What India Thinks Today: ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು? ಇಲ್ಲಿದೆ ನೋಡಿ

ದೆಹಲಿಯಲ್ಲಿ ಫೆ. 25, 26, 27 ರಂದು ಆಯೋಜಿಸಲಾಗಿದ್ದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮ್ಮಿಟ್’​ನಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಟಿವಿ9ನ ಎಲ್ಲಾ ಸಿಬ್ಬಂದಿ, ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದು, ಟಿವಿ9 ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಟಿವಿ9ನ ಥೀಮ್ ಅದ್ಭುತ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ ಭಾರತದ ಅಭಿವೃದ್ಧಿ ಧ್ಯೇಯ ಮತ್ತು ಕನಸನ್ನು ಬಿಚ್ಚಿಟ್ಟಿದ್ದಾರೆ.

Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 29, 2024 | 10:16 PM

ದೆಹಲಿ, ಫೆಬ್ರವರಿ 28:  ನವದೆಹಲಿಯಲ್ಲಿ ಫೆ. 25, 26, 27 ರಂದು ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಶೃಂಗಸಭೆ ನಡೆಯಿತು.  ಟಿವಿ9 ಜಾಗತಿಕ ಶೃಂಗಸಭೆಯನ್ನು ಟಿವಿ9 ನೆಟ್​ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಪರಿಚಯಿಸಿದ್ದು, ಮೂರು ದಿನ ಹಲವಾರು ಅಂತಾರಾಷ್ಟ್ರೀಯ ಗಣ್ಯರು, ಸಂಪುಟ ಸಚಿವರು, ವಿವಿಧ ಕ್ಷೇತ್ರಗಳ ನಾಯಕರು ಇಂಡಿಯಾದ ಮುಂದಿನ ಮಹಾ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆ. ಇದೇ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದು ವಿಶೇಷ. ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮ್ಮಿಟ್​ನಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ತಮ್ಮ 10 ವರ್ಷದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜಾರಿಗೆ ತಂದ ಯೋಜನೆಗಳು ಸೇರಿದಂತೆ ದೇಶಕ್ಕಾಗಿ ಶ್ರಮಿಸಿರುವುದನ್ನು ಎಳೆ-ಎಳೆ ಬಿಚ್ಚಿಟ್ಟರು. ಇನ್ನು ಇದೇ ವೇಳೆ ಮೂರನೇ ಅವಧಿಗೆ ಹಲವು ಬದಲಾವಣೆಯ ಯೋಚನೆ ಹೊಂದಿರುವುದನ್ನು ಮೋದಿ ಬಹಿರಂಗಪಡಿಸಿದರು.

ಭಾರತದ ಅಭಿವೃದ್ಧಿಯೇ ಧ್ಯೇಯ: ಕನಸು ಬಿಚ್ಚಿಟ್ಟ ಪ್ರಧಾನಿ ಮೋದಿ

ಭಾರತ ದೇಶವನ್ನ ಭಯದ ವಾತಾವರಣದಿಂದ ಈ ಹಂತಕ್ಕೆ ತಂದಿದ್ದೇವೆ. ಜನರ ಮನಸ್ಥಿತಿಯೂ ಬದಲಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ದೊಡ್ಡ ಅಭಿವೃದ್ಧಿ ಆಗಿದೆ. 21ನೇ ಶತಮಾನದಲ್ಲಿ ಭಾರತ ಸಣ್ಣ ಯೋಚನೆ ಮಾಡೋದನ್ನೇ ಬಿಟ್ಟಿದೆ. ಭಾರತದ ಸಾಧನೆ ನೋಡಿ ಇಡೀ ಜಗತ್ತೇ ನಿಬ್ಬೆರಗಾಗಿದೆ. ಜಗತ್ತು ಭಾರತದೊಂದಿಗೆ ಸಾಗುವಾಗ ತನ್ನ ಲಾಭ ಏನು ಅಂತ ನೋಡುತ್ತಿದೆ. ನಮ್ಮ ಸರ್ಕಾರ 10 ವರ್ಷದಲ್ಲಿ 640 ಬಿಲಿಯನ್‌ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳವನ್ನ ಭಾರತಕ್ಕೆ ತಂದಿದೆ ಎಂದು ಹೇಳಿದ್ದಾರೆ.

ಇನ್ನು ಭಾರತದಲ್ಲಿ ಪ್ರತಿದಿನ 55 ಸಾವಿರ ಜನರನ್ನು ಬಡತನ ರೇಖೆಯಿಂದ ಹೊರಗೆ ತಂದಿದ್ದೇವೆ. 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆ ಎತ್ತುವ ಕಾರ್ಯ ಮಾಡಿದ್ದೇವೆ. ಭಾರತದಲ್ಲಿ ಪ್ರತಿದಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಅಂತ ಪ್ರಧಾನಿ ಮೋದಿ ಗರ್ವದಿಂದ ಹೇಳಿಕೊಂಡರು.

ಇದನ್ನೂ ಓದಿ: WITT Global Summit: 10 ವರ್ಷದಲ್ಲಿ ಬಾಕಿ ಇದ್ದ 17 ಲಕ್ಷ ಕೋಟಿ ರೂ. ಯೋಜನೆಗಳ ಕಡತಗಳನ್ನು ನಾನೇ ಪರಿಶೀಲಿಸಿದ್ದೇನೆ: ಮೋದಿ

ಕಳೆದ 10 ವರ್ಷದೊಳಗೆ ನಾವು ಭಯದ ಸ್ಥಿತಿಯಿಂದ ದೇಶವನ್ನ ಈ ಹಂತದವರೆಗೂ ತಂದಿದ್ದೇವೆ. ಕೇವಲ 10 ವರ್ಷದಲ್ಲಿ ಜಗತ್ತಿನ 5ನೇ ಅತ್ಯುತ್ತಮ ಆರ್ಥಿಕ ವ್ಯವಸ್ಥೆ ಹೊಂದಿದ ದೇಶವಾಗಿದೆ. ಇವತ್ತು ದೇಶದಲ್ಲಿ ಅತ್ಯಂತ ಜರೂರಾಗಿರುವ ನೀತಿಗಳನ್ನ ಶೀಘ್ರವಾಗಿ ಜಾರಿಗೆಗೊಳಿಸುತ್ತಿದ್ದೇವೆ. ಅಲ್ಲದೇ ನಿರ್ಣಯಗಳು ಸಹ ಅದಕ್ಕಿಂತ ವೇಗವಾಗಿ ತೆಗೆದುಕೊಳ್ಳಲಾಗುತ್ತಿದೆ. ಮನಸ್ಥಿತಿಯ ಬದಲಾವಣೆಯಲ್ಲಿ ಕಮಾಲ್‌ ಮಾಡಿ ತೋರಿಸಲಾಗಿದೆ.  ನೀವು ಈ ಮೊದಲಿನ 10 ವರ್ಷದಲ್ಲಿನ ಎಫ್‌ಡಿಐ ಅಂಕಿ-ಸಂಖ್ಯೆಗಳನ್ನೇ ನೋಡಿ. ಈ ಮೊದಲಿನ ಸರ್ಕಾರ 10 ವರ್ಷದಲ್ಲಿ 300 ಬಿಲಿಯನ್‌ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳವನ್ನ ಭಾರತದಲ್ಲಿ ಹೂಡಲಾಗಿತ್ತು.

ಅಪೂರ್ಣವಾಗಿದ್ದ ನೂರಾರು ಯೋಜನೆಗಳು ಪೂರ್ಣ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತವು ರಿವರ್ಸ್ ಗೇರ್‌ನಲ್ಲಿತ್ತು. ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ಯೋಜನೆಗೆ 80ರ ದಶಕದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೆ ಈ ಯೋಜನೆಯು 4 ದಶಕಗಳಿಂದ ಹಾಗೇ ಇತ್ತು. ನಮ್ಮ ಸರ್ಕಾರಕ್ಕೆ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. 60ರ ದಶಕದಲ್ಲಿ ಸರ್ದಾರ್ ಸರೋವರ ಯೋಜನೆಯ ಅಡಿಗಲ್ಲು ಹಾಕಲಾಯಿತ್ತು. ಅದರ ಕೆಲಸವೂ ಬಾಕಿ ಉಳಿದಿತ್ತು. ನಮ್ಮ ಸರ್ಕಾರ ರಚನೆಯಾದ ನಂತರ ಆ ಅಣೆಕಟ್ಟಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ್ದೇವೆ ಎಂದಿದ್ದರು.

ಇದನ್ನೂ ಓದಿ: WITT Tv9 Global Summit 2024: ಉತ್ತಮ ಆಡಳಿತ ಮೂಲಕ ಭಾರತೀಯರಿಗೆ ಜೀವನ ಮಾರ್ಗೋಪಾಯದ ಸಂದೇಶ ಪ್ರಧಾನಿ ಮೋದಿ ನೀಡಿದ್ದಾರೆ: ಬರುಣ್ ದಾಸ್, ಸಿಈಇ-ಟಿವಿ9

2002ರಲ್ಲಿ ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಈ ಕೆಲಸವೂ ಸ್ಥಗಿತಗೊಂಡಿತ್ತು. ಅದನ್ನು ಸಹ ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಅಸ್ಸಾಂನ ಬೋಡಿ ಬಿಲ್ ಸೇತುವೆಯನ್ನು ನಮ್ಮ ಸರ್ಕಾರ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಪೂರ್ಣವಾಗಿರುವ ನೂರಾರು ಯೋಜನೆಗಳನ್ನು ನಾನು ಲೆಕ್ಕ ಹಾಕಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್​ಗೆ ಟಾಂಗ್ ನೀಡಿದ್ದರು.

ಮೋದಿಯ ಗ್ಯಾರಂಟಿ ಬಗ್ಗೆ ಪ್ರತಿಯೊಬ್ಬರಿಗೂ ಸಿಗಲೇಬೇಕು. ನಾವು, ದೇಶವೇ ಪ್ರಥಮ ಎಂಬ ಸಿದ್ದಾಂತದಿಂದ ದೇಶ ನಡೆಸುತ್ತಿದ್ದೇವೆ. ತ್ರಿವಳಿ ತಲಾಖ್​ ಅಂತಹ ಹಲವಾರು ಜನಪರ ಕಾರ್ಯಗಳನ್ನು ನೀಡಿದ್ದೇವೆ. 5ಜಿ ನೆಟ್​ವರ್ಕ್​ ಕ್ಷೇತ್ರದಲ್ಲಿ ಯೂರೋಪ ದೇಶವನ್ನು ಹಿಂದೆ ಹಾಕಿದೆ. ಭಾರತ ಮುಂದಿನ ಭವಿಷ್ಯದ ಹೆಚ್ಚು ಹೆಚ್ಚು ಆಲೋಚನೆ ಮಾಡುತ್ತಿದೆ ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:13 pm, Wed, 28 February 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು