ಬುರ್ಖಾ, ಹಿಜಾಬ್ ಭದ್ರತೆಗೆ ಅಪಾಯ, ಶೇ.90ರಷ್ಟು ಮುಸ್ಲಿಂ ಜನಸಂಖ್ಯೆ ಇರುವ ಈ ದೇಶದಲ್ಲಿ ಬುರ್ಖಾ ನಿಷೇಧ
ದೇಶದ ಭದ್ರತೆಯ ದೃಷ್ಟಿಯಿಂದ ಕಿರ್ಗಿಸ್ತಾನ ಸರ್ಕಾರವು ದೇಶದಲ್ಲಿ ಬುರ್ಖಾ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ. ಸಂಪೂರ್ಣವಾಗಿ ಅಡಿಯಿಂದ ಮುಡಿಯವರೆಗೆ ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ದಂಡ ವಿಧಿಸಲು ಅವಕಾಶವಿದೆ.ಷರಿಯಾ ಕಾನೂನಿನಡಿಯಲ್ಲಿ ತಲೆಯಿಂದ ಕಾಲಿನವರೆಗೆ ಮುಚ್ಚಿಕೊಳ್ಳುವುದು ಕಡ್ಡಾಯವಲ್ಲ ಎಂದು ಮುಫ್ತಿಯೇಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಕಿರ್ಗಿಸ್ತಾನ, ಏಪ್ರಿಲ್ 09: ಮುಸ್ಲಿಂ ಪ್ರಾಬಲ್ಯವಿರುವ ಕಿರ್ಗಿಸ್ತಾನ(Kyrgyzstan) ಸರ್ಕಾರವು ಬುರ್ಖಾವನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಅಲ್ಲಿ ಬುರ್ಖಾ(Burqa)ವನ್ನು ನಿಷೇಧಿಸಲಾಗಿದೆ. ಭಯೋತ್ಪಾದಕರು ಕೂಡ ಬುರ್ಖಾ ಧರಿಸಿ ಬಂದು ಅಪಾಯನ್ನುಂಟುಮಾಡುವ ಸಾಧ್ಯತೆ ಹೆಚ್ಚಿದೆ ಹಾಗಾಗಿ ಸಂಪೂರ್ಣವಾಗಿ ಅಡಿಯಿಂದ ಮುಡಿಯವರೆಗೆ ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ದಂಡ ವಿಧಿಸಲು ಅವಕಾಶವಿದೆ. ಅಲ್ಲಿ ಶೇ.99ರಷ್ಟು ಮಂದಿ ಮುಸ್ಲಿಮರಿದ್ದಾರೆ.
ಸ್ಥಳೀಯ ಮಾಧ್ಯಮ ಎಕೆಐ ಪ್ರೆಸ್ ಪ್ರಕಾರ, ಮುಸ್ಲಿಂ ಆಧ್ಯಾತ್ಮಿಕ ಆಡಳಿತ (ಮುಫ್ತಾಯತ್) ಸರ್ಕಾರವು ಮಹಿಳೆಯರು ದೇಹವನ್ನು ಸಂಪೂರ್ಣವಾಗಿ ಮುಚ್ಚುವ ನಿಖಾಬ್ ಅಥವಾ ಬುರ್ಖಾ ಧರಿಸುವಂತಿಲ್ಲ ಎಂಬ ಪ್ರಸ್ತಾವನೆಯನ್ನು ಅನುಮೋದಿಸಿದೆ.ಇಡೀ ದೇಹವನ್ನು ಮುಚ್ಚಿಕೊಂಡು ನಡೆಯುವ ಮಹಿಳೆಯರು ಅನ್ಯಲೋಕದ ಜೀವಿಗಳಂತೆ ಕಾಣುತ್ತಾರೆ ಎಂದು ಮುಫ್ತಿಯೇಟ್ ಹೇಳಿದ್ದಾರೆ. 20 ಸಾವಿರ ಸೊಮ್ಸ್ ದಂಡ ವಿಧಿಸಲಾಗಿದೆ.
ಷರಿಯಾ ಕಾನೂನು ಉಲ್ಲೇಖ ಷರಿಯಾ ಕಾನೂನಿನಡಿಯಲ್ಲಿ ತಲೆಯಿಂದ ಕಾಲಿನವರೆಗೆ ಮುಚ್ಚಿಕೊಳ್ಳುವುದು ಕಡ್ಡಾಯವಲ್ಲ ಎಂದು ಮುಫ್ತಿಯೇಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದ್ದರಿಂದ, ಅಂತಹ ನಿರ್ಧಾರಗಳ ವಿರುದ್ಧ ಫತ್ವಾ ಹೊರಡಿಸಲಾಗುವುದಿಲ್ಲ. ಸರ್ಕಾರದ ಈ ನಿರ್ಧಾರಗಳನ್ನು ಎಲ್ಲರೂ ತಕ್ಷಣ ಒಪ್ಪಿಕೊಳ್ಳಬೇಕು. ಭದ್ರತಾ ಕಾರಣಗಳಿಗಾಗಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮುಫ್ತಿಯಾತ್ ಹೇಳಿದರು. ಸರ್ಕಾರ ಏನು ಹೇಳುತ್ತದೆ ಎಂಬುದರ ಬಗ್ಗೆಯೂ ಗಮನ ಹರಿಸುವ ಅವಶ್ಯಕತೆಯಿದೆ. ಪರ್ದಾ ಮತ್ತು ಬುರ್ಖಾ ನಿಷೇಧಿಸದಿದ್ದರೆ, ಅದು ಅಪರಾಧ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬುದು ಸರ್ಕಾರದ ವಾದ.
ಮತ್ತಷ್ಟು ಓದಿ: ರಾಜ್ಯದಲ್ಲಿ ಮತ್ತೆ ತಾರಕಕ್ಕೇರಿದ ಹಿಜಾಬ್ ಸಂಘರ್ಷ: ಹಿಜಾಬ್ ಧರಿಸಿದ್ರೆ ಕೇಸರಿ ಶಾಲು ಎಚ್ಚರಿಕೆ
ಅಪರಾಧಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ನಾವು ಇದರ ಉದಾಹರಣೆಗಳನ್ನು ನೋಡಿದ್ದೇವೆ, ಅದರ ನಂತರ ನಾವು ಅದನ್ನು ನಿಷೇಧಿಸಲು ನಿರ್ಧರಿಸಿದ್ದೇವೆ.
ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ನಿಷೇಧ, ವಿಚಾರಣೆ ಬಾಕಿ ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು, ಇದೀಗ ಪ್ರಕರಣವು ಸುಪ್ರೀಂಕೋರ್ಟ್ನಲ್ಲಿದ್ದು, ವಿಚಾರಣೆ ಬಾಕಿ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧಾರಣೆ ವಿಚಾರ ಕುರಿತ ವಿವಾವದ ಹಸಿರಾಗಿರುವಂತೆಯೇ ಇತ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹರಿದ ಜೀನ್ಸ್, ಟಿ–ಶರ್ಟ್ ಧರಿಸದಂತೆ ನಿಷೇಧ ಹೇರಲಾಗಿತ್ತು. ಯುರೋಪ್, ಏಷ್ಯಾದ ಕೆಲವು ಭಾಗಗಳು ಹಾಗೂ ಆಫ್ರಿಕಾದಲ್ಲಿ ಹಿಜಾಬ್ ನಿಷೇಧಿಸಲಾಗಿದೆ.
ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ಈ ಕಾನೂನನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು 20 ಸಾವಿರ ಸೋಮ್ (ಸ್ಥಳೀಯ ಕರೆನ್ಸಿ) ದಂಡ ವಿಧಿಸುವ ಅವಕಾಶವಿದೆ. ಜನವರಿ 2025 ರಲ್ಲಿ, ಸರ್ಕಾರ ಈ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿತ್ತು. ವಿಶೇಷ ಅಭಿಯಾನ ಆರಂಭಿಸುವ ಮೂಲಕ ಮುಖವಾಡ ಧರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೇಶದ ರಾಷ್ಟ್ರಪತಿಗಳು ಹೇಳಿದ್ದಾರೆ. ಕಿರ್ಗಿಸ್ತಾನ್‌ನ ಜನಸಂಖ್ಯೆಯ 90 ಪ್ರತಿಶತ ಮುಸ್ಲಿಮರು. ಇಲ್ಲಿ ಸುನ್ನಿ ಮುಸ್ಲಿಮರ ಸಂಖ್ಯೆ ಹೆಚ್ಚು. ಮುಸ್ಲಿಮರ ನಂತರ, ಕ್ರಿಶ್ಚಿಯನ್ ಧರ್ಮದ ಜನರು ಇಲ್ಲಿ ವಾಸಿಸುತ್ತಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Wed, 9 April 25