AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕು ನಾಯಿಗಳಿಗೆ ಹೊಸ ರೂಲ್ಸ್ : ಇದನ್ನು ಮೀರಿದ್ರೆ ಮಾಲೀಕರ ಮೇಲೆ ಬೀಳುತ್ತೆ ಕೇಸ್

ದಿನದಿಂದ ದಿನಕ್ಕೆ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಾಡಿವಾಣ ಹಾಕಲು ಜಿಬಿಎಯಿಂದ ಅನೇಕ ಕಸರತ್ತು ಮಾಡಲಾಗಿದೆ. ಇದರ ಬೆನ್ನಲೇ ಶ್ವಾನ ಪ್ರಿಯರಿಗೆ ಮತ್ತೆ ಜಿಬಿಎ ಬಿಗ್ ಶಾಕ್ ಕೊಟ್ಟಿದೆ. ಸಾಕು ನಾಯಿಗಳಿಗಾಗಿ ಇನ್ಮುಂದೆ ಹೊಸ ರೂಲ್ಸ್ ಜೊತೆಗೆ ಲೈಸೆನ್ಸ್ ಪಡೆಯೋಕೆ ಸೂಚನೆ ನೀಡಿದ್ದು, ಪಾಲಿಕೆಯ ಬೈಲಾ ಉಲ್ಲಂಘಿಸಿ ನಾಯಿ ಸಾಕಿದ್ರೆ ಜೈಲೇ ಗತಿ.

ಸಾಕು ನಾಯಿಗಳಿಗೆ ಹೊಸ ರೂಲ್ಸ್ : ಇದನ್ನು ಮೀರಿದ್ರೆ ಮಾಲೀಕರ ಮೇಲೆ ಬೀಳುತ್ತೆ ಕೇಸ್
Pet Dogs
ರಮೇಶ್ ಬಿ. ಜವಳಗೇರಾ
|

Updated on:Feb 11, 2026 | 10:22 PM

Share

ಬೆಂಗಳೂರು, (ಫೆಬ್ರವರಿ 11): ಈಗಾಗಲೇ ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ (street dog) ಹಾವಳಿಗೆ ಹೆಚ್ಚಾಗಿದ್ದು,  ಬ್ರೇಕ್ ಹಾಕಲು ಸುಪ್ರೀಂಕೋರ್ಟ್ (Supreme Court)  ಕೂಡ ಕೆಲ ಮಾನದಂಡಗಳನ್ನು ಅನುಸರಿಸಲು ಸೂಚನೆ ನೀಡಿದೆ. ಹೀಗಾಗಿ ಸಾಕು ನಾಯಿಗಳಿಗೆ ಹೊಸ ರೊಲ್ಸ್ ಜಾರಿಮಾಡಿದ್ದು, ಜಿಬಿಎ ಮುಖ್ಯ ಅಯುಕ್ತರು 5 ನಗರಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ. ಇನ್ನೂ ಸಾಕು ನಾಯಿಗಳ (Pet Dogs) ಸಾಕುವುದಕ್ಕೆ ಅಂತ ಪ್ರಾಣಿ ಹಿಂಸೆ 1960 ರ ಕಾಯ್ದೆ ಪ್ರಕಾರ ಕೆಲ ಷರತ್ತುಗಳನ್ನು ವಿಧಿಸಿ ಸಾರ್ವಜನಿಕರು ಮನೆಯಲ್ಲಿ ನಾಯಿ ಸಾಕುವುದಕ್ಕೆ ನಿಯಮ ಜಾರಿಗೆ ತರಲು ಜಿಬಿಎ ಮುಂದಾಗಿದೆ.

ಏನೇನು ಹೊಸ ರೂಲ್ಸ್

ಇನ್ನೂ ಹೊಸ ಕಾಯ್ದೆಯಲ್ಲಿ ಸಾಕು ಶ್ವಾನಗಳ ಸಾಕುವುದಕ್ಕೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕು ಹಾಗೂ ವಾರ್ಷಿಕವಾಗಿ ಜಿಬಿಎಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಿ ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕು. ಹಾಗೆ ಕ್ರೂರ ಸ್ವಭಾವದ ನಾಯಿಗಳ ಸಾಕುವಿಕೆಗೆ ನಿಷೇಧ ಹೇರಲಾಗಿದೆ. ಇನ್ನು ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಕೆ ಮಾಡಿಸಿರಬೇಕು. ನಾಯಿಗೆ ರೆಬೀಸ್ ಲಸಿಕೆ ಮತ್ತು ಲಸಿಕೆ ಹಾಕಿದ ಬಗ್ಗೆ ನೊಂದಾಯಿತ ಪಶು ವೈಧ್ಯರಿಂದ ದೃಢೀಕರಣ ಹೊಂದಿರಬೇಕು.

ಇದನ್ನೂ ಓದಿ: GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ

ಮತ್ತೋಂದು ಕಡೆ ಜಿವಿಎ ಅದೇಶದ ಬೆನ್ನಲೇ ಶ್ವಾನ ಪ್ರಿಯರರು ಅಕ್ರೋಶವನ್ನ ಹೊರಹಾಕುತ್ತಿದ್ದಾರೆ.ಏಕೆಂದ್ರೆ ಮನೆಯಲ್ಲಿ ಮಕ್ಕಳ ರೀತಿಯಲ್ಲಿ ಶ್ವಾನಗಳನ್ನು ಪಾಲನೆ,ಪೋಷಣೆ ಮಾಡುತ್ತಿದ್ದೇವೆ. ಕೆಲವೊಂದು ಮನೆಯಲ್ಲಿ 7-8 ನಾಯಿಗಳಿರುತ್ತೆ. ಅವುಗಳನ್ನ ಮಕ್ಕಳಂತೆ ಪ್ರೀತಿಸುತ್ತೇವೆ. ಕೂಡಲೇ ಈ ರೀತಿಯ ಅದೇಶ ಹಿಂಪಡೆಯಬೇಕು ಇಲ್ಲವದರೇ ಜಿಬಿಎಯ ಆಯುಕ್ತರ ವಿರುದ್ದ ಪ್ರತಿಭಟನೆ ಮಾಡುತ್ತವೆ ಎಂದು ಅಕ್ರೋಶವನ್ನ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ನಾಯಿಗಳ ನಿಷೇಧ ಮಾಡಬೇಕು ಎಂದು ಕಾಯ್ದೆಯಲ್ಲಿ ನಮೂದಿಸಲು ಮುಂದಾಗಿದೆ. ಮತ್ತೊಂದು ಕಡೆ ಜಿಬಿಎ ಹೊಸ ನಿಯಮವನ್ನು ನಿರಾಕರಿಸಲು ಪಾಣಿ ಪ್ರಿಯರ ಕೋರ್ಟ್ ಮೇಟ್ಟಿಲೇರಲು ಸಜ್ಜಾಗುತ್ತಿದ್ದಾರೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Published On - 10:22 pm, Wed, 11 February 26

Follow Us
ಪ್ರಪೋಸ್ ಮಾಡಿದ ಯುವಕನ ಮೇಲೆ ಟೀ ಟ್ರೇ ಎಸೆದ ಯುವತಿ ಆಮೇಲೇನಾಯ್ತು ನೋಡಿ
ಪ್ರಪೋಸ್ ಮಾಡಿದ ಯುವಕನ ಮೇಲೆ ಟೀ ಟ್ರೇ ಎಸೆದ ಯುವತಿ ಆಮೇಲೇನಾಯ್ತು ನೋಡಿ
ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು?
ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು?
ಇಂದು ಈ ರಾಶಿಯವರಿಗೆ ದೂರದ ಪ್ರಯಾಣ ಯೋಗ
ಇಂದು ಈ ರಾಶಿಯವರಿಗೆ ದೂರದ ಪ್ರಯಾಣ ಯೋಗ
ಕೊಲಂಬಿಯಾದಲ್ಲಿ ಭಾರೀ ದುರಂತ; 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ
ಕೊಲಂಬಿಯಾದಲ್ಲಿ ಭಾರೀ ದುರಂತ; 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು