AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಪ್ರಜೆಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ; ಇರಾನ್‌ ವಿರುದ್ಧ ಅಮೆರಿಕ ಮುಂತಾದ 7 ದೇಶಗಳ ಜಂಟಿ ಹೇಳಿಕೆ

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಅಮೆರಿಕದ ವಾಯನೆಲೆಗಳು, ಅಮೆರಿಕದ ರಾಯಭಾರ ಕಚೇರಿಗಳ ಮೇಲೆಲ್ಲ ದಾಳಿ ನಡೆಸಿದೆ. ಹೀಗಾಗಿ, ಇದೀಗ ಇರಾನ್ ವಿರುದ್ಧ ಇಸ್ರೇಲ್, ಅಮೆರಿಕದ ಜೊತೆಗೆ ದುಬೈ, ಕುವೈತ್, ಬಹ್ರೇನ್, ಅಬುಧಾಬಿ, ಜೋರ್ಡಾನ್, ಸೌದಿ ಅರೇಬಿಯ, ಯುಎಇ ಸಮರ ಸಾರಿವೆ. 3 ದಿನಗಳಿಂದ ಈ ಯುದ್ಧ ನಡೆಯುತ್ತಿರುವುದರಿಂದ ಇಂದು ಈ ಎಲ್ಲ ದೇಶಗಳು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. ಈ ಹೇಳಿಕೆಯ ಮೂಲಕ ಇರಾನ್​ಗೆ ಖಡಕ್ ಸಂದೇಶ ರವಾನಿಸಿವೆ.

ನಮ್ಮ ಪ್ರಜೆಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ; ಇರಾನ್‌ ವಿರುದ್ಧ ಅಮೆರಿಕ ಮುಂತಾದ 7 ದೇಶಗಳ ಜಂಟಿ ಹೇಳಿಕೆ
Iran Attack
ಸುಷ್ಮಾ ಚಕ್ರೆ
|

Updated on: Mar 02, 2026 | 4:08 PM

Share

ನವದೆಹಲಿ, ಮಾರ್ಚ್ 2: ಇಸ್ರೇಲ್ ಜೊತೆಗಿನ ವೈಷಮ್ಯದ ಬಳಿಕ ಇದೀಗ ಕತಾರ್, ಬಹ್ರೇನ್, ಯುಎಇ ಮುಂತಾದ ಅರಬ್ ದೇಶಗಳ ಮೇಲೆ ಇರಾನ್ ದಾಳಿ (Iran Attack) ನಡೆಸಿದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಅಮೆರಿಕ ಸೇರಿದಂತೆ ಈ 7 ದೇಶಗಳು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. “ನಮ್ಮ ನಾಗರಿಕರು, ಸಾರ್ವಭೌಮತ್ವ ಮತ್ತು ಪ್ರದೇಶದ ರಕ್ಷಣೆಯಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ದಾಳಿಗಳ ಸಂದರ್ಭದಲ್ಲಿ ನಮ್ಮ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಬದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ಇರಾನ್​ಗೆ ಖಡಕ್ ಸಂದೇಶ ರವಾನಿಸಲಾಗಿದೆ.

ತನ್ನ ದೇಶದ ಮೇಲಿನ ದಾಳಿಗೆ ಇರಾನ್‌ನ ಪ್ರತೀಕಾರದ ದಾಳಿಗಳು ಮುಂದುವರಿದಂತೆ ಕತಾರ್, ಯುಎಇ, ಬಹ್ರೇನ್, ಕುವೈತ್‌ನಲ್ಲಿ ಸ್ಫೋಟಗಳು ಹೆಚ್ಚಾಗಿವೆ. ಅರಬ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳು ಮತ್ತು ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ. ಇದರಿಂದ ತನ್ನದೇನೂ ತಪ್ಪಿಲ್ಲದಿದ್ದರೂ ಈ ದೇಶಗಳು ದಾಳಿಗೆ ಒಳಗಾಗಿವೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಇತ್ತೀಚೆಗೆ ಈ ಪ್ರದೇಶದಾದ್ಯಂತ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಸಾಮ್ರಾಜ್ಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳು ಜಂಟಿಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.

ಇದನ್ನೂ ಓದಿ: Video: ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ

ಯುನೈಟೆಡ್ ಸ್ಟೇಟ್ಸ್, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಯುಎಇ ಮತ್ತು ಕಿಂಗ್​ಡಮ್ ಆಫ್ ಸೌದಿ ಅರೇಬಿಯಾ, ಬಹ್ರೇನ್, ಇರಾಕ್ ದೇಶಗಳ ಮೇಲೆ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ನಮ್ಮ ಪ್ರಜೆಗಳ ಮತ್ತು ಪ್ರದೇಶದ ರಕ್ಷಣೆಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ನಾವು ಈ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಬಲವಾಗಿ ಖಂಡಿಸುತ್ತೇವೆ. ಈ ಅನ್ಯಾಯದ ದಾಳಿಗಳು ಸಾರ್ವಭೌಮ ಪ್ರದೇಶ, ಅಳಿವಿನಂಚಿನಲ್ಲಿರುವ ಜನಸಂಖ್ಯೆ ಮತ್ತು ನಾಗರಿಕ ಮೂಲಸೌಕರ್ಯವನ್ನು ಹಾನಿಗೊಳಿಸಿವೆ ಎಂದು ಜಂಟಿ ಹೇಳಿಕೆಯಲ್ಲಿ ಹೇಳಿವೆ.

Joint Statement

ಇರಾನ್​ನ ಕ್ರಮಗಳು ಬಹು ರಾಜ್ಯಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ಅಪಾಯಕಾರಿ ಬೆಳವಣಿಗೆಯಾಗಿದೆ. ನಾಗರಿಕರು ಮತ್ತು ಯುದ್ಧದಲ್ಲಿ ತೊಡಗದ ದೇಶಗಳನ್ನು ಕೂಡ ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಅಸ್ಥಿರಗೊಳಿಸುವ ನಡವಳಿಕೆಯಾಗಿದೆ. ನಮ್ಮ ನಾಗರಿಕರು, ಸಾರ್ವಭೌಮತ್ವ ಮತ್ತು ಪ್ರದೇಶದ ರಕ್ಷಣೆಯಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ದಾಳಿಗಳ ಸಂದರ್ಭದಲ್ಲಿ ನಮ್ಮ ಸ್ವರಕ್ಷಣೆಯ ಹಕ್ಕನ್ನು ಪುನರುಚ್ಚರಿಸುತ್ತೇವೆ. ಪ್ರಾದೇಶಿಕ ಭದ್ರತೆಗೆ ನಾವು ಬದ್ಧರಾಗಿದ್ದೇವೆ ಎಂದು ಈ ದೇಶಗಳು ಹೇಳಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ