Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಉಗ್ರ ದಾಳಿಯ ಆರೋಪಿ ತಹವ್ವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಶೀಘ್ರ ಹಸ್ತಾಂತರ

ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ(Tahawwur Rana) ನನ್ನು ಶೀಘ್ರದಲ್ಲೇ ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಬಹುದು. ಭಾರತದ ತನಿಖಾ ಸಂಸ್ಥೆಗಳ ತಂಡ  ಅಮೆರಿಕ ತಲುಪಿದೆ. ತಂಡವು ಅಮೆರಿಕದ ಅಧಿಕಾರಿಗಳೊಂದಿಗೆ ಎಲ್ಲಾ ದಾಖಲೆಗಳು ಮತ್ತು ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿದೆ. ಮೂಲಗಳ ಪ್ರಕಾರ, ತಹವ್ವುರ್ ರಾಣಾ ಅವರನ್ನು ಶೀಘ್ರದಲ್ಲೇ ಗಡಿಪಾರು ಮಾಡುವ ಸಾಧ್ಯತೆ ಹೆಚ್ಚು.

ಮುಂಬೈ ಉಗ್ರ ದಾಳಿಯ ಆರೋಪಿ ತಹವ್ವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಶೀಘ್ರ ಹಸ್ತಾಂತರ
ತಹವ್ವುರ್Image Credit source: India Today
Follow us
ನಯನಾ ರಾಜೀವ್
|

Updated on:Apr 09, 2025 | 10:02 AM

ವಾಷಿಂಗ್ಟನ್, ಏಪ್ರಿಲ್ 09: ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ(Tahawwur Rana) ನನ್ನು ಶೀಘ್ರದಲ್ಲೇ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ ಮಾಡಬಹುದು. ಭಾರತದ ತನಿಖಾ ಸಂಸ್ಥೆಗಳ ತಂಡ  ಅಮೆರಿಕ ತಲುಪಿದೆ. ತಂಡವು ಅಮೆರಿಕದ ಅಧಿಕಾರಿಗಳೊಂದಿಗೆ ಎಲ್ಲಾ ದಾಖಲೆಗಳು ಮತ್ತು ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿದೆ. ಮೂಲಗಳ ಪ್ರಕಾರ, ತಹವ್ವುರ್ ರಾಣಾ ಅವರನ್ನು ಶೀಘ್ರದಲ್ಲೇ ಗಡಿಪಾರು ಮಾಡುವ ಸಾಧ್ಯತೆ ಹೆಚ್ಚು.

ರಾಣಾ ಬುಧವಾರ ಭಾರತಕ್ಕೆ ಬರುತ್ತಿಲ್ಲ ಮತ್ತು ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಆತನ ಹಸ್ತಾಂತರಕ್ಕೆ ಸಂಬಂಧಿಸಿದ ಎಲ್ಲಾ ಕಾಗದಪತ್ರಗಳು ಅಮೆರಿಕದೊಂದಿಗೆ ಪೂರ್ಣಗೊಂಡಿವೆ. ಭಾರತೀಯ ಏಜೆನ್ಸಿಗಳು ಎಲ್ಲಾ ಅಗತ್ಯ ದಾಖಲೆಗಳನ್ನು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿವೆ ಮತ್ತು ನ್ಯಾಯಾಲಯದಿಂದ ಅನುಮತಿಯನ್ನೂ ಪಡೆದಿವೆ.

ಅಮೆರಿಕ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ. ಈಗ ಯಾವುದೇ ಸಮಯದಲ್ಲಿ ಭಯೋತ್ಪಾದಕ ತಹವ್ವೂರ್ ರಾಣಾ ಭಾರತಕ್ಕೆ ಬರಬಹುದು. ರಾಣಾ ಭಾರತಕ್ಕೆ ಬಂದರೆ ಅವರನ್ನು ಎಲ್ಲಿ ಇಡಲಾಗುತ್ತದೆ? ಇದಕ್ಕೆ ಎರಡು ಆಯ್ಕೆಗಳಿವೆ. ಮೊದಲನೆಯದು ದೆಹಲಿಯ ತಿಹಾರ್ ಜೈಲು ಮತ್ತು ಎರಡನೆಯದು ಮುಂಬೈನ ಆರ್ಥರ್ ರಸ್ತೆ ಜೈಲು. ಈ ಎರಡೂ ಸ್ಥಳಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಇದನ್ನೂ ಓದಿ
Image
ಪ್ರಧಾನಿ ಮೋದಿ ಇರುವ ವಿಮಾನದ ಮೇಲೆ ದಾಳಿ ಮಾಡುವುದಾಗಿ ಉಗ್ರರ ಎಚ್ಚರಿಕೆ
Image
ಪಾಕಿಸ್ತಾನದ ಇಬ್ಬರು ಉಗ್ರರು ತಾಜ್​ ಹೋಟೆಲ್​ನ್ನು ಸ್ಪೋಟಿಸಲಿದ್ದಾರೆ, ಮುಂಬೈ ಪೊಲೀಸರಿಗೆ ಬಂತು ಹೀಗೊಂದು ಬೆದರಿಕೆ ಕರೆ
Image
26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ
Image
ಭಾರತಮಾತೆಯ ಹೆಮ್ಮೆಯ ಪುತ್ರ ಸಂದೀಪ್​ ಉನ್ನಿಕೃಷ್ಣನ್​ ಜನ್ಮದಿನ ಇಂದು; ಮುಂಬೈ ಉಗ್ರದಾಳಿಯ ಹೋರಾಟದ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳೋಣ

ಅಂತಿಮ ನಿರ್ಧಾರ ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ. ಈಗ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅಮೆರಿಕದ ಸುಪ್ರೀಂ ಕೋರ್ಟ್ ತನ್ನ ಎಲ್ಲಾ ಬಾಗಿಲುಗಳನ್ನು ಮುಚ್ಚಿದೆ. ಇತ್ತೀಚೆಗೆ, ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಮತ್ತಷ್ಟು ಓದಿ: ಮುಂಬೈ ದಾಳಿ ಸಂಚುಕೋರ ತಹಾವುರ್‌ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಸಮ್ಮತಿ: ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು

ಇದು ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವಲ್ಲಿನ ಮತ್ತೊಂದು ಅಡಚಣೆಯನ್ನು ತೆಗೆದುಹಾಕಿತು. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ತಕ್ಷಣ, ತಹವ್ವುರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಅನುಮೋದನೆ ನೀಡಿದರು.

ರಾಣಾ ಯಾರು ಮತ್ತು ಅವನಿಗೆ ಪಾಕಿಸ್ತಾನದ ಜೊತೆ ಏನು ಸಂಬಂಧ?

ವಾಸ್ತವವಾಗಿ, ತಹವ್ವುರ್ ರಾಣಾ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ. ಅವನ ವಯಸ್ಸು 64. ಭಯೋತ್ಪಾದಕ ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿರುವ ‘ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್’ನಲ್ಲಿದ್ದಾನೆ.

ಈತ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ಸಂಬಂಧ ಹೊಂದಿದ್ದಾನೆ. 2008 ರ ನವೆಂಬರ್ 26 ರಂದು (26/11) ನಡೆದ ದಾಳಿಯ ಪ್ರಮುಖ ಸಂಚುಕೋರರಲ್ಲಿ ಹೆಡ್ಲಿ ಒಬ್ಬ. ತಹಾವೂರ್ ರಾಣಾನನ್ನು ಅಮೆರಿಕದಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದ ಭಯೋತ್ಪಾದಕ ಪಿತೂರಿಗೆ ಸಹಾಯ ಮಾಡಿದ ಒಂದು ಆರೋಪ ಮತ್ತು ಮುಂಬೈ ದಾಳಿಗೆ ಕಾರಣವಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಬೆಂಬಲ ನೀಡಿದ ಒಂದು ಆರೋಪದ ಮೇಲೆ ದೋಷಿ ಎಂದು ಘೋಷಿಸಲಾಯಿತು. ಮುಂಬೈ ದಾಳಿಗೆ ಲಷ್ಕರ್ ಹೊಣೆ.

2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದ್ದರು. ಈ ದಾಳಿಗಳನ್ನು 10 ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:01 am, Wed, 9 April 25

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್