Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!

Bigg Boss Kannada 8 | Shamanth Bro Gowda: ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಮತ್ತು ಶಮಂತ್​ ಮಧ್ಯೆ ಪೈಪೋಟಿ ನಡೆದಿತ್ತು. ‘ಈ ವಾರ ನಾನೇ ಔಟ್​ ಆಗೋದು ಅನಿಸುತ್ತೆ’ ಎಂದು ಶಮಂತ್​ ಆತ್ಮವಿಶ್ವಾಸ ಕಳೆದುಕೊಂಡು ಮಾತನಾಡಿದ್ದರು. ಆದರೂ ಅವರು ಸೇಫ್​ ಆಗಿದ್ದು ಅಚ್ಚರಿ!

Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!
ಶಮಂತ್​ ಬ್ರೋ ಗೌಡ
Follow us
ಮದನ್​ ಕುಮಾರ್​
| Updated By: Praveen Sahu

Updated on:Mar 26, 2021 | 5:00 PM

ಬಿಗ್​ ಬಾಸ್​ ಆಟದ ಲೆಕ್ಕಾಚಾರವೇ ಬೇರೆ. ಒಂದು ವಾರ ವೀಕ್​ ಆಗಿದ್ದವರು ಮತ್ತೊಂದು ವಾರ ಸಖತ್​ ಪರ್ಫಾಮೆನ್ಸ್​ ನೀಡಬಹುದು. ಆದರೆ ಶಮಂತ್​ ಬ್ರೋ ಗೌಡ ವಿಚಾರದಲ್ಲಿ ಈ ಲೆಕ್ಕ ಯಾಕೋ ತಪ್ಪಾಗುತ್ತಿದೆ. ಕಳೆದ ಮೂರು ವಾರದಿಂದ ಅವರು ಬೇರೆಯದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮೂರನೇ ವಾರದ ಎಲಿಮಿನೇಷನ್​ನಲ್ಲಿ ಅವರು ಮನೆಯಿಂದ ಹೊರನಡೆಯುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಜಸ್ಟ್​ ಮಿಸ್​!

ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಭಾರತಿ ಭಟ್​ ಮತ್ತು ಶಮಂತ್​ ಬ್ರೋ ಗೌಡ ಮಧ್ಯೆ ಭಾರಿ ಪೈಪೋಟಿ ನಡೆದಿತ್ತು. ಈ ಸಂದರ್ಭದಲ್ಲಿ ಯಾರು ಮನೆಯಿಂದ ಹೊರಹೋಗಬಹುದು ಎಂದು ಎಲ್ಲ ಸದಸ್ಯರಿಗೂ ಸುದೀಪ್​ ಪ್ರಶ್ನೆ ಕೇಳಿದರು. ಆಗ ಹೆಚ್ಚು ಜನರು ಶಮಂತ್​ ಹೆಸರನ್ನು ಹೇಳಿದರು. ಶಮಂತ್​ ಮನೆಯಿಂದ ಹೊರನಡೆಯಬೇಕು ಎಂಬ ಅಭಿಪ್ರಾಯ ಬಹುತೇಕರಿಂದ ಕೇಳಿಬಂತು…

ಸ್ವತಃ ಶಮಂತ್​ಗೂ ಸುದೀಪ್​ ಈ ಪ್ರಶ್ನೆ ಕೇಳಿದರು. ‘ಈ ವಾರ ನಾನೇ ಔಟ್​ ಆಗೋದು ಅನಿಸುತ್ತೆ ಸರ್​. ಯಾಕೆಂದರೆ ಎಲ್ಲರೂ ನನ್ನ ಹೆಸರನ್ನೇ ಹೇಳ್ತಾ ಇದಾರೆ’ ಎಂದು ಶಮಂತ್​ ಸಂಪೂರ್ಣ ಆತ್ಮವಿಶ್ವಾಸ ಕಳೆದುಕೊಂಡು ಮಾತನಾಡಿದರು! ಅಂದರೆ ಸ್ವತಃ ಶಮಂತ್​ಗೆ ತಮ್ಮ ಮೇಲೆ ಆತ್ಮವಿಶ್ವಾಸ ಇಲ್ಲ ಎಂಬುದು ಸಾಬೀತಾಯಿತು. ಆದರೆ ಅಂತಿಮವಾಗಿ ಎಲಿಮಿನೇಟ್​ ಆಗಿದ್ದು ಮಾತ್ರ ಗೀತಾ. ಅಷ್ಟಕ್ಕೂ ಮನೆ ಮಂದಿಗೆಲ್ಲ ಬೇಡವಾದ, ಆತ್ಮ ವಿಶ್ವಾಸವೇ ಇಲ್ಲದ ಶಮಂತ್​ ಸೇಫ್​ ಆಗಿದ್ದು ಹೇಗೆ ಎಂಬ ಅನುಮಾನ ಅನೇಕರಿಗೆ ಕಾಡುತ್ತಿದೆ…

ವೀಕ್ಷಕರು ವೋಟ್​ ಮಾಡಿದ್ದರಿಂದಾಗಿ ಶಮಂತ್​ ಸೇಫ್​ ಆಗಿದ್ದಾರೆ. ಮೂರನೇ ವಾರವೂ ಜನರು ಅವರ ಕೈ ಹಿಡಿದಿದ್ದಾರೆ. ಆದರೆ ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬುದನ್ನು ವಾಹಿನಿ ಬಹಿರಂಗ ಪಡಿಸುವುದಿಲ್ಲ. ಹಾಗಾಗಿ ಇದೊಂದು ರಹಸ್ಯವೇ ಸರಿ. ಪ್ರತಿ ಬಾರಿಯೂ ‘ಇನ್ಮೇಲೆ ನನ್ನ ಆಟ ಶುರು ಮಾಡ್ತೀನಿ’ ಎಂದು ಹೇಳುವ ಶಮಂತ್​ ಈವರೆಗೂ ಅಸಲಿ ಆಟ ಶುರು ಮಾಡಿಲ್ಲ. ಎರಡನೇ ವಾರ ಕಳಪೆ ಹಣೆಪಟ್ಟಿಯಿಂದ ಅವರು ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು. ಮುಂದೆ ಏನು ಮಾಡುತ್ತಾರೋ ಕಾದು ನೋಡಬೇಕು.

ಇದನ್ನೂ ಓದಿ: BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?

‘ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು‘

Published On - 2:29 pm, Mon, 22 March 21