ಪೌರಕಾರ್ಮಿಕರ ರಾಜ್ಯಮಟ್ಟದ ಸಮಾವೇಶದ ವೇದಿಕೆ ಮೇಲೆ ಸಿದ್ದರಾಮಯ್ಯ-ಶಿವಕುಮಾರ್ ನಡುವೆ ಗಹನ ಚರ್ಚೆ
ಡಿಕೆ ಶಿವಕುಮಾರ್ ದೆಹಲಿಗೆ ಹೋದಾಗ ವಿರೋಧಿಗಳ ಕ್ಯಾಂಪ್ ಮಾತ್ರವಲ್ಲದೆ ಕಾಂಗ್ರೆಸ್ ಶಿಬಿರದಲ್ಲೂ ಹಲವಾರು ಊಹಾಪೋಹಗಳು ಹರಿದಾಡುತ್ತವೆ. ಅಧಿಕಾರ ಹಂಚಿಕೆ ವಿಷಯವನ್ನು ಹೈಕಮಾಂಡ್ನೊಂದಿಗೆ ಚರ್ಚಿಸಲು ಹೋಗಿದ್ದಾರೆ, ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋದಾಗಲೂ ಅದೇ ಆಗುತ್ತದೆ
ಬೆಂಗಳೂರು, ಏಪ್ರಿಲ್ 7: ನಗರದಲ್ಲಿಂದು ಆಯೋಜಿಸಲಾಗಿದ್ದ ಪೌರಕಾರ್ಮಿಕರ ಬೃಹತ್ ರಾಜ್ಯಮಟ್ಟದ ಸಮಾವೇಶದಲ್ಲಿ ವೇದಿಕೆಯ ಮೇಲೆ ಅಕ್ಕಪಕ್ಕ ಕೂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾವುದೋ ವಿಷಯವನ್ನು ಗಹನವಾಗಿ ಚರ್ಚಿಸಿದ್ದು ಗಮನಸೆಳೆಯಿತು. ಇವರಿಬ್ಬರ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಹಳ ಆತ್ಮೀಯವಾಗಿರುತ್ತಾರೆ. ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಕಿವಿಗೊಟ್ಟು ಆಲಿಸುತ್ತಾರೆ ಮತ್ತು ಹೇಳುವವರ ಮಾತು ಮುಗಿದ ಮೇಲೆಯೇ ಕೇಳುತ್ತಿದ್ದವರು ತಮ್ಮ ಅಭಿಪ್ರಾಯ ಹೇಳುತ್ತಾರೆ.
ಇದನ್ನೂ ಓದಿ: ಸಿಎಂ ಕೈಯಿಂದ ಕಾಯಮಾತಿ ಪತ್ರ ಕೊಡಿಸ್ತೇವೆಂದು ಪೌರಕಾರ್ಮಿಕರಿಗೆ ವಂಚನೆ, ತಲಾ 5 ಸಾವಿರದಂತೆ ವಸೂಲಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 07, 2025 03:38 PM