Imran Khan arrested: ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಪಾಕಿಸ್ತಾನದ ರೇಂಜರ್ಸ್ ಕೊರಳಪಟ್ಟಿ ಹಿಡಿದು ದರದರ ಎಳೆದೊಯ್ದರು!
ಪಿಟಿಐ ಪಕ್ಷದ ಒಬ್ಬ ಧುರೀಣ ಹೇಳುವ ಹಾಗೆ ರೇಂಜರ್ಸ್ ಇಮ್ರಾನ್ ಅವರನ್ನು ಕೋರ್ಟ್ ಹೊರಭಾಗದಿಂದ ಅಪಹರಿಸಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಮತ್ತು ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) (PTI) ಅಧ್ಯಕ್ಷ ಇಮ್ರಾನ್ ಖಾನ್ (Imran Khan) ಒಬ್ಬ ಕ್ರಿಕೆಟರ್ ಆಗಿ ಸಂಪಾದಿಸಿದ್ದ ಮಾನ-ಸನ್ಮಾನ, ಗೌರವಗಳನ್ನು ಒಬ್ಬ ರಾಜಕಾರಣಿಯಾಗಿ ಕಳೆದುಕೊಳ್ಳುತ್ತಿದ್ದಾರೆ ಅಲ್ಲಿನ ರೇಂಜರ್ಸ್ (ಪ್ಯಾರಾ ಮಿಲಿಟರಿ ಪಡೆ); ಇಮ್ರಾನ್ ಖಾನ್ 1992 ರಲ್ಲಿ ಕ್ರಿಕೆಟ್ ವಿಶ್ವಕಪ್ (world Cup) ಗೆದ್ದುಕೊಟ್ಟವರು ಎಂಬ ಸಂಗತಿಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ ಅವರನ್ನು ಇವತ್ತು ಇಸ್ಲಾಮಾಬಾದ್ ಹೈಕೋರ್ಟ್ ಹೊರಭಾಗದಲ್ಲಿ ಬಂಧಿಸಲಾಯಿತು. ಅವರನ್ನು ಗೌರವಯುತವಾಗಿ ವಶಕ್ಕೆ ತೆಗೆದುಕೊಂಡಿದ್ದರೆ, ಕತೆ ಬೇರೆಯಾಗಿರುತ್ತಿತ್ತು. ಆದರೆ ಈ ವಿಡಿಯೋ ನೋಡಿ. ಒಬ್ಬ ಥರ್ಡ್ ಗ್ರೇಡ್ ಅಪರಾಧಿಯಂತೆ ಅವರ ಕೊರಳಪಟ್ಟಿ ಹಿಡಿದು ಎಳೆದೊಯ್ಯಲಾಗುತ್ತಿದೆ. ಪಿಟಿಐ ಪಕ್ಷದ ಒಬ್ಬ ಧುರೀಣ ಹೇಳುವ ಹಾಗೆ ರೇಂಜರ್ಸ್ ಇಮ್ರಾನ್ ಅವರನ್ನು ಕೋರ್ಟ್ ಹೊರಭಾಗದಿಂದ ಅಪಹರಿಸಿದ್ದಾರೆ. ಏನೇ ಇರಲಿ, ವಿಶ್ವಕಪ್ ಗೆದ್ದ ನಾಯಕ ಮತ್ತು ದೇಶದ ಪ್ರಧಾನ ಮಂತ್ರಿಯಾಗಿದ್ದ ಇಮ್ರಾನ್ ಖಾನ್ ಗೆ ಈ ಸ್ಥಿತಿ ಬರಬಾರದಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ