Tahawwur Rana: 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ
2008 ರ ಮುಂಬೈನ ಭಯೋತ್ಪಾದಕ ದಾಳಿಯ ಆರೋಪಿ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್ ನ್ಯಾಯಾಲಯವು ಅನುಮೋದನೆ ನೀಡಿದೆ.
2008 ರ ಮುಂಬೈನ ಭಯೋತ್ಪಾದಕ ದಾಳಿಯ ಆರೋಪಿ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್ ನ್ಯಾಯಾಲಯವು ಅನುಮೋದನೆ ನೀಡಿದೆ. ಅಮೆರಿಕದ ಜೈಲಿನಲ್ಲಿರುವ 26/11 ದಾಳಿಯಲ್ಲಿ ಬೇಕಾಗಿರುವ ರಾಣಾನನ್ನು ಭಾರತಕ್ಕೆ ಕಳುಹಿಸಬಹುದು ಎಂದು ನ್ಯಾಯಾಲಯ ಹೇಳಿದೆ. 2020 ರಲ್ಲಿ, ಹಸ್ತಾಂತರದ ದೃಷ್ಟಿಯಿಂದ 62 ವರ್ಷದ ರಾಣಾ ಅವರನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಕೋರಿ ದೂರು ದಾಖಲಿಸಲಾಯಿತು. ಬೈಡೆನ್ ಆಡಳಿತವು ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಬೆಂಬಲಿಸಿತು ಮತ್ತು ಅನುಮೋದಿಸಿತು.
ಈ ನಿರ್ಧಾರವನ್ನು ಭಾರತ ನಿರೀಕ್ಷಿಸಿತ್ತು. ಒಂದು ತಿಂಗಳ ಹಿಂದೆ, ಮೂಲಗಳ ಪ್ರಕಾರ, ಭಾರತವು ಹಸ್ತಾಂತರಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರರು 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದರು. ಕ್ಯಾಲಿಫೋರ್ನಿಯಾದ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟ್ರಲ್ ಡಿಸ್ಟ್ರಿಕ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು.
ಯುಎಸ್ ಮ್ಯಾಜಿಸ್ಟ್ರೇಟ್ ಜಸ್ಟೀಸ್ ಜಾಕ್ವೆಲಿನ್ ಚೂಲ್ಜಿಯಾನ್ ಅವರು ನ್ಯಾಯಾಲಯದ ಮುಂದೆ ಇರಿಸಲಾಗಿರುವ ಸಾಕ್ಷ್ಯವು ಸಂಪೂರ್ಣವಾಗಿ ಗಣನೀಯವಾಗಿದೆ ಎಂದು ಹೇಳಿದರು.
ಮತ್ತಷ್ಟು ಓದಿ: Mumbai Attack: 26/11 ದಾಳಿಯಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ: ಕರಂಬಿರ್ ಕಾಂಗ್
ಭಾರತ ನೀಡಿದ ಪುರಾವೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗಿದೆ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಅವರನ್ನು ಭಾರತಕ್ಕೆ ಕರೆತರಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಿದ್ಧ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ 26/11 ದಾಳಿಯಲ್ಲಿ ರಾಣಾ ಪಾತ್ರದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಆರು ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದ್ದರು. ಈ ದಾಳಿಯನ್ನು 10 ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ