Earthquake: ಭಾರತ- ಮ್ಯಾನ್ಮಾರ್ ಗಡಿಯಲ್ಲಿ 6 ತೀವ್ರತೆಯ ಭೂಕಂಪ; ಕೋಲ್ಕತ್ತಾ, ಗುವಾಹಟಿಯಲ್ಲೂ ಕಂಪನದ ಅನುಭವ
Earthquake in India-Myanmar border: ಭಾರತ ಹಾಗೂ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಸುಮಾರು 6 ತೀವ್ರತೆಯ ಭೂಕಂಪ ಸಂಭವಿಸಿದೆ. ಕೋಲ್ಕತ್ತ ಹಾಗೂ ಗುವಾಹಟಿಗೂ ಕಂಪನದ ಅನುಭವವಾಗಿದೆ.
ಚಿತ್ತಗಾಂಗ್: ಶುಕ್ರವಾರ ಬೆಳಗ್ಗೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ವರದಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪವು ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ 175 ಕಿಮೀ ಪೂರ್ವಕ್ಕೆ ಅಪ್ಪಳಿಸಿದೆ. ತ್ರಿಪುರಾ, ಮಣಿಪುರ, ಮಿಜೋರಾಂ ಮತ್ತು ಅಸ್ಸಾಂನಲ್ಲಿಯೂ ಕಂಪನದ ಅನುಭವವಾಗಿದೆ. ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ (EMSC) ವೆಬ್‌ಸೈಟ್‌ನಲ್ಲಿ ಕೋಲ್ಕತ್ತಾದವರೆಗೆ ಭೂಕಂಪದ ಅನುಭವವಾಗಿದೆ ಎಂದು ತಿಳಿಸಲಾಗಿದೆ. “ಇದು ನಾನು ಅನುಭವಿಸಿದ ಅತಿ ದೀರ್ಘಾವಧಿಯ ಭೂಕಂಪಗಳಲ್ಲಿ ಒಂದಾಗಿದೆ” ಎಂದು ಮಿಜೋರಾಂನ ಥೆನ್ಜಾಲ್‌ನ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದನ್ನು EMSC ನಲ್ಲಿ ಪೋಸ್ಟ್ ಮಾಡಲಾಗಿದೆ.
ಮಾಹಿತಿಯ ಪ್ರಕಾರ, ಬೆಳಗಿನ ಜಾವ 5.15ಕ್ಕೆ ಭೂಕಂಪ ಸಂಭವಿಸಿದೆ. ಮುಂಜಾನೆ 5.53ಕ್ಕೆ ಎರಡನೇ ಭೂಕಂಪನದ ವರದಿಗಳೂ ಇವೆ.
ಈ ಕುರಿತು ಎಎನ್ಐ ಹಂಚಿಕೊಂಡ ಟ್ವೀಟ್:
An earthquake of magnitude 6.3 strikes 175 km E of Chittagong, Bangladesh (Myanmar-India border region) about 9 minutes ago: European-Mediterranean Seismological Centre (EMSC) pic.twitter.com/nePZp4elmD
— ANI (@ANI) November 26, 2021
An earthquake of magnitude 6.1 occurred today around 5:15 am at 73km SE of Thenzawl, Mizoram: National Center for Seismology pic.twitter.com/Bz6dQf1SuJ
— ANI (@ANI) November 26, 2021
EMSC ತನ್ನ ವೆಬ್‌ಸೈಟ್‌ನಲ್ಲಿ ಪ್ರತ್ಯಕ್ಷದರ್ಶಿಗಳ ಅನುಭವಗಳನ್ನು ಪೋಸ್ಟ್ ಮಾಡಿದೆ. ಕೋಲ್ಕತ್ತಾ ಮತ್ತು ಗುವಾಹಟಿಯ ಹೆಚ್ಚಿನ ಭಾಗಗಳಲ್ಲಿ ಭೂಕಂಪವು ಸುಮಾರು 30 ಸೆಕೆಂಡುಗಳಷ್ಟು ದೀರ್ಘವಾಗಿತ್ತು ಮತ್ತು ಅದರ ಪರಿಣಾಮಗಳು ಕಂಡುಬಂದಿವೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಮತ್ತೋರ್ವ ಪ್ರತ್ಯಕ್ಷದರ್ಶಿ ಭೂಕಂಪದ ಕೇಂದ್ರಬಿಂದುವಿನಿಂದ 184 ಕಿಮೀ ದೂರದಲ್ಲಿರುವ ಚಿತ್ತಗಾಂಗ್ನಲ್ಲಿಯೂ ಕಂಪನದ ಅನುಭವವಾಗಿದೆ ಎಂದು ಬರೆದಿದ್ದಾರೆ.
M6.0 #earthquake (#भूकंप) strikes 174 km E of #Chittagong (#Bangladesh) 9 min ago. Effects reported by eyewitnesses: pic.twitter.com/vkKuCcT5fC
— EMSC (@LastQuake) November 25, 2021
EMSC ನಂತರ ಭೂಕಂಪನದ ಕುರಿತು ಮಾಹಿತಿ ನೀಡಿದ್ದು, ಮೊದಲು ತಿಳಿಸಿದ್ದ 6.0 ರ ತೀವ್ರತೆಯನ್ನು 5.8ಕ್ಕೆ ನಿಗದಿಪಡಿಸಿದೆ. ಜೊತೆಗೆ ಕಂಪನದ ಕೇಂದ್ರ ಬಿಂದುಬವು ಈಶಾನ್ಯ ಭಾರತದ ಐಜ್ವಾಲ್‌ನಿಂದ ಆಗ್ನೇಯಕ್ಕೆ 126 ಕಿಮೀ ದೂರದಲ್ಲಿದೆ ಎಂದು ಹೇಳಿದೆ.
ಇದನ್ನೂ ಓದಿ:
ಸಂವಿಧಾನವೇ ನಮ್ಮ ರಾಷ್ಟ್ರಧರ್ಮ; ನಾಡಿನ ಜನತೆಗೆ ಸಂವಿಧಾನ ದಿನದ ಶುಭಕಾಮನೆ ತಿಳಿಸಿದ ಸಿಎಂ ಬೊಮ್ಮಾಯಿ, ಬಿಎಸ್ವೈ
ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು, ಅವುಗಳನ್ನು ಹೊರಹಾಕಬೇಕು ಅನ್ನುತ್ತಾರೆ ಡಾ ಸೌಜನ್ಯ ವಶಿಷ್ಠ