26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ

ನವೆಂಬರ್ 26, 2008ರಂದು ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆದು ಇಂದಿಗೆ 13 ವರ್ಷಗಳು ತುಂಬಿವೆ. ಆ ದಾಳಿಯ ಸಂದರ್ಭ ಹಾಗೂ ನಂತರದ ವಿವರಗಳನ್ನು ಚಿತ್ರಗಳ ಸಮೇತ ಇಲ್ಲಿ ನೀಡಲಾಗಿದೆ.

26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ
ತಾಜ್ ಹೋಟೆಲ್ ಮೇಲೆ ದಾಳಿಯ ಸಂದರ್ಭದ ದೃಶ್ಯ (Image: Reuters)
Follow us
TV9 Web
| Updated By: shivaprasad.hs

Updated on:Nov 26, 2021 | 11:13 AM

ಮುಂಬೈ: ನವೆಂಬರ್ 26, 2008- ಭಾರತೀಯರು ಎಂದೂ ಮರೆಯಲಾರದ ಕರಾಳ ದಿನದ ಘಟನೆ ನಡೆದು ಇಂದಿಗೆ 13 ವರ್ಷಗಳಾಗಿವೆ. ಅಂದು ಮುಂಬೈನಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆದವು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಹತ್ತು ಉಗ್ರರು ಮುಂಬೈನಾದ್ಯಂತ ನಾಲ್ಕು ದಿನಗಳ ಕಾಲ 12 ಕಡೆ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳನ್ನು ನಡೆಸಿದರು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಮಹಲ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಮತ್ತು ನಾರಿಮನ್ ಹೌಸ್ ಯಹೂದಿ ಸಮುದಾಯ ಕೇಂದ್ರದಂತಹ ಕೆಲವು ಪ್ರಮುಖ ಸ್ಥಳಗಳಿಗೆ ಮುತ್ತಿಗೆ ಹಾಕಿ, ಭಯೋತ್ಪಾದಕರು ದಾಳಿ ನಡೆಸಿದ್ದರು. ಇದರಿಂದಾಗಿ 18 ಭದ್ರತಾ ಪಡೆಯ ಸಿಬ್ಬಂದಿಯೂ ಸೇರಿದಂತೆ ಒಟ್ಟು 166 ಜನರು ದುರ್ಮರಣಕ್ಕೀಡಾದರು. ದಾಳಿಗೆ ಕಾರಣರಾದ 10 ಉಗ್ರರಲ್ಲಿ 9 ಉಗ್ರರು ಕಾರ್ಯಾಚರಣೆಯಲ್ಲಿ ಹತರಾದರು.

ಆಗಿನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಲಸ್ಕರ್ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ತುಕಾರಾಂ ಓಂಬ್ಳೆ ಮೊದಲಾದವರು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಾಣಾರ್ಪಣೆ ಮಾಡಿದರು. ಕಾರ್ಯಾಚರಣೆಯ ನಂತರ ಓರ್ವ ಉಗ್ರ ಸೆರೆಸಿಕ್ಕಿದ್ದ. ನಂತರ ಅವನನ್ನು ಗಲ್ಲಿಗೇರಿಸಲಾಯಿತು. ಮುಂಬೈ ದಾಳಿಯ ಕರಾಳ ಘಟನೆಯ ಮತ್ತಷ್ಟು ಮಾಹಿತಿ ಇಲ್ಲಿದೆ.

ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ದಾಳಿ: ನವೆಂಬರ್ 26, 2008 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 15 ದೇಶಗಳ 166 ಜನರು ಸಾವನ್ನಪ್ಪಿದರು. ಈ ದಾಳಿಗಳನ್ನು ಐಕಾನಿಕ್ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಟ್ರೈಡೆಂಟ್ ಹೋಟೆಲ್, ನಾರಿಮನ್ ಹೌಸ್, ಮೆಟ್ರೋ ಚಿತ್ರಮಂದಿರ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ಇತರ ಸ್ಥಳಗಳಲ್ಲಿ ನಡೆಸಲಾಯಿತು. ಇಡೀ ನಗರವು ಸುಮಾರು 60 ಗಂಟೆಗಳ ಕಾಲ ಮುತ್ತಿಗೆಗೆ ಒಳಗಾಗಿತ್ತು. ನವೆಂಬರ್ 29ಕ್ಕೆ 9 ಉಗ್ರರ ಹತ್ಯೆ ಹಾಗೂ ಓರ್ವನ ಸೆರೆಯ ಮುಖಾಂತರ ಕಾರ್ಯಾಚರಣೆ ಮುಕ್ತಾಯವಾಯಿತು.

Mumbai Attack

ತಾಜ್ ಹೋಟೆಲ್ ಮೇಲಿನ ದಾಳಿಯ ದೃಶ್ಯ

ಅಜ್ಮಲ್ ಕಸಬ್ ಸೆರೆ, ನಂತರ ಗಲ್ಲು ಶಿಕ್ಷೆ: ಈ ಭೀಕರ ದಾಳಿಯಲ್ಲಿ ಭದ್ರತಾ ಪಡೆಗಳಿಗೆ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್. ದಾಳಿಯನ್ನು ಎಲ್ಇಟಿ ಮತ್ತು ಇತರ ಪಾಕಿಸ್ತಾನ ಮೂಲದ ಭಯೋತ್ಪಾದಕ ಘಟಕಗಳು ಯೋಜಿಸಿ, ಸಂಘಟಿಸಿ ನಡೆಸಿವೆ ಎಂದು ಆತ ವಿಚಾರಣೆಯಲ್ಲಿ ಖಚಿತಪಡಿಸಿದ. ದಾಳಿಕೋರರು ಪಾಕಿಸ್ತಾನದಿಂದ ಬಂದವರು ಮತ್ತು ಅವರನ್ನು ನಿಯಂತ್ರಿಸುವವರು ಸಹ ನೆರೆಯ ರಾಷ್ಟ್ರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಸಬ್ ತನ್ನ ಸಾಕ್ಷ್ಯದಲ್ಲಿ ಹೇಳಿದ್ದ.

Ajmal kasab

ಉಗ್ರ ಅಜ್ಮಲ್ ಕಸಬ್

ದಾಳಿಗೆ ಪ್ರಮುಖ ಕಾರಣ ಹಫೀಜ್ ಸಯೀದ್: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್. ಒತ್ತಡಕ್ಕೆ ಮಣಿದು ಪಾಕಿಸ್ತಾನವು ಹಫೀಜ್ ಸಯೀದ್​​ನನ್ನು ಬಂಧಿಸಿತ್ತು. ಆದರೆ ನಂತರ ಆತನನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಯಿತು.

Terrorist Hafeez Sayeed

ಉಗ್ರ ಹಫೀಜ್ ಸಯೀದ್

ಉಗ್ರರನ್ನು ಮಟ್ಟಹಾಕಲು ಕಾರಣರಾದ ಹೀರೋಗಳಿವರು: ಆಪರೇಷನ್ ಬ್ಲ್ಯಾಕ್ ಟೊರ್ನಾಡೋ ಮೂಲಕ, ನವೆಂಬರ್ 29, 2008 ರಂದು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ದಾಳಿಕೋರರನ್ನು ಮಟ್ಟಹಾಕಿದರು. ಹತ್ತು ಭಯೋತ್ಪಾದಕರ ಪೈಕಿ ಒಂಬತ್ತು ಮಂದಿಯನ್ನು ಭದ್ರತಾ ಪಡೆಗಳು ಕೊಂದಿದ್ದರು. ಆದರೆ ಈ ದಾಳಿಯಲ್ಲಿ ದೇಶಕ್ಕೆ 18 ವೀರರ ನಷ್ಟವಾಯಿತು. ಆಗಿನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಲಸ್ಕರ್ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ತುಕಾರಾಂ ಓಂಬ್ಳೆ ಮೊದಲಾದವರು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಾಣಾರ್ಪಣೆ ಮಾಡಿದರು.

Mumbai attack

ದಾಳಿಯ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಭದ್ರತಾ ಸಿಬ್ಬಂದಿ

ಇಂದಿಗೆ ಈ ಕರಾಳ ಘಟನೆಗೆ 13 ವರ್ಷ: ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆ ನಡೆಸಿದ ಈ ಭೀಕರ ದಾಳಿಗೆ ಇಂದು ಹದಿಮೂರು ವರ್ಷ ತುಂಬಿದೆ. ಈ ಅವಧಿಯಲ್ಲಿ ಭಾರತ ಬಹಳಷ್ಟು ದೂರ ಸಾಗಿ ಬಂದಿದೆ. ಆದರೆ ಆ ಕರಾಳ ಘಟನೆಯ ಕಹಿ ನೆನಪುಗಳು ಪ್ರತಿ ಭಾರತೀಯನ ಮನಸ್ಸಿನಲ್ಲೂ ಜೀವಂತವಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೋರಾಡಿ, ಪ್ರಾಣತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗಳನ್ನು ದೇಶ ಸ್ಮರಿಸುತ್ತದೆ.

ಇದನ್ನೂ ಓದಿ:

26/11 Mumbai Attack: 13 ವರ್ಷಗಳು ಕಳೆದರೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪು ಸದಾ ಹಸಿರು

Constitution Day 2021: ಸಂಸತ್​ನಲ್ಲಿ ಸಂವಿಧಾನ ದಿನಾಚರಣೆ; ಪ್ರಧಾನಿ ಮೋದಿ ಭಾಷಣ ಬಹಿಷ್ಕಾರಕ್ಕೆ ವಿಪಕ್ಷಗಳ ನಿರ್ಧಾರ

Published On - 11:08 am, Fri, 26 November 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್