ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆ ಅವಘಡಗಳು ಸಂಭವಿಸಿವೆ. ಹೀಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಬಿಬಿಎಂಪಿ(BBMP) ಜೊತೆ ಸಭೆ ನಡೆಸಿದ್ದು, ತುರ್ತು ಸಂದರ್ಭ ಎದುರಿಸಲು ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಇನ್ನು ಮುಂದೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಓಪನ್ ಮಾಡಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದ್ದು, ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಕೆಲ ರಸ್ತೆಗಳು ಜಲಾವೃತವಾಗಿದ್ದು, ಇದು ಬ್ರಾಂಡ್ ಬೆಂಗಳೂರು ಅಲ್ಲ, ಮೋರಿ ಬೆಂಗಳೂರು ಎಂದು ಸವಾರರು ಕಿಡಿಕಾರುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಗರದ ಹೆಬ್ಬಾಳದಲ್ಲಿ ಕಿಲೋಮೀಟರ್ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಇತ್ತ ದೇವನಹಳ್ಳಿ ಮಾರ್ಗದ ಏರ್ಪೋರ್ಟ್ ರಸ್ತೆಯಲ್ಲಿ ಕೂಡ ಜಾಮ್ ಉಂಟಾಗಿದ್ದು, ಕಳೆದ 1 ತಾಸಿನಿಂದ 2 ಕಿ.ಮೀ.ವರೆಗೂ ವಾಹನಗಳು ನಿಂತಿವೆ.
ಸಿದ್ದಾಪುರ(Siddapura) ತಾಲೂಕಿನ ಮುಸೆಗಾರ ಎಂಬ ಗ್ರಾಮದ ಮನೆ ಅಂಗಳದಲ್ಲಿ ಕರಿ ಚಿರತೆ(Black panther) ಪ್ರತ್ಯಕ್ಷವಾಗಿದ್ದು, ಈ ಹಿಂದೆ ಎರಡು ಬಾರಿ ಕಾಣಿಸಿಕೊಂಡಿತ್ತು. ಪ್ರತಿ ಬಾರಿಯೂ ತಲಾ ಒಂದು ನಾಯಿಯನ್ನು ಹೊತ್ತೊಯ್ದಿತ್ತು. ಕರಿಚಿರತೆ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
: ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಇಂದು(ಭಾನುವಾರ) ಹುಬ್ಬಳ್ಳಿ(Hubballi)ಯಲ್ಲಿ ಸಿಎಂ ಕಾರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಕಾರು ಹುಬ್ಬಳ್ಳಿಯ ಗೋಕುಲ್ ರೋಡ್ನಲ್ಲಿ ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಧುನಿಕ ಕ್ರೀಡೆಗಳ ಎದುರು ಬಹುತೇಕ ದೇಸಿ ಗ್ರಾಮೀಣ ಕ್ರೀಡೆಗಳು ಕಳೆಗುಂದಿವೆ. ಕುಸ್ತಿ ಎಂದರೆ ಮಾರು ದೂರ ಹೋಗುವ ಮಂದಿಯೇ ಹೆಚ್ಚಾಗಿದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ದಸರಾ ಸಂದರ್ಭದಲ್ಲಿ ಎಂದಿನಂತೆ ಕುಸ್ತಿ ಪಂದ್ಯಾವಳಿ ನಡೆದಿದೆ. ವಿಶೇಷವೆಂದರೆ ಪುರುಷರಿಗೆ ಮಾತ್ರವಲ್ಲದೆ ಮಹಿಳಾ ಮಣಿಯರಿಗೂ ಈ ಸಲ ಕುಸ್ತಿ ಏರ್ಪಡಿಸಲಾಗಿತ್ತು. ಜಗಜಟ್ಟಿಗಳ ಕಾಳಗದ ಒಂದು ಝಲಕ್ ಇಲ್ಲಿದೆ ನೋಡಿ.
ಕಾಂಗ್ರೆಸ್ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನ ಹಾಕಲಾಗುತ್ತಿದೆ. ಈ ಹಣದಿಂದ ಎಷ್ಟೋ ಮಹಿಳೆಯರು ಫ್ರಿಡ್ಜ್, ವಾಷಿಂಗ್ ಮಷಿನ್, ಮಕ್ಕಳಿಗೆ ಬೈಕ್ ಸೇರಿದಂತೆ ತಮ್ಮ ಚಿಕ್ಕ ಚಿಕ್ಕ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಎಂಬುವವರು ತಮ್ಮ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಗ್ರಂಥಾಲಯ ತೆರೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿಕೆಗೆ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi), ‘ಖರ್ಗೆಯವರು ಬಾಯಿ ತಪ್ಪಿ ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದು ಕರೆದರು. ಆದರೆ, ಬಟ್ಲಾ ಹೌಸ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗಾಗಿ ನಿಜವಾಗಿಯೂ ಕಣ್ಣೀರು ಹಾಕಿದ್ದು ಸೋನಿಯಾ ಗಾಂಧಿ. ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ವಹಿಸಿದ್ದು, 2004 ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ(POTA) ರದ್ದುಗೊಳಿಸಿದ್ದು ಕಾಂಗ್ರೆಸ್ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ(ಅ.11) ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದೆ. ತಾಲೂಕಿನ ಸೀಗಿಕೇರಿ, ಬೆನಕಟ್ಟಿ ಹಾಗೂ ಹೊನ್ನಾಕಟ್ಟಿ ಸೇರಿ ಹಲವು ಭಾಗದಲ್ಲಿ ರಾಶಿ ಮಾಡಲು ಕಿತ್ತುಹಾಕಿದ್ದ ಈರುಳ್ಳಿ ಬೆಳೆ, ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಪ್ರತಿ ರೈತರ ಲಕ್ಷಾಂತರ ರೂಪಾಯಿ ಈರುಳ್ಳಿ ನಾಶವಾಗಿ ರೈತರು ಕಂಗಾಲಾಗಿದ್ದಾರೆ.
ಮೈಸೂರು ದಸರಾ ನಿಮಿತ್ತ ಕೆಲವೇ ಗಂಟೆಗಳಲ್ಲಿ ಜಂಬೂಸವಾರಿ ಆರಂಭವಾಗಲಿದ್ದು, ಈ ವರ್ಷ ಅಂಬಾರಿಯನ್ನು ಕ್ಯಾಪ್ಟನ್ ಅಭಿಮನ್ಯು ಹೊರಲಿದ್ದಾನೆ. ಕ್ಯಾಪ್ಟನ್ ಅಭಿಮನ್ಯು ಐದನೇ ಬಾರಿಗೆ ಅಂಬಾರಿ ಹೊರಲಿದ್ದಾನೆ. ಜಂಬೂಸವಾರಿ ಕಲವೇ ಗಂಟೆಗಳಲ್ಲಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಗಜಪಡೆ ಫೋಟೋಶೂಟ್ನಲ್ಲಿ ಭಾಗಿಯಾಗಿದೆ.
ಬೀದರ್ ಜಿಲ್ಲೆಯಲ್ಲಿ ನವರಾತ್ರಿ ಹಬ್ಬವನ್ನ ಸ್ವಲ್ಪ ವಿಭಿನ್ನವಾಗಿ ಆಚರಿಸುತ್ತಾರೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಹಿಳೆಯರು ಅನ್ನ, ನೀರು, ತೃಜ್ಜಿಸಿ ದೇವರಿಯ ಆರಾಧನೆಯಲ್ಲಿ ತೊಡಗುತ್ತಾರೆ. ಹಗಲು ರಾತ್ರಿ ಎನ್ನದೆ 5 ದಿನಗಳ ಕಾಲ ಕುಳಿತಲ್ಲೇ ಕುಳಿತು ನಾಡಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾರೆ. ಹತ್ತಾರು ವರ್ಷಗಳಿಂದ ಈ ಸಂಪ್ರದಾಯ ಇಲ್ಲಿದ್ದು, ನವರಾತ್ರಿ ಸಂದರ್ಭದಲ್ಲಿ ಹೀಗೆ ಕಠೋರ ವೃತ್ತ ಮಾಡೋದರಿಂದ ದೈವ ಶಕ್ತಿ ಒಲೆಯುತ್ತೆ ಎನ್ನುವ ನಂಬಿಕೆ ಇವರಲ್ಲಿದೆ.
ದಸರಾ ಹಿನ್ನಲೆ ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳಸಿದ್ದಾರೆ. ಪರಿಣಾಮ ಸಂಜೆ ಆಗುತ್ತಿದ್ದಂತೆ ಮೆಜೆಸ್ಟಿಕ್ ಪ್ರಯಾಣಿಕರಿಂದ ತುಂಬಿದ್ದು, ಸೀಟ್ಗಳು ಸಿಗದೆ ಕೆಲ ಪ್ರಯಾಣಿಕರು ನಿಂತು ಪ್ರಯಾಣ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಊರಿಗೆ ಹೋಗುತ್ತಿರುವ ಹಿನ್ನಲೆ ಬಿಎಂಟಿಸಿಯಿಂದ ಬರೊಬ್ಬರಿ 550 ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ.