ಕೊರೊನಾ ಲಸಿಕೆ ಪಡೆದ ಎಐಎಂಐಎಂ ಪಕ್ಷದ ವರಿಷ್ಠ, ಸಂಸದ ಅಸಾದುದ್ದೀನ್ ಒವೈಸಿ
AIMIM leader Asaduddin Owaisi takes Corona Vaccine: ಇಂದು ಕೊರೊನಾ ಲಸಿಕೆ ಪಡೆದ ನಂತರ ಟ್ವೀಟ್ ಮಾಡಿರುವ ಓವೈಸಿ, ಕೊರೊನಾ ಲಸಿಕೆ ಕೊರೊನಾ ಸೋಂಕು ತಗಲುವುದರಿಂದ ರಕ್ಷಣೆ ನೀಡುತ್ತದೆ. ಅಷ್ಟೇ ಅಲ್ಲದೇ, ಇತರರಿಗೂ ಸೋಂಕು ಹರಡದಂತೆ ರಕ್ಷಣೆ ನೀಡುತ್ತದೆ. ಎಲ್ಲರೂ ಆದಷ್ಟು ಬೇಗ ಕೊರೊನಾ ಲಸಿಕೆ ಪಡೆಯಬೇಕು. ಅಲ್ಲಾಹ್ ನಮ್ಮನ್ನು ಈ ಪಿಡುಗಿನಿಂದ ಪಾರು ಮಾಡಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್: ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಒವೈಸಿ ಹೈದರಾಬಾದ್‌ನ ಕಂಚನ್‌ಬಾಗ್ ಆಸ್ಪತ್ರೆಯಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ಪಡೆದಿದ್ದಾರೆ. ಇತ್ತೀಚಿಗೆ ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಿಸಲಾಗಿದ್ದು, ಇಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಓವೈಸಿ ಕೊರೊನಾ ಲಸಿಕೆ ಪಡೆದಿದ್ದಾರೆ. ಭಾರತ ನಿರ್ಮಿತ ಕೊರೊನಾ ಲಸಿಕೆ ಕೊವಿಶೀಲ್ಡ್ ಕುರಿತು ಪ್ರಶ್ನೆ ಎತ್ತಿದ್ದ ಅಸಾದುದ್ದೀನ್ ಓವೈಸಿ, ತಾವು ಪಡೆದ ಕೊರೊನಾ ಲಸಿಕೆ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ.
ಇಂದು ಕೊರೊನಾ ಲಸಿಕೆ ಪಡೆದ ನಂತರ ಟ್ವೀಟ್ ಮಾಡಿರುವ ಓವೈಸಿ, ಕೊರೊನಾ ಲಸಿಕೆ ಕೊರೊನಾ ಸೋಂಕು ತಗಲುವುದರಿಂದ ರಕ್ಷಣೆ ನೀಡುತ್ತದೆ. ಅಷ್ಟೇ ಅಲ್ಲದೇ, ಇತರರಿಗೂ ಸೋಂಕು ಹರಡದಂತೆ ರಕ್ಷಣೆ ನೀಡುತ್ತದೆ. ಎಲ್ಲರೂ ಆದಷ್ಟು ಬೇಗ ಕೊರೊನಾ ಲಸಿಕೆ ಪಡೆಯಬೇಕು. ಅಲ್ಲಾಹು ನಮ್ಮನ್ನು ಈ ಪಿಡುಗಿನಿಂದ ಪಾರು ಮಾಡಲಿ’ ಎಂದು ಟ್ವೀಟ್ ಮಾಡಿದ್ದಾರೆ.
Alhamdulilah took the first dose of #vaccine today. Vaccination not only helps protect oneself from #COVIDー19 but also reduces risk for all. I urge everyone eligible to schedule an appointment at the earliest & get themselves vaccinated. May Allah protect us from the pandemic pic.twitter.com/9CjHMVn2Ji
— Asaduddin Owaisi (@asadowaisi) March 22, 2021
ಮಾರ್ಚ್ 1 ರಂದು ಪ್ರಧಾನಿ ನರೇಂದ್ರ ಮೋದಿ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಪಡೆದಿದ್ದರು. ಪ್ರಧಾನಿಯವರು ಕಾಕತಾಳೀಯವಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯ ಸಾಮರ್ಥ್ಯದ ಕುರಿತು ಕೆಲ ದೇಶಗಳು ಅನುಮಾನ ವ್ಯಕ್ತಪಡಿಸಿವೆ. ಇದರ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅಸಾದುದ್ದೀನ್ ಓವೈಸಿ ಟೀಕೆ ನಡೆಸಿದ್ದರು.
As per Germany govt, #Covishield isn’t as effective for people aged 64 & above as it’s for people aged b/w 18-64. Can Govt clarify the confusion? It’s a coincidence that PM took Bharat Biotech’s COVAXIN vaccine today. However, I urge all to get vaccinated: Asaduddin Owaisi, AIMIM pic.twitter.com/6k0CajsVh0
— ANI (@ANI) March 1, 2021
ಕೊವಿಡ್-19 ವಿರುದ್ಧ ಈಗಾಗಲೇ ಎರಡು ಲಸಿಕೆಗಳಿಗೆ ಅನುಮೋದನೆ ನೀಡಿರುವ ಭಾರತದಲ್ಲಿ, ಮುಂದೆ 6ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಮಾರ್ಚ್ 13 ರಂದು ಘೋಷಣೆ ಮಾಡಿದ್ದಾರೆ. ಈವರೆಗೆ ಒಟ್ಟು 1.84 ಕೋಟಿ ಕೊವಿಡ್-19 ಲಸಿಕೆ ಡೋಸ್ಗಳನ್ನು ಜನರಿಗೆ ನೀಡಲಾಗಿದೆ. 23 ಕೋಟಿ ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಕೊರೊನಾ ವಿರುದ್ಧ 2 ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. 71 ದೇಶಗಳಿಗೂ ಲಸಿಕೆ ಒದಗಿಸಿದೆ. ಕೆನಡಾ, ಬ್ರೆಜಿಲ್ ಹಾಗೂ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೂ ಭಾರತ ಕೊರೊನಾ ಲಸಿಕೆ ಕಳುಹಿಸಿದೆ ಎಂದು ರಾಷ್ಟ್ರೀಯ ಪರಿಸರ ಆರೋಗ್ಯ ಅಧ್ಯಯನ ಸಂಸ್ಥೆಯ ಗ್ರೀನ್ ಕ್ಯಾಂಪಸ್ ಉದ್ಘಾಟಿಸಿ ಇತ್ತೀಚಿಗೆ ಹರ್ಷ ವರ್ಧನ್ ಮಾತನಾಡಿದ್ದರು.
ಅರ್ಧ ಡಜನ್ಗೂ ಹೆಚ್ಚು ಲಸಿಕೆಗಳು ಭಾರತದಲ್ಲಿ ಬರಲಿವೆ ಎಂದು ಹೇಳಿದ ಅವರು ಶನಿವಾರ ಬೆಳಗಿನವರೆಗೆ ಒಟ್ಟು 1.84 ಕೋಟಿ ಲಸಿಕೆ ಡೋಸ್ಗಳನ್ನು ವಿತರಿಸಲಾಗಿದೆ. ಮಾರ್ಚ್ 12 ರಂದು 20 ಲಕ್ಷ ಜನರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನವ ಭಾರತವನ್ನು ನಿರ್ಮಾಣ ಮಾಡಲು, ಭಾರತವನ್ನು ವಿಶ್ವ ಗುರುವಾಗಿಸಲು ಬಯಸಿದ್ದಾರೆ. ಲಸಿಕೆ, ವಿಜ್ಞಾನವನ್ನು ಗೌರವಿಸಿ. ಲಸಿಕೆ ವಿಚಾರದಲ್ಲಿ ರಾಜಕೀಯ ತರುವುದನ್ನು ಕೊನೆಗೊಳಿಸಬೇಕಾಗಿದೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ನಾವು ಈ ದೂರ ಕ್ರಮಿಸಿದ್ದೇವೆ. 2020 ಕೊವಿಡ್-19 ಹೊರತಾಗಿ ವಿಜ್ಞಾನ ಮತ್ತು ವಿಜ್ಞಾನಿಗಳ ವರ್ಷವೂ ಆಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದರು.
ಇದನ್ನೂ ಓದಿ: ಪಾಕ್ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಕೊರೊನಾ ಲಸಿಕೆ ನೀಡಲು ಬೇಡಿಕೆಯಿಟ್ಟ ರಾಕೇಶ್ ಟಿಕಾಯತ್