One Child Policy: ‘ಒಂದು ಮಗು’ ನೀತಿ ರದ್ದುಪಡಿಸಿ 5 ವರ್ಷವಾಯ್ತು; ಆದರೂ ಚೀನಾದಲ್ಲಿ ಏರಿಕೆ ಆಗ್ತಿಲ್ಲ ಜನನ ಪ್ರಮಾಣ

China Population : ಸಾರ್ವಜನಿಕ ಭದ್ರತಾ ಸಚಿವಾಲಯದ ಸೋಮವಾರ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ 2020ರಲ್ಲಿ 1 ಕೋಟಿ 4 ಲಕ್ಷ ಶಿಶುಗಳು ಜನಿಸಿವೆ. 2019 ರಲ್ಲಿ ದಾಖಲಾದ ಜನನ ಪ್ರಮಾಣಕ್ಕಿಂತ ಇದು ಶೇಕಡಾ 15ರಷ್ಟು ಕಡಿಮೆಯಾಗಿದೆ.

One Child Policy: ‘ಒಂದು ಮಗು’ ನೀತಿ ರದ್ದುಪಡಿಸಿ 5 ವರ್ಷವಾಯ್ತು; ಆದರೂ ಚೀನಾದಲ್ಲಿ ಏರಿಕೆ ಆಗ್ತಿಲ್ಲ ಜನನ ಪ್ರಮಾಣ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Feb 10, 2021 | 12:56 PM

ಬೀಜಿಂಗ್: ಚೀನಾದಲ್ಲಿ ಶಿಶು ಜನನ ಪ್ರಮಾಣವು ಹೆಚ್ಚಾಗುತ್ತಲೇ ಇಲ್ಲ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಈಗ ಮಕ್ಕಳ ಜನನ ನಿರಂತರವಾಗಿ ಕಡಿಮೆಯಾಗುತ್ತಾ ಬಂದಿದೆ. ಇದರಿಂದ ಆರ್ಥಿಕ-ಸಾಮಾಜಿಕ ಸಮಸ್ಯೆಗಳೂ ಉಲ್ಬಣವಾಗುತ್ತಾ ಬಂದಿದೆ. ಸಾರ್ವಜನಿಕ ಭದ್ರತಾ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ ಚೀನಾದಲ್ಲಿ 1 ಕೋಟಿ ಮಕ್ಕಳು ಜನಿಸಿದ್ದಾರೆ. 2019ಕ್ಕೆ ಹೋಲಿಸಿದರೆ 2020ರಲ್ಲಿ 3ನೇ 1 ಭಾಗದಷ್ಟು ಕಡಿಮೆಯಾಗಿದೆದಶಕಗಳ ಹಿಂದೆ ಚೀನಾದಲ್ಲಿ ತಲಾ ಒಂದು ಕುಟುಂಬಕ್ಕೆ ‘ಒಂದು ಮಗು’ ಎಂಬ ನೀತಿ ಜಾರಿಗೆ ತಂದಿತ್ತು. ಇದಾದ ನಂತರ ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಾ, ಉದ್ಯೋಗಿಗಳ ಸಂಖ್ಯೆ ಕುಗ್ಗುತ್ತಾ ಬರುತ್ತಿದ್ದಂತೆ ಕುಟುಂಬಗಳು ತಲಾ ಇಬ್ಬರು ಮಕ್ಕಳನ್ನು ಹೊಂದಬಹುದು ಎಂದು 2016ರಲ್ಲಿ ಈ ನೀತಿಯನ್ನು ಬದಲಾಯಿಸಿತು. ಸಾರ್ವಜನಿಕ ಭದ್ರತಾ ಸಚಿವಾಲಯ ಸೋಮವಾರ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ 2020ರಲ್ಲಿ 1 ಕೋಟಿ 4 ಲಕ್ಷ ಶಿಶುಗಳು ಜನಿಸಿವೆ. 2019 ರಲ್ಲಿ ದಾಖಲಾದ ಜನನ ಪ್ರಮಾಣಕ್ಕಿಂತ ಇದು ಶೇಕಡಾ 15ರಷ್ಟು ಕಡಿಮೆಯಾಗಿದೆ. ನಾಲ್ಕು ವರ್ಷಗಳಲ್ಲಿ ಸತತವಾಗಿ ಜನನ ಪ್ರಮಾಣ ಕಡಿಮೆ ಆಗಿದೆ ಎಂದು ಅಂಕಿಅಂಶಗಳು ತೋರಿಸಿವೆ.

ಚೀನಾದಲ್ಲಿ ನೋಂದಣಿ ಮಾಡಿದ ಶಿಶು ಜನನ ಸಂಖ್ಯೆಯು ಅಲ್ಲಿರುವ ಶಿಶು ಜನನ ಸಂಖ್ಯೆಗಿಂತ ಕಡಿಮೆಯಾಗಿದೆ. ಯಾಕೆಂದರೆ ಎಲ್ಲಾ ಪೋಷಕರು ಮಗು ಜನಿಸಿದ ತಕ್ಷಣ ನೋಂದಣಿ ಮಾಡುವುದಿಲ್ಲ. ಅಂಕಿ ಅಂಶಗಳ ಪ್ರಕಾರ ಗಂಡು ಮಕ್ಕಳ ಪ್ರಮಾಣ ಶೇಕಡಾ 52.7 ಆಗಿದ್ದು ಹೆಣ್ಣು ಮಕ್ಕಳ ಪ್ರಮಾಣ ಶೇಕಡಾ 47.3 ಆಗಿದೆ.

ಚೀನಾದಲ್ಲಿ ಸಾಮಾಜಿಕ ಮಾಧ್ಯಮ ವೀಬೊದ ಬಳಕೆದಾರರೊಬ್ಬರು ಶಿಶು ಜನನದ ಅಂಕಿ ಅಂಶವು ಕಾಲೇಜು ಪ್ರವೇಶ ಪರೀಕ್ಷೆ ಬರೆಯುುವ ಜನರ ಸಂಖ್ಯೆಗಿಂತ ಕಡಿಮೆಯಾಗಿದೆ. ಮುಂದಿನ ದಶಕಗಳಲ್ಲಿ ವಯಸ್ಸಾಗುವಿಕೆ ಹೆಚ್ಚು ಗಂಭೀರವಾಗಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1970ರಲ್ಲಿ ಚೀನಾ ಒಂದು ಮಗು ಎಂಬ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿಯಿಂದಾಗಿ ಜನನ ಪ್ರಮಾಣ ಕಡಿಮೆಯಾದಾಗ 2016ರಲ್ಲಿ ಈ ನೀತಿಯನ್ನು ಬದಲಿಸಿತ್ತು. ಅಂದಹಾಗೆ ಕುಟುಂಬಕ್ಕೆ ಎರಡು ಮಕ್ಕಳು ಎಂಬ ನೀತಿ ಜಾರಿಗೆ ಬಂದ ನಂತರವೂ ಜನನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಚೀನಾ ಮಹಿಳೆಯರು ಮಗು ಬೇಡ ಎನ್ನುವ ತೀರ್ಮಾನ ಕೈಗೊಂಡಿರುವುದು ಅಥವಾ ಅಮ್ಮನಾಗಲು ವಿಳಂಬ ಮಾಡುತ್ತಿರುವುದು ಕೂಡಾ ಜನನ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ.

ಚೀನಾದಲ್ಲಿ ಜನನ ಪ್ರಮಾಣ ಏರಬೇಕೆಂದರೆ 15 ವರ್ಷಗಳೇ ಬೇಕಾಗಬಹುದು ಕೋವಿಡ್ ಸಾಂಕ್ರಾಮಿಕದಿಂದಾಗಿ ಆರ್ಥಿಕ ಸ್ಥಿತಿಯೂ ಕ್ಷೀಣಿಸಿರುವುದರಿಂದ ಹಲವಾರು ಕುಟುಂಬಗಳು ಮಗು ಬೇಡ ಎಂಬ ನಿರ್ಧಾರವನ್ನೂ ಕೈಗೊಂಡಿದ್ದು ಕೂಡಾ ಈ ಕುಸಿತಕ್ಕೆ ಕಾರಣವಾಗಿರಬಹುದು ಎಂದು ವೀಬೊ ಬಳಕೆದಾರರೊಬ್ಬರು ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ. ನವೆಂಬರ್ ತಿಂಗಳಲ್ಲಿ ಚೀನಾ ಜನಗಣತಿ ಮಾಡಿತ್ತು. ಎರಡು ಮಕ್ಕಳು ನೀತಿಯಿಂದಾಗಿ ಚೀನಾದಲ್ಲಿ  ಜನನ ಪ್ರಮಾಣದಲ್ಲಿ ಬದಲಾವಣೆ ಕಾಣಬೇಕಾದರೆ 15 ವರ್ಷಗಳೇ ಬೇಕಾಗಬಹುದು ಎಂದು ಭೌಗೋಳಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Covid-19 Origin | ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು

Published On - 12:37 pm, Wed, 10 February 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ