Imran Khan: ಇಮ್ರಾನ್ ಖಾನ್ ನಿವಾಸದಲ್ಲಿ 40 ಉಗ್ರರಿಗೆ ಆಶ್ರಯ, 24 ಗಂಟೆಯೊಳಗೆ ನಮಗೆ ಒಪ್ಪಿಸಿ ಪೊಲೀಸರು
ಇಮ್ರಾನ್ ಖಾನ್ ಅವರ ಲಾಹೋರ್ನಲ್ಲಿರುವ ಮನೆಯಲ್ಲಿ 30-40 ಜನ ಭಯೋತ್ಪಾದಕರು ಆಶ್ರಯ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಕಳೆದ ವಾರ ಹೈಕೋರ್ಟ್ ಮುಂದೆ ಬಂಧಿಸಿ, ಸೆರೆಮನೆಯಲ್ಲಿ ಇಡಲಾಗಿತ್ತು, ನಂತರ ಈ ವಿಚಾರವಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪಾಕಿಸ್ತಾನ ಸುಪ್ರೀಂ ಕೋರ್ಟ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಇದೀಗ ಇಮ್ರಾನ್ ಖಾನ್ ಅವರ ಮನೆಯಲ್ಲಿ ಉಗ್ರರು ಇದ್ದರೆ ಎಂದು ಪಾಕ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇಮ್ರಾನ್ ಖಾನ್ ಅವರ ಲಾಹೋರ್ನಲ್ಲಿರುವ ಮನೆಯಲ್ಲಿ 30-40 ಜನ ಭಯೋತ್ಪಾದಕರು ಆಶ್ರಯ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ, ಇಮ್ರಾನ್ ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಗೆ ಭಯೋತ್ಪಾದಕರನ್ನು ತಕ್ಷಣ ಒಪ್ಪಿಸುವಂತೆ ಪಾಕ್ ಪೊಲೀಸರು ಸೂಚನೆ ನೀಡಿದ್ದಾರೆ. 24 ಗಂಟೆಯೊಳಗೆ ನಮಗೆ ಅವರನ್ನು ಒಪ್ಪಿಸಬೇಕು ಎಂದು ಸಮಯದ ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಇಮ್ರಾನ್ ಖಾನ್ ನಿವಾಸದಲ್ಲಿ ಉಗ್ರರು ಆಶ್ರಯ ಪಡೆದಿದ್ದಾರೆ. ಈಗಾಗಲೇ ಇಮ್ರಾನ್ ಖಾನ್ ಸಲ್ಲಿಸಿದ ಅರ್ಜಿಯ ಮೇಲಿನ ತೀರ್ಪನ್ನು ಲಾಹೋರ್ ಹೈಕೋರ್ಟ್ (LHC) ಕಾಯ್ದಿರಿಸಿದೆ. ಅಲ್ ಖಾದಿರ್ ಟ್ರಸ್ಟ್ ಕೇಸ್ ಪ್ರಕರಣದಲ್ಲಿ ಬಂಧಿತರಾಗಿದ್ದಂದಿನಿಂದ ಅವರ ವಿರುದ್ಧ ದಾಖಲಾಗಿರುವ ಪ್ರತಿಯೊಂದು ಪ್ರಕರಣಕ್ಕೂ ಇದು ಅನ್ವಯಿಸುತ್ತದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಭೂ ಹಗರಣ ಪ್ರಕರಣದಲ್ಲಿ ಖಾನ್ ಅವರ ಬಂಧನದ ನಂತರ ಪ್ರತಿಭಟನೆಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ವಿರುದ್ಧ ಇತರ ಪ್ರಕರಣಗಳನ್ನು ಸಹ ದಾಖಲಿಸಲಾಯಿತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Wed, 17 May 23