ನಂಜನಗೂಡಲ್ಲಿ ಅದ್ದೂರಿ ರಥೋತ್ಸವ, ಪಂಚರಥಗಳ ಮೆರವಣಿಗೆ, ಲಕ್ಷಾಂತರ ಭಕ್ತರು ಭಾಗಿ
ಜಿಲ್ಲೆಯ ನಂಜನಗೂಡನನ್ನು ದಕ್ಷಿಣದ ಕಾಶಿ ಅಂತ ಕರೆಯುವುದು ಕನ್ನಡಿಗರಿಗೆ ಗೊತ್ತಿಲ್ಲದೇನಿಲ್ಲ. ಪಂಚರಥಗಳ ಮೆರವಣಿಗೆ ವರ್ಷಕ್ಕೊಮ್ಮೆ ನಡೆಯುವ ಮಹಾಮೇಳ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಭಕ್ತಾದಿಗಳು ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ನಂಜನಗೂಡನ್ನು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯಂತೂ ಇದೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಒಳ್ಳೊಳ್ಳೆ ಹೋಟೆಲ್ಗಳ ಅಗತ್ಯವಿದೆ.
ಮೈಸೂರು, ಏಪ್ರಿಲ್ 9: ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸಾಮಾನ್ಯ ದಿನಗಳಲ್ಲೂ ನೂರಾರು ಜನ ಬಂದು ಪೂಜೆ ಮಾಡುತ್ತಾರೆ, ಇನ್ನು ರಥೋತ್ಸವ ನಡೆಯುತ್ತದೆ ಅಂದರೆ ಕೇಳಬೇಕೇ? ಮಂಗಳವಾರ ರಾತ್ರಿ ಶ್ರೀಕಂಠೇಶ್ವರ ದೇಗುಲದ (Srikantheshwara temple) ಬಳಿ ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ, ಚಂಡಿಕೇಶ್ವರ ಸ್ವಾಮಿ ರಥೋತ್ಸಕ್ಕೆ ಚಾಲನೆ ನೀಡಲಾಗಿದೆ ಮತ್ತು ನಂಜನಗೂಡು ಪಟ್ಟಣದ ಬೀದಿಗಳಲ್ಲಿ ಪಂಚರಥಗಳ ಮೆರವಣಿಗೆ ನಡೆದಿದೆ. ರಥೋತ್ಸವದಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಭಕ್ತರು ರಥದ ಮೇಲೆ ಬಾಳೆಹಣ್ಣು ಎಸೆದು ತಮ್ಮ ಹರಕೆ ತೀರಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ತಿಪ್ಪೇರುದ್ರಸ್ವಾಮಿ ಅದ್ಧೂರಿ ರಥೋತ್ಸವ, ಕ್ವಿಂಟಾಲ್ ಗಟ್ಟಲೆ ಕೊಬ್ಬರಿ ಸುಟ್ಟು ಹರಕೆ ತೀರಿಸಿದ ಭಕ್ತರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos