AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?: ನೆಹರು ತಾರಾಲಯದ ನಿರ್ದೇಶಕರು ಹೇಳಿದ್ದೇನು?

ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?: ನೆಹರು ತಾರಾಲಯದ ನಿರ್ದೇಶಕರು ಹೇಳಿದ್ದೇನು?

ಅಕ್ಷಯ್​ ಪಲ್ಲಮಜಲು​​
|

Updated on: Mar 03, 2026 | 4:27 PM

Share

ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರನು ಕೆಂಪು ಅಥವಾ ತಾಮ್ರದ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಭೂಮಿಯ ವಾತಾವರಣದಿಂದ ಸೂರ್ಯನ ಬೆಳಕು ವಕ್ರೀಭವನಗೊಂಡು ಚಂದ್ರನ ಮೇಲೆ ಬೀಳುವುದರಿಂದ ಸಂಭವಿಸುತ್ತದೆ. ಭೂಮಿಯ ನೆರಳಿನಲ್ಲಿಯೂ ಚಂದ್ರನು ಕಪ್ಪಗೆ ಕಾಣಿಸದೆ, ರಕ್ತವರ್ಣದಂತೆ ಗೋಚರಿಸಲು ಇದೇ ವೈಜ್ಞಾನಿಕ ಕಾರಣ. ಪ್ರತಿ ಹುಣ್ಣಿಮೆಗೂ ಚಂದ್ರ ಗ್ರಹಣ ಸಂಭವಿಸುವುದಿಲ್ಲ.

ಚಂದ್ರ ಗ್ರಹಣದ ವೇಳೆ ಚಂದ್ರನು ಕೆಂಪು ಅಥವಾ ತಾಮ್ರದ ಬಣ್ಣದಲ್ಲಿ ಗೋಚರಿಸುವುದು ಒಂದು ವಿಸ್ಮಯಕಾರಿ ವಿದ್ಯಮಾನ. ಇದನ್ನು ರಕ್ತಚಂದ್ರ ಅಥವಾ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಭೂಮಿಯ ನೆರಳಿನಲ್ಲಿ ಚಂದ್ರ ಇರುವುದರಿಂದ, ಸಾಮಾನ್ಯವಾಗಿ ಕಪ್ಪಾಗಿ ಕಾಣಿಸಬೇಕು. ಆದರೆ, ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ಚಂದ್ರನ ಮೇಲೆ ವಕ್ರೀಭವನಗೊಳಿಸುತ್ತದೆ. ಸೂರ್ಯನ ಬಿಳಿ ಬೆಳಕಿನಲ್ಲಿರುವ ಏಳು ಬಣ್ಣಗಳಲ್ಲಿ ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣಗಳು ವಾತಾವರಣದ ಮೂಲಕ ಬಾಗಿ ಚಂದ್ರನ ಮೇಲೆ ಬೀಳುತ್ತವೆ. ಈ ಬೆಳಕು ನಮ್ಮ ಕಣ್ಣುಗಳಿಗೆ ಪ್ರತಿಫಲಿತವಾದಾಗ, ಚಂದ್ರನು ರಕ್ತವರ್ಣದ್ದಾಗಿ ಕಾಣಿಸುತ್ತಾನೆ. ಪ್ರತಿ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುವುದಿಲ್ಲ ಏಕೆಂದರೆ, ಚಂದ್ರನು ಭೂಮಿಯ ಸುತ್ತ ಐದು ಡಿಗ್ರಿ ಕೋನದಲ್ಲಿ ಸುತ್ತುತ್ತಾನೆ. ಇತ್ತೀಚೆಗೆ ಫೆಬ್ರವರಿ 17 ರಂದು ಕಂಕಣ ಸೂರ್ಯಗ್ರಹಣ (ರಿಂಗ್ ಆಫ್ ಫೈರ್) ಸಂಭವಿಸಿತ್ತು. ಅದು ಭಾರತಕ್ಕೆ ಕಾಣಿಸದೆ ಅಂಟಾರ್ಟಿಕಾ ಪ್ರದೇಶದಲ್ಲಿ ಮಾತ್ರ ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ, ಪ್ರಸ್ತುತ ಸಂಪೂರ್ಣ ಚಂದ್ರ ಗ್ರಹಣವು ಜನರಿಗೆ ಗೋಚರವಾಗಲಿದೆ ಎಂದು ನೆಹರು ತಾರಾಲಯದ ನಿರ್ದೇಶಕ ಗುರ ಪ್ರಸಾದ್ ತಿಳಿಸಿದ್ದಾರೆ.

ವರದಿ: ನಟರಾಜ್ ಮೆಟ್ರೋ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us