ಮೇ 9ರಂದು ನಡೆಯುವ ವಿಜಯ ದಿನದ ಮೆರವಣಿಗೆಗೆ ಪ್ರಧಾನಿ ನರೇಂದ್ರ ಮೋದಿಗೆ ರಷ್ಯಾ ಆಹ್ವಾನ
ರಷ್ಯಾದಲ್ಲಿ ಮೇ 9ರಂದು ನಡೆಯುವ 80ನೇ ವಿಜಯ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರನ್ನು ರಷ್ಯಾ ಆಹ್ವಾನಿಸಿದೆ. ಪ್ರಧಾನಿ ಮೋದಿ ಅವರಲ್ಲದೆ, ಈ ವರ್ಷದ ಐಕಾನಿಕ್ ರೆಡ್ ಸ್ಕ್ವೇರ್‌ನಲ್ಲಿ ನಡೆಯಲಿರುವ ವಿಜಯ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ರಷ್ಯಾ ಹಲವಾರು ಇತರ ಸ್ನೇಹಪರ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದೆ. ಮೇ 9ರಂದು ನಡೆಯಲಿರುವ 80ನೇ ವಿಜಯ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿಗೆ ಆಹ್ವಾನವನ್ನು ರಷ್ಯಾ ಈಗಾಗಲೇ ಕಳುಹಿಸಿದೆ.

ನವದೆಹಲಿ, ಏಪ್ರಿಲ್ 9: ಎರಡನೇ ಮಹಾಯುದ್ಧದಲ್ಲಿ (2nd World War) ಜರ್ಮನಿಯ ವಿರುದ್ಧ ಸೋವಿಯತ್ ರಷ್ಯಾ (Russia) ವಿಜಯ ಸಾಧಿಸಿದ 80ನೇ ವರ್ಷಾಚರಣೆಯನ್ನು ಗುರುತಿಸುವ ಮೇ 9ರ ವಿಜಯ ದಿನದ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ರಷ್ಯಾ ಆಹ್ವಾನಿಸಿದೆ. ಮೇ 9ರಂದು ನಡೆಯುವ ಮೆರವಣಿಗೆಯಲ್ಲಿ ಭಾರತೀಯ ಪ್ರಧಾನಿ ಮೋದಿಯನ್ನು ರಷ್ಯಾ ಆಹ್ವಾನಿಸಿದೆ. ಅವರಿಗೆ ಆಹ್ವಾನವನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಮುಂಬರುವ ಭೇಟಿಯ ಕುರಿತು ರುಡೆಂಕೊ ಹೇಳಿದ್ದಾರೆ. “ಈ ವರ್ಷವೇ ಅವರ ಭೇಟಿಯನ್ನು ನಿರೀಕ್ಷಿಸಲಾಗಿದೆ” ಎಂದಿದ್ದಾರೆ. ಈ ವರ್ಷದ ವಿಜಯ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ರಷ್ಯಾ ಹಲವಾರು ಸ್ನೇಹಪರ ರಾಷ್ಟ್ರಗಳ ನಾಯಕರಿಗೆ ಆಹ್ವಾನಗಳನ್ನು ಕಳುಹಿಸಿದೆ.
ಇದನ್ನೂ ಓದಿ: ಅಗತ್ಯವಿದ್ದರೆ ಉಕ್ರೇನ್ನ ಝೆಲೆನ್ಸ್ಕಿ ಜೊತೆ ಮಾತುಕತೆಗೆ ಸಿದ್ಧ ಎಂದ ರಷ್ಯಾದ ಪುಟಿನ್
ಜನವರಿ 1945ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಸೋವಿಯತ್ ಸೈನ್ಯವು ಜರ್ಮನಿಯ ವಿರುದ್ಧ ದಾಳಿಯನ್ನು ಪ್ರಾರಂಭಿಸಿತು. ಅದು ರಷ್ಯಾ ಸೈನ್ಯದ ವಿಜಯದಲ್ಲಿ ಕೊನೆಗೊಂಡಿತು. ಇದರ ನಂತರ, ಮೇ 9ರಂದು ಕಮಾಂಡರ್-ಇನ್-ಚೀಫ್ ಜರ್ಮನಿಯ ಬೇಷರತ್ತಾದ ಶರಣಾಗತಿ ಕಾಯ್ದೆಗೆ ಸಹಿ ಹಾಕಿದರು, ಇದು ಯುದ್ಧವನ್ನು ಕೊನೆಗೊಳಿಸಿತು.
ಇದನ್ನೂ ಓದಿ: ಮೋದಿ ಆಹ್ವಾನ ಸ್ವೀಕರಿಸಿದ ಪುಟಿನ್; ಶೀಘ್ರದಲ್ಲೇ ಭಾರತಕ್ಕೆ ರಷ್ಯಾ ಅಧ್ಯಕ್ಷ ಭೇಟಿ
ಪ್ರಧಾನಿ ಮೋದಿಯವರ 2024ರ ಜುಲೈನಲ್ಲಿ ರಷ್ಯಾಗೆ ಭೇಟಿ ನೀಡಿದ್ದರು. ಇದು ಸುಮಾರು 5 ವರ್ಷಗಳಲ್ಲಿ ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ 2019ರಲ್ಲಿ ದೂರದ ಪೂರ್ವ ನಗರವಾದ ವ್ಲಾಡಿವೋಸ್ಟಾಕ್‌ಗೆ ಭೇಟಿ ನೀಡಿದ್ದರು. ಅವರ ಕೊನೆಯ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಆಹ್ವಾನವನ್ನು ನೀಡಿದ್ದರು. ಅದಕ್ಕೆ ರಷ್ಯಾ ಅಧ್ಯಕ್ಷ ಒಪ್ಪಿಕೊಂಡಿದ್ದರು. ಆದರೆ, ಪುಟಿನ್ ಅವರ ಭೇಟಿಯ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ