ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕತ್ತು ಸೀಳಿ, 6ನೇ ಮಹಡಿಯ ಕಿಟಕಿಯಿಂದ ಕೆಳಗೆಸೆದ ಪಾಪಿ
ಬಾಲಕಿಗೆ ಆಟಿಕೆಗಳ ಆಮಿಷವೊಡ್ಡಿ ಅಪಾರ್ಟ್ಮೆಂಟ್ಗೆ ಕರೆದೊಯ್ದು ಅತ್ಯಾಚಾರವೆಸಗಿ, ಕೊಲೆ ಮಾಡಿ ಬಳಿಕ ಅಪಾರ್ಟ್ಮೆಂಟ್ನ ಶೌಚಾಲಯದಿಂದ ಕೆಳಗೆ ಎಸೆದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಬಯಲಾಗಿದೆ. ಗಂಟಲನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಮುಂಬ್ರಾದ ಹತ್ತಿರದ ಠಾಕೂರ್ಪಾಡ ಪ್ರದೇಶದ ನಿವಾಸಿಯು ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದ ಬಾಲಕಿಗೆ ಆಟಿಕೆಗಳನ್ನು ನೀಡುವ ಭರವಸೆಯೊಡ್ಡಿ ಕರೆದೊಯ್ದು ಕೃತ್ಯವೆಸಗಿದ್ದಾನೆ.

ಥಾಣೆ, ಏಪ್ರಿಲ್ 9: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. 20 ವರ್ಷದ ಯುವಕನೊಬ್ಬ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕತ್ತು ಸೀಳಿ ಕೊಲೆ(Murder) ಮಾಡಿ 6ನೇ ಮಹಡಿಯ ಕಿಟಕಿಯಿಂದ ಕೆಳಗೆಸೆದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಆಕೆಯ ಶವವನ್ನು ಅಪಾರ್ಟ್ಮೆಂಟ್ನ ಶೌಚಾಲಯದ ಕಿಟಕಿಯಿಂದ ಕೆಳಗೆ ಎಸೆದಿದ್ದಾನೆ. ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಜೊತೆಗೆ ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದರು.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಬಯಲಾಗಿದೆ. ಗಂಟಲನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಮುಂಬ್ರಾದ ಹತ್ತಿರದ ಠಾಕೂರ್ಪಾಡ ಪ್ರದೇಶದ ನಿವಾಸಿಯು ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದ ಬಾಲಕಿಗೆ ಆಟಿಕೆಗಳನ್ನು ನೀಡುವ ಭರವಸೆಯೊಡ್ಡಿ ಕರೆದೊಯ್ದು ಕೃತ್ಯವೆಸಗಿದ್ದಾನೆ.
ಆಕೆಯನ್ನು ಅಪಾರ್ಟ್ಮೆಂಟ್ನ 6ನೇ ಫ್ಲೋರ್ಗೆ ಕರೆದುಕೊಂಡು ಹೋಗಿ ಅಲ್ಲಿ ಬಲಾತ್ಕಾರ ನಡೆಸಿದ್ದಾನೆ, ಬಳಿಕ ಕತ್ತು ಸೀಳಿ, ಶೌಚಾಲಯದ ಕಿಟಕಿಯಿಂದ ಕೆಳಗೆ ದೇಹವನ್ನು ಎಸೆದಿದ್ದಾನೆ. ಪೊಲೀಸ್ ತನಿಖಾ ತಂಡವು ಕಟ್ಟಡದ ಪ್ರತಿಯೊಂದು ಫ್ಲಾಟ್ ಅನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಮನೆಯಲ್ಲಿ ಸ್ನಾನಗೃಹದ ಕಿಟಕಿ ತೆರೆದಿರುವುದು ಕಂಡುಬಂದಿದೆ, ಅಲ್ಲಿಂದ ಅವನು ಹುಡುಗಿಯನ್ನು ತಳ್ಳಿದ್ದಾನೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಓದಿ: Video: ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲೇ ಕಲ್ಲಿನಿಂದ ಜಜ್ಜಿ ಪತಿಯಿಂದ ಹಲ್ಲೆ
ಕಟ್ಟಡದ ನಿವಾಸಿಯಲ್ಲದಿದ್ದರೂ ಆಕೆ ಅಲ್ಲಿಗೆ ಹೇಗೆ ಬಂದಳು ಎಂಬುದರ ಕುರಿತು ಮೊದಲು ತನಿಖೆ ಆರಂಭಿಸಲಾಗಿತ್ತು. ಮೇಲಿಂದ ಕೆಳಗೆ ಏನೋ ಬಿದ್ದಿರುವ ಶಬ್ದವೂ ಕೂಡ ಅಕ್ಕಪಕ್ಕದಲ್ಲಿದ್ದವರಿಗೆ ಕೇಳಿಸಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದು, ಪಕ್ಕದ ಮನೆಯ ಕಾರಿನಲ್ಲಿ ಶವವಿಟ್ಟ ಸಂಬಂಧಿ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ(Murder) ಮಾಡಿ, ಪಕ್ಕದ ಮನೆಯ ಕಾರಿನಲ್ಲಿ ಶವವಿಟ್ಟಿರುವ ಘಟನೆ ಛತ್ತೀಸ್ಗಢದ ದುರ್ಗ್ನಲ್ಲಿ ನಡೆದಿದೆ. ಆಕೆಯ ಸಂಬಂಧಿಯೇ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅತ್ಯಾಚಾರ ಮಾಡಿ ಕೊಲೆ ಮಾಡಿ, ಶವವನ್ನು ಕಾರಿನಲ್ಲಿ ಬಚ್ಚಿಟ್ಟು ಬೀಗ ಹಾಕಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ನವರಾತ್ರಿ ಹಬ್ಬದ ಭಾಗವಾಗಿ ಆಯೋಜಿಸಲಾಗಿದ್ದ ಆಚರಣೆಯ ನಂತರ ಏಪ್ರಿಲ್ 5 ರಂದು ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಕನ್ಯಾ ಭೋಜನದಲ್ಲಿ ಭಾಗವಹಿಸಲು ಮಗು ತನ್ನ ಅಜ್ಜಿಯ ಮನೆಗೆ ಭೇಟಿ ನೀಡಿತ್ತು, ಆದರೆ ಮನೆಗೆ ಹಿಂತಿರುಗಲಿಲ್ಲ.
ಆಕೆಯ ಕುಟುಂಬವು ಪೊಲೀಸರಿಗೆ ನಾಪತ್ತೆ ದೂರು ನೀಡುವ ಮೊದಲು ತೀವ್ರ ಹುಡುಕಾಟವನ್ನು ಪ್ರಾರಂಭಿಸಿತ್ತು ಎಂದು ದುರ್ಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋಡ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ