ಬೆಂಗಳೂರಿಗರ ಗಮನಕ್ಕೆ: ಮಳೆ ಅವಾಂತರ ಸಂಬಂಧಿತ ದೂರುಗಳಿಗೆ ಈ ಸಂಖ್ಯೆಗೆ ಕರೆ ಮಾಡಿ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆ ಅವಘಡಗಳು ಸಂಭವಿಸಿವೆ. ಹೀಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಬಿಬಿಎಂಪಿ(BBMP) ಜೊತೆ ಸಭೆ ನಡೆಸಿದ್ದು, ತುರ್ತು ಸಂದರ್ಭ ಎದುರಿಸಲು ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಇನ್ನು ಮುಂದೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಓಪನ್ ಮಾಡಲಾಗಿದೆ.

ಬೆಂಗಳೂರಿಗರ ಗಮನಕ್ಕೆ: ಮಳೆ ಅವಾಂತರ ಸಂಬಂಧಿತ ದೂರುಗಳಿಗೆ ಈ ಸಂಖ್ಯೆಗೆ ಕರೆ ಮಾಡಿ
ಮಳೆ ಅವಾಂತರ ಸಂಬಂಧಿತ ದೂರುಗಳಿಗೆ ಈ ಸಂಖ್ಯೆಗೆ ಕರೆ ಮಾಡಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Oct 15, 2024 | 7:05 PM

ಬೆಂಗಳೂರು, ಅ.15: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಅವಾಂತರಗಳು ಸೃಷ್ಟಿಯಾಗುತ್ತಿದೆ. ಹೀಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಬಿಬಿಎಂಪಿ(BBMP) ಜೊತೆ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು ‘ ಇನ್ನು ಮುಂದೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಓಪನ್ ಮಾಡಲಾಗಿದೆ. ಸಿಎಸ್ ಸೂಚನೆ ಹಿನ್ನೆಲೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮಳೆ ಸಂಬಂಧ ದೂರು ಬಂದರೆ ತಕ್ಷಣ ಸಮಸ್ಯೆ ಸರಿಪಡಿಸಲು ಸೂಚನೆ

ಇನ್ನು ತುರ್ತು ಸಂದರ್ಭ ಎದುರಿಸಲು ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲೇ ಇದ್ದು ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಮಳೆ ಸಂಬಂಧ ದೂರು ಬಂದರೆ ತಕ್ಷಣ ಸಮಸ್ಯೆ ಸರಿಪಡಿಸಲು ಸೂಚಿಸಿದ್ದೇವೆ. ಬೆಂಗಳೂರು ನಗರದಲ್ಲಿ ಮಳೆಯಿಂದ ಸದ್ಯಕ್ಕೆ ಯಾವುದೇ ಅನಾಹುತ ಆಗಿಲ್ಲ. ಶಾಲೆಗಳಿಗೆ ರಜೆ ನೀಡುವ ಬಗ್ಗೆ ಸಿಎಸ್‌ ಮಾಹಿತಿ ಕೇಳಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ನಾನು ಸಹ ಮಾತನಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರೇ ಎಚ್ಚರ..ಎಚ್ಚರ

ಮಳೆ ಅವಾಂತರ ಸಂಬಂಧಿತ ದೂರಿಗೆ ಈ ಸಂಖ್ಯೆಗೆ ಕರೆ ಮಾಡಿ

ನಗರದ 8 ವಲಯ ವ್ಯಾಪ್ತಿಯಲ್ಲಿ 8 ನಿಯಂತ್ರಣ ಕೊಠಡಿಗಳಿದ್ದು, ಪಾಲಿಕೆ ಕೇಂದ್ರ ಕಛೇರಿಯಲ್ಲಿ 1 ನಿಯಂತ್ರಣ ಕೊಠಡಿಯಿದೆ. ಮಳೆಯಿಂದಾಗಿ ಏನಾದರು ಸಮಸ್ಯೆಗಳಿದ್ದರೆ, ಸಾರ್ವಜನಿಕರು ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಸದರಿ ದೂರಗಳನ್ನು ಸಂಬಂಧಪಟ್ಟ ವಲಯ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Tue, 15 October 24

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್