದು ಅಪಾಯಕಾರಿಯಾಗಿದೆ. ಜಿಬಿಎ ಸರಿಯಾದ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ.
- Ganapathi Sharma
- Updated on: Nov 10, 2025
- 10:24 am
ಬೆಂಗಳೂರಿಗರೇ ಗಮನಿಸಿ: ಈ ರಸ್ತೆಗಳಲ್ಲಿ ಇಂದು ಸಂಚಾರ ಬದಲಾವಣೆ
ಇಂದು (ನ.7) ಮಧ್ಯಾಹ್ನ 3 ಗಂಟೆಗೆ ಬೊಮ್ಮನಹಳ್ಳಿ ಜಂಕ್ಷನ್ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿರುವ ಕಾರಣ ಕೆಲವು ರಸ್ತೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ವಾಹನ ಸವಾರರು ಸಹಕರಿಸಲು ಮನವಿ ಮಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
- Prasanna Hegde
- Updated on: Nov 7, 2025
- 9:30 am