ಪಾಕ್​ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!

ಪಾಕಿಸ್ತಾನಕ್ಕೆ ಮೇಡ್ ಇನ್ ಇಂಡಿಯಾ ಲಸಿಕೆ ತಲುಪಿದ್ದು, ಅಲ್ಲಿನ ಪ್ರಜೆಗಳಿಗೆ ಕೊರೊನಾ ಲಸಿಕೆ ವಿತರಿಸುವ ಕಾರ್ಯವನ್ನು ಪಾಕಿಸ್ತಾನ ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಭಾರತದಲ್ಲಿ ಈಗಾಗಲೇ ಮತ್ತೊಂದು ಹಂತದ ಲಸಿಕೆ ಪೂರೈಕೆ ಆರಂಭಿಸಿರುವ ಭಾರತ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 45 ವರ್ಷ ಮೇಲ್ಪಟ್ಟು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ಸಜ್ಜಾಗಿದೆ.

  • TV9 Web Team
  • Published On - 18:07 PM, 5 Mar 2021
ಪಾಕ್​ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!
ಭಾರತ-ಪಾಕಿಸ್ತಾನ

ದೆಹಲಿ: ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿವೆ. ಬೇರೆ ಬೇರೆ ದೇಶಗಳಿಗೆ ಕೊವಿಡ್​ 19 ಲಸಿಕೆ ವಿತರಿಸಿದ್ದ ಭಾರತ ಇದೀಗ ತನ್ನ ನೆರೆ ರಾಷ್ಟ್ರ ಪಾಕಿಸ್ತಾನಕ್ಕೂ ಲಸಿಕೆ ಪೂರೈಸಿದೆ. ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಿರುವ ಭಾರತ, ಗ್ಲೋಬಲ್ ಅಲೆಯನ್ಸ್ ಫಾರ್ ವ್ಯಾಕ್ಸಿನ್ ಇಮ್ಯೂನೈಜೇಶನ್ (GAVI) ಅಡಿ ಲಸಿಕೆ ನೀಡಿದೆ.

ಈ ಮೂಲಕ ಪಾಕಿಸ್ತಾನಕ್ಕೆ ಮೇಡ್ ಇನ್ ಇಂಡಿಯಾ ಲಸಿಕೆ ತಲುಪಿದ್ದು, ಅಲ್ಲಿನ ಪ್ರಜೆಗಳಿಗೆ ಕೊರೊನಾ ಲಸಿಕೆ ವಿತರಿಸುವ ಕಾರ್ಯವನ್ನು ಪಾಕಿಸ್ತಾನ ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಭಾರತದಲ್ಲಿ ಈಗಾಗಲೇ ಮತ್ತೊಂದು ಹಂತದ ಲಸಿಕೆ ಪೂರೈಕೆ ಆರಂಭಿಸಿರುವ ಭಾರತ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 45 ವರ್ಷ ಮೇಲ್ಪಟ್ಟು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ಸಜ್ಜಾಗಿದೆ. ಇದೆಲ್ಲದರ ಜೊತೆಜೊತೆಗೆ ಹಲವು ದೇಶಗಳಿಗೆ ಲಸಿಕೆ ಪೂರೈಸುತ್ತಿರುವುದರಿಂದ ಭಾರತದ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೊರೊನಾ ಮೂಲ ಹುಡುಕಾಟಕ್ಕೆ ಸಂಬಂಧಿಸಿದ ವರದಿ ತಿರಸ್ಕರಿಸಿದ WHO
ಈ ಎಲ್ಲಾ ಬೆಳವಣಿಗೆಗಳ ನಡುವೆ, ಕೊರೊನಾ ವೈರಸ್​ನ ಜಾತಕ ಹೊರ ಹಾಕಲು ನಾಲ್ಕು ತಿಂಗಳಿಂದ ಚೀನಾದಲ್ಲಿ ಕೆಲಸ ಮಾಡಿ ತಯಾರಿಸಿದ್ದ ತನ್ನದೇ ಆದ ಪ್ರಾಥಮಿಕ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (World Health Organisation) ಕಸದ ಬುಟ್ಟಿಗೆ ಎಸೆಯಲು ನಿರ್ಧರಿಸಿದೆ. ಎರಡು ವಾರಗಳ ಹಿಂದೆ ಬೀಜಿಂಗ್​ನಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ತಾನು ಕೈಗೊಂಡಿದ್ದ ಮೊದಲ ಹಂತದ ಸಂಶೋಧನೆಯ ವಿವರ ನೀಡಿದ್ದ WHO ತಂಡ ತಾವು ಇನ್ನೂ ಸಂಶೋಧನೆಯ ಕೆಲಸ ಮಾಡುವುದಿದೆ. ಇನ್ನೂ ಖಡಾಖಂಡಿತವಾಗಿ ಈ ವೈರಸ್​ ಎಲ್ಲಿಂದ ಬಂತು ಎಂದು ಹೇಳುವುದಕ್ಕೆ ಸಾಕ್ಷಾಧಾರಗಳು ಸಿಗುತ್ತಿಲ್ಲ ಎಂದು ಹೇಳಿತ್ತು.

ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹೆಸರಿನ 24 ಜನ ವಿಜ್ಞಾನಿಗಳು WHOಗೆ ಪತ್ರ ಬರೆದು ವುಹಾನ್ ವೈರಸ್​ ಎಲ್ಲಿಂದ ಬಂತು ಬಗ್ಗೆ ಹೊಸದಾಗಿ ತನಿಖೆ ಆಗಬೇಕು. ಅವರೆಲ್ಲ ಸೇರಿ ಬರೆದ ಈ ಕುರಿತು ಬರೆದ ತೆರೆದ ಪತ್ರ ಈಗ ಮಾಧ್ಯಮದ ಮುಂದೆ ಬಂದಿದೆ. ಈ 24 ವಿಜ್ಞಾನಿಗಳ ಪ್ರಕಾರ, ಎಲ್ಲ ಕಡೆಯೂ ಹೋಗಿ ಬರಲು ಮತ್ತು ಸಂಶೋಧನೆ ನಡೆಸಲು ಸ್ವಾತಂತ್ರ್ಯ ಇರಲಿಲ್ಲ ಮತ್ತು ಒಪ್ಪಿಗೆ ಸಿಗಲಿಲ್ಲ. ಎಲ್ಲಿ ವುಹಾನ್​ ವೈರಸ್​ನ ಮೂಲ ಇರಬಹುದು ಎಂದು ಊಹಿಸುತ್ತಾರೆಯೋ ಅಲ್ಲಿಗೆ ಹೋಗಲು ಮತ್ತು ಅಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿಲ್ಲ ಎಂದು ಈ ವಿಜ್ಞಾನಿಗಳ ತಂಡ ಹೇಳಿದೆ, ಎಂದು ಫೈನಾನ್​ಷಿಯಲ್​ ಟೈಮ್ಸ್​ ಮುಂತಾದ ಹಲವಾರು ಅಂತರಾಷ್ಟ್ರೀಯ ಪತ್ರಿಕೆಗಳು ಬರೆದಿವೆ. ಪ್ರಯೋಗಾಲಯದಿಂದ ಬಂದಿರಬಹುದು ಎಂಬ ಕೋನದಿಂದ ಕೂಡ ವಿವರವಾದ ಸಂಶೋಧನೆ ಆಗಲೇಬೇಕು ಎಂದು 24 ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:
WHO Covid-19 Report | ತಾನೇ ಸಿದ್ಧಪಡಿಸಿದ ಕೊವಿಡ್​ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೇರಿಕಾ ಒತ್ತಡವೋ, ಚೀನಾದ್ದೋ?

Covid-19 Origin | ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು