AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗತ್ಯವಿದ್ದರೆ ಉಕ್ರೇನ್​ನ ಝೆಲೆನ್ಸ್ಕಿ ಜೊತೆ ಮಾತುಕತೆಗೆ ಸಿದ್ಧ ಎಂದ ರಷ್ಯಾದ ಪುಟಿನ್

ಉಕ್ರೇನ್ ಯುದ್ಧದ ವಿಷಯದ ಬಗ್ಗೆ ಸೌದಿ ಅರೇಬಿಯಾದಲ್ಲಿ ಅಮೆರಿಕ-ರಷ್ಯಾ ನಿಯೋಗದ ಸಭೆಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಪುಟಿನ್ ಸಿದ್ಧ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. "ಅಗತ್ಯವಿದ್ದರೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇನೆ ಎಂದು ಪುಟಿನ್ ಸ್ವತಃ ಹೇಳಿದ್ದಾರೆ. ಆದರೆ ಝೆಲೆನ್ಸ್ಕಿ ಈ ಬಗ್ಗೆ ಏನೂ ಖಾತರಿಪಡಿಸಿಲ್ಲ" ಎಂದು ರಷ್ಯಾ ಹೇಳಿದೆ.

ಅಗತ್ಯವಿದ್ದರೆ ಉಕ್ರೇನ್​ನ ಝೆಲೆನ್ಸ್ಕಿ ಜೊತೆ ಮಾತುಕತೆಗೆ ಸಿದ್ಧ ಎಂದ ರಷ್ಯಾದ ಪುಟಿನ್
Putin
ಸುಷ್ಮಾ ಚಕ್ರೆ
|

Updated on: Feb 18, 2025 | 4:27 PM

Share

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾ ಇಂದು ದೃಢಪಡಿಸಿದೆ. ಸೌದಿ ಅರೇಬಿಯಾದಲ್ಲಿ ಅಮೆರಿಕ ಮತ್ತು ರಷ್ಯಾದ ರಾಜತಾಂತ್ರಿಕರು ಮಾತುಕತೆ ನಡೆಸುತ್ತಿರುವಾಗ ಈ ಘೋಷಣೆ ಹೊರಬಿದ್ದಿದೆ. ಇದಕ್ಕೂ ಮೊದಲು, ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ದಿರಿಯಾ ಅರಮನೆಯಲ್ಲಿ ರಷ್ಯಾ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳು ಉಕ್ರೇನ್‌ನಲ್ಲಿ ಸಂಬಂಧಗಳನ್ನು ಸುಧಾರಿಸುವ ಮತ್ತು ಯುದ್ಧವನ್ನು ಕೊನೆಗೊಳಿಸುವ ಕುರಿತು ಮಾತುಕತೆಗಳನ್ನು ನಡೆಸಿದರು. ಯುಎಸ್ ನಿಯೋಗದ ನೇತೃತ್ವವನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ವಹಿಸಿದ್ದರು. ರಷ್ಯಾದ ಕಡೆಯವರ ನೇತೃತ್ವವನ್ನು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ವಹಿಸಿದ್ದರು.

“ಒಂದುವೇಳೆ ಅಗತ್ಯವಿದ್ದರೆ” ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಅಧ್ಯಲ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ. ಉಕ್ರೇನ್‌ನಲ್ಲಿ 3 ವರ್ಷಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ರಷ್ಯಾ ಮತ್ತು ಅಮೆರಿಕದ ಉನ್ನತ ರಾಜತಾಂತ್ರಿಕರು ಸೌದಿ ಅರೇಬಿಯಾದಲ್ಲಿ ಮಾತುಕತೆ ನಡೆಸುತ್ತಿದ್ದಂತೆ ಈ ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಆದರೆ, ಯಾವುದೇ ಉಕ್ರೇನಿಯನ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಇದನ್ನೂ ಓದಿ: ಉಕ್ರೇನ್ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಮಾತನಾಡಿದ್ದೇನೆ: ಡೊನಾಲ್ಡ್​ ಟ್ರಂಪ್

“ಅಗತ್ಯವಿದ್ದರೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇನೆ ಎಂದು ಪುಟಿನ್ ಸ್ವತಃ ಹೇಳಿದ್ದಾರೆ. ಆದರೆ ಝೆಲೆನ್ಸ್ಕಿ ಈ ಬಗ್ಗೆ ಏನೂ ಖಾತರಿಪಡಿಸಿಲ್ಲ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಝೆಲೆನ್ಸ್ಕಿ ತನ್ನ ಬೆನ್ನ ಹಿಂದೆ ದಲ್ಲಾಳಿಗಳು ನಡೆಸುವ ಯಾವುದೇ ಶಾಂತಿ ಒಪ್ಪಂದಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ಶಾಂತಿ ಮಾತುಕತೆಗೆ ಒತ್ತು ನೀಡಲಾಗಿದೆ. ಟ್ರಂಪ್ ಅವರು ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೊಂದಿಗೂ ದೂರವಾಣಿ ಮೂಲಕ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ಸಭೆಯು ಉಕ್ರೇನ್‌ನಲ್ಲಿ ಸಂಘರ್ಷವನ್ನು ನಿಲ್ಲಿಸುವ ಅಮೆರಿಕದ ಪ್ರಯತ್ನಗಳಿಗೆ ಮೊದಲ ಹೆಜ್ಜೆಯಾಗಿದೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ

ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷವನ್ನು ಕೊನೆಗೊಳಿಸುವ ಮಾತುಕತೆಗಳು ನಡೆಯುತ್ತಿದ್ದರೂ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿದೆ. ರಷ್ಯಾ ಕೈವ್ ಮೇಲೆ ಡ್ರೋನ್‌ಗಳೊಂದಿಗೆ ದಾಳಿ ಮಾಡಿದೆ ಎಂದು ಉಕ್ರೇನಿಯನ್ ಮಿಲಿಟರಿ ತಿಳಿಸಿದೆ. ರಷ್ಯಾದ ಪಡೆಗಳು ರಾತ್ರೋರಾತ್ರಿ ಉಕ್ರೇನ್‌ನಲ್ಲಿ 176 ಡ್ರೋನ್‌ಗಳನ್ನು ಹಾರಿಸಿವೆ ಎಂದು ಉಕ್ರೇನಿಯನ್ ವಾಯುಪಡೆ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ರಾಜ್ಯಸಭಾ ಭಾಷಣದ ವಿಡಿಯೋ ಹಂಚಿಕೊಂಡ ರಾಘವ್ ಚಡ್ಡಾ
ರಾಜ್ಯಸಭಾ ಭಾಷಣದ ವಿಡಿಯೋ ಹಂಚಿಕೊಂಡ ರಾಘವ್ ಚಡ್ಡಾ