Imran Khan | ಬಹುಮತ ಸಾಬೀತುಪಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್; 2 ಮತ ಹೆಚ್ಚೇ ಕೊಡುಗೆಯಾಗಿ ಸಿಕ್ತು ಮಾಜಿ ಕ್ರಿಕೆಟಿಗನಿಗೆ
Pakistan Govt: ‘ಸಂಸತ್ನಲ್ಲಿ ಇಮ್ರಾನ್ ಖಾನ್ ಬಹುಮತ ಪಡೆದಿದ್ದು, ಇದೀಗ ದೇಶದ ಜನರ ಬೆಂಬಲ ಪಡೆಯುವುದು ಸರ್ಕಾರದ ಜವಾಬ್ದಾರಿ’ ಎಂದು ಪಾಕಿಸ್ತಾನ ಪ್ರಮುಖ ರಾಜಕೀಯ ಮುಖಂಡರೋರ್ವರು ಇಮ್ರಾನ್ ಖಾನ್ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಇಸ್ಲಾಮಾಬಾದ್: ವಿಶೇಷ ಅಧಿವೇಷನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ಪರ 178 ಮತಗಳು ಚಲಾವಣೆಯಾಗಿದ್ದು, ಪಾಕಿಸ್ತಾನದ ಸದ್ಯದ ಸರ್ಕಾರ ಅಪಾಯದ ತೂಗುಗತ್ತಿಯಿಂದ ಹೊರಬಂದಿದೆ. ಬಹುಮತ ಸಾಬೀತಿಗೆ 172 ಮತಗಳ ಅಗತ್ಯವಿದ್ದು, 178 ಮತಗಳನ್ನು ಪಡೆಯುವ ಮೂಲಕ ಇಮ್ರಾನ್ ಖಾನ್ ಸರ್ಕಾರ ಬಹುಮತ ಸಾಬೀತುಪಡಿಸಿದೆ. 8 ವರ್ಷಗಳ ಹಿಂದೆ 176 ಸ್ಥಾನಗಳೊಂದಿಗೆ ಅಧಿಕಾರ ಪಡೆದಿದ್ದ ಇಮ್ರಾನ್ ಖಾನ್ ಬಹುಮತ ಸಾಬೀತಿನಲ್ಲಿ ಇನ್ನೂ ಎರಡು ಹೆಚ್ಚು ಮತಗಳನ್ನು ಗಳಿಸಿದಂತಾಗಿದೆ. ಈ ವಿಷಯವನ್ನು ಉಲ್ಲೇಖಿಸಿ ಪಾಕಿಸ್ತಾನ ಸಂಸತ್ನ ಸ್ಪೀಕರ್ ಸರ್ಕಾರ ಬಹುಮತ ಪಡೆದಿರುವುದಾಗಿ ಘೋಷಿಸಿದ್ದಾರೆ.
‘ಸಂಸತ್ನಲ್ಲಿ ಇಮ್ರಾನ್ ಖಾನ್ ಬಹುಮತ ಪಡೆದಿದ್ದು, ಇದೀಗ ದೇಶದ ಜನರ ಬೆಂಬಲ ಪಡೆಯುವುದು ಸರ್ಕಾರದ ಜವಾಬ್ದಾರಿ’ ಎಂದು ಪಾಕಿಸ್ತಾನ ಪ್ರಮುಖ ರಾಜಕೀಯ ಮುಖಂಡರೋರ್ವರು ಇಮ್ರಾನ್ ಖಾನ್ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಅತಿಮುಖ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷವು ಸೋಲನುಭವಿಸಿತ್ತು. ಇಮ್ರಾನ್ ಸಂಪುಟದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರನ್ನು ಪಾಕಿಸ್ತಾನ ಸಂಸತ್ತಿನ ಪ್ರಮುಖ ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಮುಖ್ಯಸ್ಥರೂ ಆಗಿರುವ ಮಾಜಿ ಪ್ರಧಾನಿ ಸೈಯದ್ ಯೂಸುಫ್ ರಾಜಾ ಗಿಲಾನಿ ಸೋಲಿಸಿದ್ದರು. ಈ ಫಲಿತಾಂಶವು ಇಮ್ರಾನ್ ಖಾನ್ ಮತ್ತು ಅವರ ಪಿಟಿಐ ಪಕ್ಷಕ್ಕೆ ವ್ಯಾಪಕ ಹಿನ್ನಡೆ ತಂದೊಡ್ಡಿತ್ತು.ಗೌಪ್ಯ ಮತದಾನದಲ್ಲಿ ಕೆಲ ಸದಸ್ಯರು ಅಥವಾ ಮಿತ್ರಪಕ್ಷಗಳು ಪಕ್ಷಾಂತರ ಮಾಡಿರುವ ಸಾಧ್ಯತೆ ಕಂಡುಬಂದಿತ್ತು.
ಆದರೆ, ಈ ಎಲ್ಲ ಸಮಸ್ಯೆಗಳನ್ನೂ ಮೀರಿ ಇಮ್ರಾನ್ ಖಾನ್ ಸರ್ಕಾರ ಬಹುಮತ ಸಾಬೀತುಪಡಿಡಿಸದೆ. ಅಲ್ಲದೇ ತನ್ನ ಪಕ್ಷದ ಸದಸ್ಯರ ಸಂಖ್ಯೆಗಿಂತ ಎರಡು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ.
ಇದನ್ನೂ ಓದಿ: ಪಾಕ್ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!
ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್