ಕಲಬುರಗಿಯಲ್ಲಿ ಇಂದು ಮಹಾದಾಸೋಹಿ ಶರಣಬಸವೇಶ್ವರ ಅದ್ದೂರಿ ರಥೋತ್ಸವ, ಲಕ್ಷಾಂತರ ಭಕ್ತರು ಭಾಗಿ
ಕಲಬುರಗಿಯಲ್ಲಿ ಅದಾಗಲೇ ಧಗಿಧಗಿಸುವ ಬಿಸಿಲು, ಇವತ್ತಿನ ಉಷ್ಣಾಂಶ 39 ಡಿಗ್ರೀ ಸೆಲ್ಸಿಯಸ್! ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಜನ ರಥ ಸಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೆರಳಿರುವ ಸ್ಥಳಗಳನ್ನು ಆಯ್ದುಕೊಂಡಿದ್ದಾರೆ. ಕಬ್ಬಿನ ಹಾಲಿಗೆ ಜಾತ್ರೆಯಲ್ಲಿ ಎಲ್ಲಿಲ್ಲದೆ ಬೇಡಿಕೆ. ಬಾಯಾರಿಸಿಕೊಳ್ಳಲು ಜನ ಕಬ್ಬಿನ ಹಾಲು, ನೀರು ಮತ್ತು ಐಸ್ ಕ್ಯಾಂಡಿಗಳ ಮೊರೆ ಹೋಗುತ್ತಿದ್ದಾರೆ.
ಕಲಬುರಗಿ, 19 ಮಾರ್ಚ್: ಬಿಸಿಲುನಾಡು ಅಂತಲೂ ಕರೆಸಿಕೊಳ್ಳುವ ಕಲಬುರಗಿಯಲ್ಲಿ ಇಂದು ಮಹಾದಾಸೋಹಿ ಶರಣ ಬಸವೇಶ್ವರರ ರಥೋತ್ಸವ. ಅಪ್ಪುನ್ ಜಾತ್ರಿ ಎಂದು ಹೆಸರಾಗಿರುವ ಕಲಬುರಗಿಯಲ್ಲಿ 203 ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರುತ್ತಿದೆ. ಶರಣಬಸವೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ನೆರೆಯುತ್ತಾರೆ. ಸುತ್ತಮುತ್ತಲಿನ ಜಿಲ್ಲೆಯ ಜನರಲ್ಲದೆ ನೆರೆ ರಾಜ್ಯಗಳಾಗಿರುವ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದಲೂ ಸಾವಿರಾರು ಜನ ಆಗಮಿಸಿ ರಥೋತ್ಸವ ದಲ್ಲಿ ಪಾಲ್ಗೊಳ್ಳುತ್ತಾರೆ. ಸರ್ವಾಲಂಕೃತಗೊಂಡಿರುವ ರಥ ಅಪ್ಪುನ್ ಗುಡಿ ಅವರಣದಲ್ಲಿ ನಿಂತಿರುವುದನ್ನು ಮತ್ತು ಭಕ್ತರು ಅದರ ಸುತ್ತು ಹಾಕುವ ದೃಶ್ಯಗಳಲ್ಲಿ ನೋಡಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿತ್ರದುರ್ಗ: ತಿಪ್ಪೇರುದ್ರಸ್ವಾಮಿ ಅದ್ಧೂರಿ ರಥೋತ್ಸವ, ಕ್ವಿಂಟಾಲ್ ಗಟ್ಟಲೆ ಕೊಬ್ಬರಿ ಸುಟ್ಟು ಹರಕೆ ತೀರಿಸಿದ ಭಕ್ತರು