AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ

Prabhas next movie: ಪ್ರಭಾಸ್ ‘ಫೌಜಿ’, ‘ಸ್ಪಿರಿಟ್’ ‘ಕಲ್ಕಿ 2’ ಮತ್ತು ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇವುಗಳ ಜೊತೆಗೆ ಒಂದು ಪೌರಾಣಿಕ ಕತೆ ಆಧರಿತ ಸೂಪರ್ ಹೀರೋ ಸಿನಿಮಾನಲ್ಲಿ ಪ್ರಭಾಸ್ ನಟಿಸಬೇಕಿತ್ತು. ಆದರೆ ಆ ಸಿನಿಮಾ ನಿಂತು ಹೋಗಿದೆ. ಅದಕ್ಕೆ ಪರೋಕ್ಷ ಕಾರಣ ರಿಷಬ್ ಶೆಟ್ಟಿ ಎನ್ನಲಾಗುತ್ತಿದೆ. ಅದು ಹೇಗೆ?

ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ
Prabhas Varma
ಮಂಜುನಾಥ ಸಿ.
|

Updated on: Feb 20, 2026 | 5:25 PM

Share

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಮಾತ್ರವಲ್ಲದೆ ಫ್ಲಾಪ್ ಸಹ ಆಗಿದೆ. ಇದಾದ ಬಳಿಕ ಪ್ರಭಾಸ್ ಎದುರು ಒಳ್ಳೆಯ ಸಿನಿಮಾಗಳ ಲೈನ್ ಅಪ್ ಇದೆ. ‘ಫೌಜಿ’, ‘ಸ್ಪಿರಿಟ್’ ‘ಕಲ್ಕಿ 2’ ಮತ್ತು ‘ಸಲಾರ್ 2’ ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇವುಗಳ ಜೊತೆಗೆ ಒಂದು ಪೌರಾಣಿಕ ಕತೆ ಆಧರಿತ ಸೂಪರ್ ಹೀರೋ ಸಿನಿಮಾನಲ್ಲಿ ಪ್ರಭಾಸ್ ನಟಿಸಬೇಕಿತ್ತು. ಆದರೆ ಆ ಸಿನಿಮಾ ನಿಂತು ಹೋಗಿದೆ. ಅದಕ್ಕೆ ಪರೋಕ್ಷ ಕಾರಣ ರಿಷಬ್ ಶೆಟ್ಟಿ ಎನ್ನಲಾಗುತ್ತಿದೆ. ಅದು ಹೇಗೆ?

‘ಹನು ಮ್ಯಾನ್’ ಸಿನಿಮಾ ಮೂಲಕ ದೊಡ್ಡ ಹಿಟ್ ಕೊಟ್ಟಿರುವ ಪ್ರಭಾಸ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶಿಸಬೇಕಿತ್ತು. ಆ ಸಿನಿಮಾಕ್ಕೆ ‘ಬಕ‘ ಎಂದು ಹೆಸರು ಸಹ ಇಡಲಾಗಿತ್ತು. ಆದರೆ ಈಗ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿ ಟಾಲಿವುಡ್​​ನಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ಪ್ರಸ್ತುತ ಟಾಲಿವುಡ್​​ನ ಹಾಟ್ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಅವರು ಪ್ರಭಾಸ್ ಅಂಥಹಾ ಸೂಪರ್ ಸ್ಟಾರ್ ಜೊತೆಗೆ ಸೂಪರ್ ಹೀರೋ ಮಾದರಿಯ ಸಿನಿಮಾ ಮಾಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು ಆದರೆ ಸಿನಿಮಾ ನಿಂತು ಹೋಗಿರುವುದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

‘ಬಕ’ ಸಿನಿಮಾ ನಿಂತು ಹೋದ ಬಗ್ಗೆ ಕೆಲವು ಭಿನ್ನ-ಭಿನ್ನ ರೀತಿಯ ಸುದ್ದಿಗಳು ಟಾಲಿವುಡ್​​ನಲ್ಲಿ ಹರಿದಾಡುತ್ತಿವೆ. ‘ಬಕ’ ಚಿತ್ರದ ಟೆಸ್ಟ್ ಶೂಟ್ ಇತ್ತೀಚೆಗೆ ನಡೆದಿದ್ದು, ಆದರೆ, ಸಿನಿಮಾದಲ್ಲಿನ ತಮ್ಮ ಲುಕ್ ಮತ್ತು ಒಟ್ಟಾರೆ ಸಿನಿಮಾದ ಲುಕ್ ಆಂಡ್ ಫೀಲ್ ಪ್ರಭಾಸ್ ಅವರಿಗೆ ಅತೃಪ್ತಿ ಉಂಟಾಗಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಅವರು ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಕಾರಣವೆಂದರೆ ಪ್ರಶಾಂತ್ ವರ್ಮಾ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ಪ್ರಾರಂಭ ಮಾಡುತ್ತಿದ್ದು, ಆ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಿರುವ ಕಾರಣ ಅವರೇ ‘ಬಕ’ ಸಿನಿಮಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್

ಪ್ರಶಾಂತ್ ವರ್ಮ ಅವರು ಪೌರಾಣಿಕ ಪಾತ್ರಗಳನ್ನು ಆಧರಿಸಿ ಕೆಲವು ಕತೆಗಳನ್ನು ರೆಡಿ ಮಾಡಿಕೊಂಡಿದ್ದು ಅವುಗಳನ್ನು ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಅವರ ಈ ಯೋಜನೆಗೆ ಒಂದರ ಮೇಲೊಂದು ಪೆಟ್ಟು ಬೀಳುತ್ತಲೇ ಇದೆ. ಈ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ಮಾಡಬೇಕಿದ್ದ ‘ರಾಕ್ಷಸ’ ಚಿತ್ರವು ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ ರದ್ದಾಗಿತ್ತು. ಇದಾದ ನಂತರ ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಅವರ ಪದಾರ್ಪಣೆ ಚಿತ್ರದ ಬಗ್ಗೆಯೂ ಗೊಂದಲಗಳು ಏರ್ಪಟ್ಟಿದ್ದವು. ಈಗ ಪ್ರಭಾಸ್ ಅವರಂತಹ ಪ್ಯಾನ್-ಇಂಡಿಯಾ ಸ್ಟಾರ್ ಚಿತ್ರದಿಂದ ಹೊರಬಂದಿರುವುದು ಪ್ರಶಾಂತ್ ವರ್ಮ ಅವರ ವೃತ್ತಿಜೀವನಕ್ಕೆ ಸವಾಲಾಗಿ ಪರಿಣಮಿಸಿದೆ.

‘ಬಕ’ ಸಿನಿಮಾನಲ್ಲಿ ಪ್ರಭಾಸ್ ಅವರು ‘ಬಕಾಸುರ’ನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತು. ಪ್ರಶಾಂತ್ ವರ್ಮ ಅವರ ಕಲ್ಪನೆಯ ಪೌರಾಣಿಕ ಮತ್ತು ಆಧುನಿಕ ಸ್ಪರ್ಶದ ಈ ಕಥೆಯ ಮೇಲೆ ಅಭಿಮಾನಿಗಳು ಬಹಳ ನಂಬಿಕೆ ಇಟ್ಟಿದ್ದರು. ಆದರೆ ‘ಹನು-ಮಾನ್’ ನಿರ್ಮಾಪಕರ ಜೊತೆಗಿನ ಬಜೆಟ್ ಕಿರಿಕ್ ಮತ್ತು ಸರಣಿ ಪ್ರಾಜೆಕ್ಟ್‌ಗಳು ಕೈತಪ್ಪುತ್ತಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ನಾನು ಸಚಿವನಾಗಿ ಚಾರ್ಜ್ ತಗೊಳ್ಳಲ್ಲ: ಕಾಂಗ್ರೆಸ್‌ಗೆ ಸಚಿವ ಮುನಿಯಪ್ಪ ಶಾಕ್
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು