Covid-19 Origin | ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು

ಕೊರೊನಾ ವೈರಸ್​ ಚೀನಾ ಪ್ರಯೋಗಾಲಯದಲ್ಲಿ ಹುಟ್ಟಿದ್ದು ಸತ್ಯನಾ ಎಂಬ ಬಗ್ಗೆ ಪರಿಶೀಲನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ (WHO Experts) ತಜ್ಞರು ಭೇಟಿ ನೀಡಿದ್ದರು. ಜ.14ರಿಂದಲೂ ಈ ತಜ್ಞರ ತಂಡ ಅಲ್ಲಿ ಸರ್ವೇ ಹಮ್ಮಿಕೊಂಡಿದ್ದಾರೆ.

Covid-19 Origin | ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು
ಆಹಾರ ಸುರಕ್ಷತೆ ಮತ್ತು ಪ್ರಾಣಿ ರೋಗಗಳ ತಜ್ಞ ಪೀಟರ್​ ಬೆನ್​ ಎಂಬಾರೆಕ್​
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 09, 2021 | 7:22 PM

ವುಹಾನ್: ಕೊರೊನಾ ವೈರಸ್​ ಚೀನಾದ ಲ್ಯಾಬ್​ನಲ್ಲಿ ಹುಟ್ಟಿ, ಅಲ್ಲಿಂದ ಹರಡಲು ಸಾಧ್ಯವಿಲ್ಲ. ಬಹುಶಃ ಇದು ಮನುಷ್ಯನಿಗೆ ಪ್ರಸರಣವಾಗಿದ್ದು, ಬೇರೆ ಯಾವುದೋ ಪ್ರಭೇದದ ಜೀವಿಯಿಂದ ಎಂದು World Health Organisation (ವಿಶ್ವ ಆರೋಗ್ಯ ಸಂಸ್ಥೆ-WHO)ನ ಆಹಾರ ಸುರಕ್ಷತೆ ಮತ್ತು ಪ್ರಾಣಿ ರೋಗಗಳ ತಜ್ಞ ಪೀಟರ್ ಬೆನ್ ಎಂಬಾರೆಕ್ ತಿಳಿಸಿದ್ದಾರೆ. 2019ರ ಡಿಸೆಂಬರ್​ನಲ್ಲಿ ಚೀನಾದಿಂದ ಕೊರೊನಾ ಸೋಂಕು ಪ್ರಸರಣ ಶುರುವಾಗಿತ್ತು. ಕೊರೊನಾ ಶುರುವಾಗಿದ್ದು ವುಹಾನ್​ನ ಮಾರುಕಟ್ಟೆಯಲ್ಲಿ ಎಂದು ವರದಿಯಾಗಿದ್ದರೂ, ನಂತರದ ದಿನಗಳಲ್ಲಿ ಚೀನಾದ ಲ್ಯಾಬ್​ನಲ್ಲಿ ಹುಟ್ಟಿದ್ದು ಎಂದೂ ಪ್ರತಿಪಾದಿಸಲಾಗಿತ್ತು.

ಕೊರೊನಾ ವೈರಸ್ ಚೀನಾ ಪ್ರಯೋಗಾಲಯದಲ್ಲಿ ಹುಟ್ಟಿದ್ದು ಸತ್ಯನಾ ಎಂಬ ಬಗ್ಗೆ ಪರಿಶೀಲನೆ ನಡೆಸಲು WHO ತಜ್ಞರು ಭೇಟಿ ನೀಡಿದ್ದರು. ಜ.14ರಿಂದಲೂ ಈ ತಜ್ಞರ ತಂಡ ಅಲ್ಲಿ ಸರ್ವೇ ಹಮ್ಮಿಕೊಂಡಿದ್ದು, ಇಲ್ಲಿಯವರೆಗಿನ ಸರ್ವೇಯ ಒಂದು ಮೌಲ್ಯಮಾಪನವನ್ನು ಇಂದು ವಿವರಿಸಲಾಗಿದೆ. ಈ ತಜ್ಞರ ತಂಡದಲ್ಲಿ 17 ಮಂದಿ ಚೀನಾದವರೇ ಇದ್ದರೆ, ಉಳಿದ 10 ವಿವಿಧ ದೇಶಗಳ 17 ಎಕ್ಸ್​ಪರ್ಟ್ಸ್​​ ಇದ್ದರು. ಆದರೆ ಅವರು ಇಂದು ನೀಡಿದ ಸಾರಾಂಶ ಮಾತ್ರ ಜಗತ್ತು ಏನು ನಿರೀಕ್ಷೆ ಮಾಡಿತ್ತೋ ಅದೇ ಆಗಿದೆ.. !

ಈ ಮಧ್ಯೆ ಚೀನಾ ಮತ್ತೊಮ್ಮೆ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. 2019-20ರಲ್ಲಿ 24 ಪ್ರಾಂತ್ಯಗಳ, 2600 ಪ್ರಾಣಿಗಳನ್ನು ಪಿಸಿಆರ್​ ಟೆಸ್ಟ್​​ಗೆ ಒಳಪಡಿಸಿದ್ದೇವೆ. ಇದರಲ್ಲಿ ಒಂದೇ ಒಂದು ಕೇಸ್​​ ಕೂಡ ಪಾಸಿಟಿವ್​ ಬಂದಿಲ್ಲ. ಅದರಲ್ಲೂ ಹುಬೇ ಪ್ರಾಂತ್ಯದಲ್ಲೇ 300 ಪ್ರಬೇಧದ 50,000 ಪ್ರಾಣಿಗಳನ್ನು ಪಿಸಿಆರ್​ ಟೆಸ್ಟ್​ಗೆ ಒಳಪಡಿಸಿದ್ದು, ಅಲ್ಲಿಯೂ ಸಹ ಒಂದೂ ಕೊರೊನಾ ಪಾಸಿಟಿವ್​ ಕೇಸ್​ ಇರಲಿಲ್ಲ. ಇನ್ನು ಜೆನೆಟಿಕ್​ ಟೆಸ್ಟ್ ಮಾಡಿಯೇ, ವಿವರವಾಗಿ ಅಧ್ಯಯನ ಮಾಡಬೇಕು ಎಂದೂ ಚೀನಾ ಹೇಳಿಕೊಂಡಿದೆ.

ಹಾಗೇ ಅಧ್ಯಯನಕ್ಕಾಗಿ ಭೇಟಿ ಕೊಟ್ಟ ತಂಡದಲ್ಲಿದ್ದ ಪೀಟರ್ ಬೆನ್ ಎಂಬಾರೆಕ್ ಕೂಡ ಇದನ್ನೇ ಹೇಳಿದ್ದಾರೆ. ಕೊರೊನಾ ಚೀನಾದ ಲ್ಯಾಬ್​ನಲ್ಲಿ ಹುಟ್ಟಲು ಸಾಧ್ಯವಿಲ್ಲ. ಇದು ಯಾವುದೋ ಮಧ್ಯವರ್ತಿ ಪ್ರಭೇದದ ಮೂಲಕವೇ ಪ್ರಸರಣ ಆಗಿದ್ದು ಎಂಬುದನ್ನು ನಮ್ಮ ಪ್ರಾರಂಭಿಕ ಹಂತದ ಅಧ್ಯಯನ ತಿಳಿಸುತ್ತಿದೆ. ಆದರೆ ಕೊರೊನಾ ಹುಟ್ಟಿನ ಬಗ್ಗೆ ಇನ್ನಷ್ಟು ನಿಖರ, ಸ್ಪಷ್ಟ ಮಾಹಿತಿ ಸಿಗಬೇಕೆಂದರೆ ಇನ್ನೂ ಹೆಚ್ಚಿನ ಅಧ್ಯಯನ ಬೇಕು ಎಂದೂ ಹೇಳಿದ್ದಾರೆ.

ಹಾಗೇ, ಮೊದಲು ಕೊರೊನಾ ವೈರಸ್​ಗೆ ಒಳಗಾದವರನ್ನು ಕೇಳಿದೆವು. ಅವರ್ಯಾರಿಗೂ ವಿಶೇಷವಾಗಿ ಉಲ್ಲೇಖಿಸುವಂಥ ಚಟಗಳು ಇರಲಿಲ್ಲ. ಆಹಾರ ಪದ್ಧತಿಯಲ್ಲೂ ಹೇಳಿಕೊಳ್ಳುವಂಥ ವ್ಯತ್ಯಾಸ ಇರಲಿಲ್ಲ. ಹಾಗಾಗಿ ಇದೊಂದು ಸಂಕೀರ್ಣ ವಿಷಯ ಎಂದೇ ಪರಿಗಣಿಸುತ್ತೇವೆ. ಇನ್ನೂ ಹೆಚ್ಚಿನ ಅಧ್ಯಯನವನ್ನು ಮುಂದುವರಿಸುತ್ತೇವೆ ಎಂದೂ ತಿಳಿಸಿದ್ದಾರೆ.

ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್​ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ

Published On - 7:20 pm, Tue, 9 February 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ