ಭರದಿಂದ ಸಾಗಿದ ಕಲಬುರಗಿಯ ಐತಿಹಾಸಿಕ ಶರಣಬಸವೇಶ್ವರ ಜಾತ್ರೆ ಸಿದ್ಧತೆ: ಮಾ.30ರಂದು ರಥೋತ್ಸವ

ಸಮಾನತೆ ಮತ್ತು ಕೋಮು ಸೌಹಾರ್ದತೆಯ ಪ್ರತೀಕವಾಗಿರುವ ಮಹಾದಾಸೋಹಿ ಶರಣಬಸವೇಶ್ವರರ 202ನೇ ಜಾತ್ರಾ (Sharanabasaveshwar Jatra) ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮಾರ್ಚ್‌ 29 ರಂದು ಉಚ್ಚಾಯಿ ಹಾಗೂ 30ರಂದು ರಥೋತ್ಸವ ಜರುಗಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್‌.ಅಪ್ಪ ತಿಳಿಸಿದರು.

ಭರದಿಂದ ಸಾಗಿದ ಕಲಬುರಗಿಯ ಐತಿಹಾಸಿಕ ಶರಣಬಸವೇಶ್ವರ ಜಾತ್ರೆ ಸಿದ್ಧತೆ: ಮಾ.30ರಂದು ರಥೋತ್ಸವ
ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 27, 2024 | 10:37 PM

ಕಲಬುರಗಿ, ಮಾ.27: ಮಹಾದಾಸೋಹಿ ಶರಣಬಸವೇಶ್ವರರ 202ನೇ ಜಾತ್ರಾ(Sharanabasaveshwar Jatra) ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮಾರ್ಚ್‌ 29 ರಂದು ಉಚ್ಚಾಯಿ ಹಾಗೂ 30ರಂದು ರಥೋತ್ಸವ ಜರುಗಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್‌.ಅಪ್ಪ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ಜಾತ್ರೆಯ ಅಂಗವಾಗಿ ಗುರುಮರುಳಾರಾಧ್ಯರ–ಶಿಷ್ಯೋತ್ತಮ ಶರಣಬಸವೇಶ್ವರರ ಗದ್ದುಗೆಗೆ ಐದು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿವೆ. 29ರ ಸಂಜೆ 6ಕ್ಕೆ ಉಚ್ಚಾಯಿ (ಚಿಕ್ಕ ರಥೋತ್ಸವ) ಜರುಗಲಿದೆ. 30ರ ಸಂಜೆ 6ಕ್ಕೆ ಪರುಷ ಬಟ್ಟಲು (ಪ್ರಸಾದ ಬಟ್ಟಲು) ಪ್ರದರ್ಶನದೊಂದಿಗೆ ಲಕ್ಷಾಂತರ ಭಕ್ತರ ಸಮೂಹದಲ್ಲಿ ಅದ್ದೂರಿ ರಥೋತ್ಸವ ನೆರವೇರಲಿದೆ’ ಎಂದು  ತಿಳಿಸಿದರು.‌

ಶರಣಬಸವೇಶ್ವರ ಜಾತ್ರೆಯು ಸಮಾನತೆ ಮತ್ತು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಹಾಗೂ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ ಎಂದರು. ಐದು ದಿನಗಳ ವಿಶೇಷ ಪೂಜೆಯಲ್ಲಿ ಬಾವಿ, ಗಂಗಾ ಪೂಜೆ, ಎರಡು ದಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ರಥೋತ್ಸವದ ದಿನದಂದು ಕುಂಭ ಪೂಜೆ, ಹುಳಿ ಬಾನ ತಯಾರಿಕೆ ನಡೆಯಲಿದೆ. ಶಂಕರ ಗುಡಿಯಿಂದ ನಂದಿಕೋಲು, ಬೀದಿ ಬಸವಣ್ಣನ ಗುಡಿಯಿಂದ ಪಲ್ಲಕ್ಕಿ, ದೇಶಮುಖ ಮನೆತನದಿಂದ ಸನ್ಮಾನ ಹಾಗೂ ಖಾಜಾ ಬಂದಾ ನವಾಜ್ ದರ್ಗಾದಿಂದ ಹೂಗಳು ಬರಲಿವೆ. ಪರುಷ ಬಟ್ಟಲು ಪ್ರದರ್ಶನದೊಂದಿಗೆ ಅಲಂಕೃತ ರಥೋತ್ಸವನ್ನು ಸಾವಿರಾರು ಭಕ್ತರು ಎಳೆಯುವರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಬಾಗಲಕೋಟೆ: ಚಕ್ರೇಶ್ವರಿ ಜಾತ್ರಾ ಉತ್ಸವ: ಇಳಕಲ್ ಸೀರೆಯುಟ್ಟು ರೊಟ್ಟಿ ತಟ್ಟಿದ ವಿದ್ಯಾರ್ಥಿನಿಯರು

ದೇವಸ್ಥಾನದ ಆವರಣದ ಶಿವಾನುಭವ ಮಂಟಪದಲ್ಲಿ ಉಪನ್ಯಾಸಕರಿಂದ ಶರಣಬಸವೇಶ್ವರರ ತತ್ವ ಸಿದ್ಧಾಂತಗಳು ಮತ್ತು ಶಿವಶರಣರ ಕುರಿತು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಚಿರಂಜೀವಿ ದೊಡ್ಡಪ್ಪ ಅಪ್ಪ ಕಲಾ ಬಳಗದ ಕಲಾವಿದರು ಮೂರು ದಿನ ಮಹಾದಾಸೋಹಿ ಶರಣಬಸವೇಶ್ವರ ಮಹಿಮೆ ನಾಟಕ ಪ್ರದರ್ಶನ ನೀಡುವರು ಎಂದರು.

ಬಳಿಕ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ‘ಎರಡು ಶತಮಾನಗಳ ಇತಿಹಾಸ ಇರುವ ಜಾತ್ರೆಯಲ್ಲಿ ಸರ್ವ ಧರ್ಮೀಯರು, ಎಲ್ಲ ಜಾತಿಯವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ವರ್ಷಕ್ಕೆ ಒಮ್ಮೆ ತೋರಿಸುವ ಪ್ರಸಾದದ ಬಟ್ಟಲು, ನಾಡಿನಲ್ಲಿ ಸಮೃದ್ಧಿ ತರಲಿ ಎಂಬುದೇ ಇದರ ಮುಖ್ಯ ಉದ್ದೇಶ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ ಹಾಗೂ ಅವರ ಕುಟುಂಬ ಸದಸ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಸಚಿವ ಅನಿಲಕುಮಾರ ಬಿಡವೆ, ವಿವಿ ಡೀನ್ ಲಕ್ಷ್ಮಿ ಪಾಟೀಲ ಮಾಕಾ ಇದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ