ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್​ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ

Coronavirus ಮೂಲ ಪತ್ತೆಹಚ್ಚುವ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಂಡದ ಮೇಲೆ ಅತ್ಯಂತ ದೊಡ್ಡ ಜವಾಬ್ದಾರಿ ಇದ್ದು, ಚೀನಾದ ಒಳಗೆ ಮತ್ತು ಹೊರಗಿನಿಂದಲೂ ಕೊರೊನಾ ಮೂಲವನ್ನು ಬಹಿರಂಗಪಡಿಸುವಂತೆ ರಾಜಕೀಯ ಒತ್ತಡಗಳು ಬರುತ್ತಿವೆ ಎನ್ನಲಾಗಿದೆ.

ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್​ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ
ಪ್ರಾತಿನಿಧಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 03, 2021 | 3:08 PM

ಕೊರೊನಾ ವೈರಾಣುವಿನ ಜನ್ಮಭೂಮಿ ಎಂಬ ಅಪಖ್ಯಾತಿಗೆ ತುತ್ತಾಗಿರುವ ಚೀನಾದ ವುಹಾನ್​ನಲ್ಲಿರುವ ಪ್ರಯೋಗಾಲಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಭೇಟಿ ನೀಡಿದೆ. ಇಂದು ಮುಂಜಾನೆ ಪ್ರಯೋಗಾಲಯಕ್ಕೆ ತೆರಳಿರುವ ತಜ್ಞರ ತಂಡ ಕೊರೊನಾ ವೈರಾಣುವಿನ ಉಗಮಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದೆ.

ವೈರಾಣು ತಜ್ಞ ಪೀಟರ್ ಬೆನ್​ ಎಂಬರೆಕ್​ ನೇತೃತ್ವದಲ್ಲಿ ರೂಪುಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ, ಇಂದು ಬೆಳಗ್ಗೆಯೇ ವುಹಾನ್​ ನಗರದಲ್ಲಿರುವ ಪ್ರಯೋಗಾಲಯಕ್ಕೆ ಕಾಲಿಟ್ಟಿದೆ. ಸದ್ಯ ಇಡೀ ಜಗತ್ತು ಕೊರೊನಾಕ್ಕೆ ಕಾರಣ ಚೀನಾ ಎಂದು ಬೊಟ್ಟು ಮಾಡುತ್ತಿದ್ದರೂ ಡ್ರ್ಯಾಗನ್ ದೇಶ ಮಾತ್ರ ಈ ಆರೋಪವನ್ನು ತಿರಸ್ಕರಿಸುತ್ತಲೇ ಇದೆ. ಆದರೆ, ಇಂದು ಭೇಟಿ ನೀಡಿರುವ ತಂಡ ಕೊರೊನಾದ ಹಿಂದಿನ ರಹಸ್ಯವನ್ನು ಬಯಲು ಮಾಡಲಿದೆಯಾ ಎಂಬ ಕುತೂಹಲ ಜಗತ್ತಿನಾದ್ಯಂತ ಗರಿಗೆದರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ಸದಸ್ಯ ಮತ್ತು ಎಕೋ ಹೆಲ್ತ್ ಅಲಯನ್ಸ್ ಮುಖ್ಯಸ್ಥ ಪೀಟರ್​ ದಾಸ್​ಝಕ್​, ಇವತ್ತು ನಮ್ಮ ಪಾಲಿಗೆ ಅತ್ಯಂತ ಮಹತ್ವಪೂರ್ಣ ದಿನವಾಗಲಿದೆ ಎಂಬ ನಂಬಿಕೆಯಲ್ಲಿ ಆಗಮಿಸಿದ್ದೇವೆ. ಇಲ್ಲಿನ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ನಮ್ಮಲ್ಲಿರುವ ಸಂದೇಹ ಮತ್ತು ಪ್ರಶ್ನೆಗಳನ್ನು ಮುಂದಿಡಲಿದ್ದೇವೆ. ಕೇಳಬೇಕಾದ ವಿಚಾರಗಳನ್ನು ಕೇಳಲಿದ್ದೇವೆ ಎಂದು ತಿಳಿಸಿದ್ದಾರೆ.

ಕೆಲದಿನಗಳ ಹಿಂದೆಯೇ ಚೀನಾಕ್ಕೆ ಆಗಮಿಸಿದ್ದ ಈ ವಿಶೇಷ ತಂಡ ಇದೀಗ 14 ದಿನಗಳ ಕ್ವಾರಂಟೈನ್​ ಅವಧಿ ಮುಗಿಸಿ, ಕೆಲ ರಾಜತಾಂತ್ರಿಕ ನಿಯಮಗಳನ್ನು ಪಾಲಿಸಿದ ನಂತರ ಅಧ್ಯಯನಕ್ಕೆ ಮುಂದಾಗಿದೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆಯ ತಂಡದ ಮೇಲೆ ಅತ್ಯಂತ ದೊಡ್ಡ ಜವಾಬ್ದಾರಿ ಇದ್ದು, ಚೀನಾದ ಒಳಗೆ ಮತ್ತು ಹೊರಗಿನಿಂದಲೂ ಕೊರೊನಾ ಮೂಲವನ್ನು ಬಹಿರಂಗಪಡಿಸುವಂತೆ ರಾಜಕೀಯ ಒತ್ತಡಗಳು ಬರುತ್ತಿವೆ ಎನ್ನಲಾಗಿದೆ.

ಈಗ ಸ್ಮಾರ್ಟ್​ಫೋನ್​ ಮೂಲಕವೇ ಕೊರೊನಾ ವೈರಸ್​ ಪತ್ತೆ ಹಚ್ಚಬಹುದು!

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ