ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿಕೆಗೆ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi), ‘ಖರ್ಗೆಯವರು ಬಾಯಿ ತಪ್ಪಿ ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದು ಕರೆದರು. ಆದರೆ, ಬಟ್ಲಾ ಹೌಸ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗಾಗಿ ನಿಜವಾಗಿಯೂ ಕಣ್ಣೀರು ಹಾಕಿದ್ದು ಸೋನಿಯಾ ಗಾಂಧಿ. ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ವಹಿಸಿದ್ದು, 2004 ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ(POTA) ರದ್ದುಗೊಳಿಸಿದ್ದು ಕಾಂಗ್ರೆಸ್ ಎಂದರು.

ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ
ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಜೋಶಿ
Follow us
|

Updated on: Oct 12, 2024 | 11:55 PM

ಬೆಂಗಳೂರು, ಅ.12: ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿಕೆಗೆ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi), ‘ಖರ್ಗೆಯವರು ಬಾಯಿ ತಪ್ಪಿ ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದು ಕರೆದರು. ಆದರೆ, ಬಟ್ಲಾ ಹೌಸ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗಾಗಿ ನಿಜವಾಗಿಯೂ ಕಣ್ಣೀರು ಹಾಕಿದ್ದು ಸೋನಿಯಾ ಗಾಂಧಿ. ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ವಹಿಸಿದ್ದು, 2004 ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ(POTA) ರದ್ದುಗೊಳಿಸಿದ್ದು ಕಾಂಗ್ರೆಸ್. ಅಷ್ಟೇ ಅಲ್ಲ, ಅವರದೇ ಪಕ್ಷದ ಅಭ್ಯರ್ಥಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೊಂದಿಗೆ ಕೈಕುಲುಕಿದ್ದು ಎಂದು ತಮ್ಮ ಎಕ್ಸ್​ ಖಾತೆ ಮೂಲಕ ವಾಗ್ದಾಳಿ ನಡೆಸಿದರು.

ಮೋದಿ ನೇತೃತ್ವದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ

‘ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಕಂಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾತ್ರ. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಕಾಶ್ಮೀರಿ ಯುವಕರ ಕೈಯಲ್ಲಿ ಕಲ್ಲುಗಳಿದ್ದವು. ಆದರೆ, ಇಂದು ಅವರಿಗೆ ಉದ್ಯೋಗವಿದೆ. ಒಬ್ಬ ಹಿರಿಯ ನಾಯಕರಾಗಿ ಶ್ರೀ ಖರ್ಗೆಯವರು ಏನು ಹೇಳುತ್ತಾರೆ ಎಂಬುದರ ಮೇಲೆ ನಿಗಾ ಇರಬೇಕು ಎಂದು ಹೇಳಿದ್ದಾರೆ.

ಇದನ್ನೂ  ಓದಿ:ಬಿಜೆಪಿ ಭಯೋತ್ಪಾದಕರ ಪಕ್ಷ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ

ಖರ್ಗೆ ಅವರು ತಮ್ಮ ಪಾರ್ಟಿಯಲ್ಲಿ ನಡೀಯುತ್ತಿರುವುದರ ಆಧಾರದ ಮೇಲೆ ಹೇಳಿರಬೇಕು-ಜೋಶಿ

ಇನ್ನು ಹುಬ್ಬಳ್ಳಿಯಲ್ಲಿ ಜೋಶಿ ಮಾತನಾಡಿ, ‘ಖರ್ಗೆ ಅವರು ತಮ್ಮ ಪಾರ್ಟಿಯಲ್ಲಿ ಏನು ನಡೀತಿದೆ, ಅದರ ಆಧಾರದ ಮೇಲೆ ಹೇಳಿರಬೇಕು ಎಂದರು.ಬಾಬು ಜಗಜೀವನರಾಮ್,ಅಂಬೇಡ್ಕರ್, ಸೀತಾರಾಮ್ ಕೇಸರಿ ಅಂತವರಿಗೆ ಘೋರವಾದ ಅನ್ಯಾಯ ಮಾಡಿದ್ದಾರೆ. ಇವತ್ತು ಒಂದೆ ಒಂದು OBC ಸಮುದಾಯದವರು ಪ್ರಧಾನ ಮಂತ್ರಿ ಮಾಡಿಲ್ಲ. ಎಲ್ಲವನ್ನೂ ನಕಲಿ ಗಾಂಧಿಗಳಿಗೆ ಮೀಸಲಿಟ್ಟಿದ್ದಾರೆ. ಅವರು ನಮ್ಮ ಬಗ್ಗೆ ಏನ ಮಾತಾಡ್ತಾರೆ ಎಂದು ಕಿಡಿಕಾರಿದರು.

ದಲಿತರ ವಿರುದ್ದ ಉದ್ದಟತನ ಮಾಡಿದ್ದಕ್ಕೆ ಕಾಂಗ್ರೆಸ್​ ಸ್ಥಿತಿ ಹೀಗಾಗಿದೆ

‘ನೀವು ಆರ್ಟಿಕಲ್ 370 ಇಟ್ಕೊಂಡು ಭಯೋತ್ಪಾದಕರನ್ನು ಬೆಳಸಿದ್ದು ದೇಶಕ್ಕೆ ಗೊತ್ತಿದೆ. ಖರ್ಗೆ ಅವರೇ ನಿಮ್ಮ ರಾಹುಲ್ ಬಾಬಾ, ಸೋನಿಯಾ ಗಾಂಧಿ ನೇತೃತ್ವದಲ್ಲಿ 400 ಸೀಟ್ ಇದ್ದೀರಿ. ಇವತ್ತು ಯಾವ ರಾಜ್ಯಕ್ಕೆ ಹೋದರೂ ನಿಮಗೆ ರಿಜನಲ್ ಪಾರ್ಟಿ ಬೇಕು. ಉತ್ತರ ಕರ್ನಾಟಕದಲ್ಲಿ ಅಂಗಿ ಹಿಡಕೊಂಡ ಹೋಗುತ್ತಾರೆ ಎಂಬ ಮಾತಿನಂತೆ ಕಾಂಗ್ರೆಸ್ ಪಕ್ಷದ ಸ್ಥಿತಿ ಆಗಿದೆ. ದಲಿತರ ವಿರುದ್ದ ಉದ್ದಟತನ ಮಾಡಿದ್ದಕ್ಕೆ ನಿಮ್ಮ ಸ್ಥಿತಿ ಹೀಗಾಗಿದೆ. ದಲಿತರಿಗೆ ಗೌರವ ಕೊಟ್ಟಿದ್ದು ಬಿಜೆಪಿ ಎಂದರು.

ಕಾಂಗ್ರೆಸ್ ಇಸ್ಲಾಂಮಿಕ್ ಬೆಂಬಲಿತ ಪಾರ್ಟಿ

ಕಾಂಗ್ರೆಸ್ ಇಸ್ಲಾಂಮಿಕ್ ಬೆಂಬಲಿತ ಪಾರ್ಟಿ ಎನ್ನುವುದಕ್ಕೆ ‘ಹುಬ್ಬಳ್ಳಿ ಕೇಸ್ ವಾಪಸ್ ತಗೆದುಕೊಂಡಿರುವುದೇ ಸಾಕ್ಷ್ಯ. ಪೊಲೀಸ್ ಅಧಿಕಾರಿಗಳು ಏನು ಪ್ರತಿಭಟನೆ ಎಂದು ಕೇಳಿದರು. ‘ನಾವು ನಮ್ಮ ಸಲುವಾಗಿ ಪ್ರತಿಭಟನೆ ಮಾಡುತ್ತಿಲ್ಲ. ಅವತ್ತು ಪೊಲೀಸರ ಹತ್ಯೆಯಾಗತಿತ್ತು. ಇದು ಚಾರ್ಜ್ ಶೀಟ್ ನಲ್ಲಿದೆ. ಇದೀಗ ಅಂತಹ ಉಗ್ರಗಾಮಿಗಳ ಕೇಸ್ ತಗೀದು ಹಾಕಿದ್ದೀರಿ. ಖರ್ಗೆ ಸಾಹೇಬರು ಮೊದಲು ಸಿದ್ದರಾಮಯ್ಯಗೆ ಹೇಳಿ ಅದನ್ನು ಬಂದ್ ಮಾಡಿಸಿ. ಆಮೇಲೆ ಬೇರೆಯವರಿಗೆ ಹೇಳಿ ಎಂದು ಟಾಂಗ್​ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ