ಎಐಸಿಸಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗಿ
ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಅಧಿವೇಶನಕ್ಕೆ ನ್ಯಾಯ್ ಪಥ್ ಅಂತ ಹೆಸರಿಡಲಾಗಿದ್ದು, ಸಂಕಲ್ಪ, ಸಮರ್ಪಣೆ ಮತ್ತು ಸಂಘರ್ಷ ಟ್ಯಾಗ್ಲೈನ್ ಅಗಿದೆ. ಪಕ್ಷದ ಬಲವರ್ಧನೆ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವುದು, ಚುನಾವಣೆಗಳನ್ನು ನಿರ್ವಹಿಸುವ ಬಗೆ, ಮಾಧ್ಯಮಗಳ ಜೊತೆ ವರ್ತನೆ, ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆ ನಿರ್ವಹಿಸುವುದು ಮತ್ತು ಹೊಸ ಪದಾಧಿಕಾರಿಗಳಿಗೆ ಪಕ್ಷದ ತತ್ವ ಸಿದ್ಧಾಂತಗಳ ತರಬೇತಿ-ಮೊದಲಾದವುಗಳು ಅಧಿವೇಶನದ ಅಜೆಂಡಾ ಆಗಿವೆ.
ಅಹಮದಾಬಾದ್, ಏಪ್ರಿಲ್ 9: ಪಕ್ಷವನ್ನು ಪುನಶ್ಚೇತನಗೊಳಿಸುವುದರ ಇತರ ಆಯಾಮಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷವು ಗುಜರಾತಿನ ಅಹಮದಾಬಾದ್ ನಲ್ಲಿ ಆಯೋಜಿಸಿರುವ ಅಧಿವೇಶನವು (AICC Session) ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವತ್ತಿನ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಸಿಪಿಪಿ ಅಧ್ಯಕ್ಷೆ ಸೋನಿಯ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಂಜೀತ್ ಸುರ್ಜೆವಾಲಾ ಮೊದಲಾದವರೊಂದಿಗೆ ಸಿದ್ದರಾಮಯ್ಯ ಮುಂದಿನ ಸಾಲಲ್ಲಿ ಕುಳಿತಿದ್ದರೆ ಶಿವಕುಮಾರ್ ಹಿಂದಿನ ಸಾಲಲ್ಲಿ ಕುಳಿತಿದ್ದರು.
ಇದನ್ನೂ ಓದಿ: ಪೌರಕಾರ್ಮಿಕರ ರಾಜ್ಯಮಟ್ಟದ ಸಮಾವೇಶದ ವೇದಿಕೆ ಮೇಲೆ ಸಿದ್ದರಾಮಯ್ಯ-ಶಿವಕುಮಾರ್ ನಡುವೆ ಗಹನ ಚರ್ಚೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ