ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ: ಡಿಕೆ ಶಿವಕುಮಾರ್
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರದ ರೀತಿ ಬೆಂಗಳೂರಿನ ಮೆಟ್ರೋ ಕಂಬಗಳು ಮತ್ತು ಇತರ ಐತಿಹಾಸಿಕ ಕಟ್ಟಡಗಳಿಗೂ ದೀಪಾಲಂಕಾರ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಸುಮಾರು 40 ಸ್ಥಳಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರಿನ ಸೌಂದರ್ಯವರ್ಧನೆಗೆ ಇದು ಒಂದು ಮಹತ್ವದ ಕ್ರಮವಾಗಿದೆ.
ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ಕಂಬಗಳು, ಐತಿಹಾಸಿಕ ಕಟ್ಟಡಗಳಿಗೂ ಹೊಸ ರೂಪ ಕೊಡಬೇಕು. ಹೀಗಾಗಿ, ಅವುಗಳಿಗೂ ದೀಪಾಲಂಕಾರ ಮಾಡಲಾಗುತ್ತದೆ. ಸದ್ಯದರಲ್ಲೇ ಕೆಲಸ ಪ್ರಾರಂಭ ಮಾಡುತ್ತೇವೆ. ಸುಮಾರು 40 ಜಾಗ ಹುಡುಕಿದ್ದೇನೆ. ದೀಪಾಲಂಕಾರಕ್ಕೆ ಟೆಂಡರ್ ಕರೆದಿದ್ದೇನೆ. ಬೆಂಗಳೂರಿನಲ್ಲಿ ಐತಿಹಾಸಿಕ ಕೆಲಸ ಮಾಡುತ್ತೇವೆ ಎಂದು ಹೇಳಿದರು.