US President Joe Biden | ಮೊದಲ ಮಾತುಕತೆ: ನೂತನ ವರ್ಷಕ್ಕೆ ಶುಭ ಕೋರಿ ಚೀನಾ ಕಿವಿ ಹಿಂಡಿದ ಜೋ ಬೈಡೆನ್

ಹಾಂಗ್​ಕಾಂಗ್​ನಲ್ಲಿ (Hong Kong) ಪ್ರಜಾಪ್ರಭುತ್ವದ ದಮನಕಾರಿ ನಡೆಗಳನ್ನು ಚೀನಾ ಸರ್ಕಾರ (Xi Jinping) ಪ್ರದರ್ಶಿಸುತ್ತಿದೆ ಎಂದು ಜೋ ಬೈಡೆನ್ ಅಸಮಧಾನ ಹೊರಹಾಕಿದ್ದಾರೆ. ಅಲ್ಲದೇ ಚೀನಾದ ಅನೈತಿಕ ವ್ಯಾಪಾರಿ ಪದ್ಧತಿಗಳ ಕುರಿತು ಸಹ ಅಮೆರಿಕದ ನೂತನ ಅಧ್ಯಕ್ಷ ಭಿನ್ನಮತ ವ್ಯಕ್ತಪಡಿಸಿದ್ದಾರೆ.

US President Joe Biden | ಮೊದಲ ಮಾತುಕತೆ: ನೂತನ ವರ್ಷಕ್ಕೆ ಶುಭ ಕೋರಿ ಚೀನಾ ಕಿವಿ ಹಿಂಡಿದ ಜೋ ಬೈಡೆನ್
ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾ ಪ್ರಧಾನಿ ಕ್ಸಿನ್ ಜಿನ್​ಪಿಂಗ್
guruganesh bhat

| Edited By: sadhu srinath

Feb 11, 2021 | 10:54 AM

ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ (Joe Biden) ನೇಮಕವಾದ ನಂತರ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿನ್ ಜಿನ್​ಪಿಂಗ್ (Xi Jinping) ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ, ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್​ಗೆ ಚೀನಾ ಅಧ್ಯಕ್ಷ ಕ್ಸಿನ್ ಜಿನ್​ಪಿಂಗ್ ಶುಭ ಕೋರುವ ಬದಲು, ಜೋ ಬೈಡೆನ್ ಅವರೇ ಚೀನಾದ ಸಾಂಪ್ರದಾಯಿಕ ಚಾಂದ್ರಮಾನ ನೂತನ ವರ್ಷಕ್ಕೆ ಚೀನಿಗರಿಗೆ ಶುಭಾಶಯ ತಿಳಿಸಿದ್ದಾರೆ.

ಚೀನಾದ ಆಕ್ರಮಣಕಾರಿ ಧೋರಣೆಯ ಕುರಿತು ಅಮೆರಿಕದ ಪೆಂಟಗಾನ್ ಟಾಸ್ಕ್ ಫೋರ್ಸ್ (Pentagon Task Force) ರಚಿಸಿದ ಕೆಲ ಗಂಟೆಗಳ ನಂತರ ಎರಡೂ ದೇಶಗಳ ಅಧ್ಯಕ್ಷರ ನಡುವೆ ದೂರವಾಣಿ ಕರೆ ವಿನಿಮಯ ನಡೆದಿದೆ. ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡೆನ್ ಇಂಡೋ ಫೆಸಿಫಿಕ್ (Indo-Pacific) ಸಮುದ್ರ ವಲಯದಲ್ಲಿ ಮುಕ್ತ ಮತ್ತು ಸ್ವತಂತ್ರ ವಾತಾವರಣದ ನಿರ್ಮಾಣವಾಗುವ ಮನಸ್ಥಿತಿ ಹೊಂದಿದ್ದು ಇದೇ ವಿಷಯವನ್ನು ಚೀನಾ ಅಧ್ಯಕ್ಷರ ಬಳಿ ಪ್ರಸ್ತಾಪಿಸಿದ್ದಾರೆ.

Also Read:  PM Narendra Modi | ಅಮೆರಿಕದ ನೂತನ ಅಧ್ಯಕ್ಷರಿಗೆ ದೂರವಾಣಿ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

ಇತ್ತೀಚಿಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ದೂರವಾಣಿ ಕರೆ ಮಾಡಿದಾಗಲೂ ಜೋ ಬೈಡೆನ್ ಇಂಡೋ ಫೆಸಿಫಿಕ್ ವಿಷಯ ಎತ್ತಿದ್ದರು. ಇಂಡೋ ಫೆಸಿಫಿಕ್ ವಲಯದ ಮೈತ್ರಿರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್, ಭಾರತ, ದಕ್ಷಿಣ ಕೋರಿಯಾ ದೇಶಗಳ ಜತೆ ಮಾತುಕತೆಯ ನಂತರವಷ್ಟೇ ಜೋ ಬೈಡೆನ್ ಚೀನಾ ಅಧ್ಯಕ್ಷರಿಗೆ (Xi Jinping) ಕರೆ ಮಾಡಿರುವುದು ಮಹತ್ವ ಪಡೆದಿದೆ.

ಚೀನಾ ಸರ್ಕಾರದ ಪ್ರಜಾಪ್ರಭುತ್ವದ ದಮನಕಾರಿ ನಡೆ: ಬೈಡೆನ್ ಅಸಮಾಧಾನ 

ಇಷ್ಟೇ ಅಲ್ಲದೇ, ಹಾಂಗ್​ಕಾಂಗ್​ನಲ್ಲಿ (Hong Kong) ಪ್ರಜಾಪ್ರಭುತ್ವದ ದಮನಕಾರಿ ನಡೆಗಳನ್ನು ಚೀನಾ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಜೋ ಬೈಡೆನ್ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಚೀನಾದ ಅನೈತಿಕ ವ್ಯಾಪಾರಿ ಪದ್ಧತಿಗಳ ಕುರಿತು ಸಹ ಅಮೆರಿಕದ ನೂತನ ಅಧ್ಯಕ್ಷ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಹಾಂಗ್​ಕಾಂಗ್​ನಲ್ಲಿ ಪ್ರೊ ಡೆಮಾಕ್ರಟಿಕ್ ಹೋರಾಟಗಾರರ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆಯನ್ನು ಸಹ ಅಮೆರಿಕ ಆಡಳಿತ ಖಂಡಿಸಿದ್ದು, ಮಾನವ ಹಕ್ಕುಗಳ ರಕ್ಷಣೆಗೆ ಬದ್ಧ ನಿಲುವು ತೋರಿಸಲಿದೆ ಎನ್ನಲಾಗಿದೆ.

ಕೊರೊನಾ ವಿರುದ್ಧದ ಹೋರಾಟದ ಕುರಿತೂ ಜೋ ಬೈಡೆನ್ ಮತ್ತು ಕ್ಸಿನ್ ಜಿನ್​ಪಿಂಗ್ ಮಾತುಕತೆ ನಡೆಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆ, ಹವಾಮಾನ ಬದಲಾವಣೆ, ಶಸ್ತ್ರಾಸ್ತಗಳ ಕುರಿತೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಇಂದು ಜೋ ಬೈಡನ್ ಪ್ರಮಾಣ.. ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada