WITT Global Summit: 10 ವರ್ಷದಲ್ಲಿ ಬಾಕಿ ಇದ್ದ 17 ಲಕ್ಷ ಕೋಟಿ ರೂ. ಯೋಜನೆಗಳ ಕಡತಗಳನ್ನು ನಾನೇ ಪರಿಶೀಲಿಸಿದ್ದೇನೆ: ಮೋದಿ

ನವದೆಹಲಿಯಲ್ಲಿ ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್‌ ಟುಡೇ' ಕಾರ್ಯಕ್ರಮದ ಎರಡನೇ ದಿನವಾದ ಇಂದು(ಫೆ.26) ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಹತ್ತು ವರ್ಷಗಳಲ್ಲಿ ತಮ್ಮ ಸರ್ಕಾರ ಏನೆಲ್ಲ ಮಾಡಿದೆ ಎನ್ನುವುದನ್ನು ಬಿಚ್ಚಿಟ್ಟರು. ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಮತ್ತು ವ್ಯವಸ್ಥೆಯಲ್ಲಿ ಭಾರತದ ಜನರ ನಂಬಿಕೆ ಹೆಚ್ಚಾಗಿದೆ. ಜನರಿಗೆ ತಮ್ಮ ಮೇಲೆ ಇರುವಷ್ಟೇ ನಂಬಿಕೆ ದೇಶದ ಮೇಲೆ ಇದೆ ಎಂದಿದ್ದಾರೆ.

WITT Global Summit: 10 ವರ್ಷದಲ್ಲಿ ಬಾಕಿ ಇದ್ದ 17 ಲಕ್ಷ ಕೋಟಿ ರೂ. ಯೋಜನೆಗಳ ಕಡತಗಳನ್ನು ನಾನೇ ಪರಿಶೀಲಿಸಿದ್ದೇನೆ: ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
|

Updated on:Feb 26, 2024 | 9:32 PM

ನವದೆಹಲಿ, (ಫೆಬ್ರವರಿ 26): ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today’ Global Summit) ಜಾಗತಿಕ ಶೃಂಗಸಭೆಯ ಎರಡನೇ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಮೋದಿ, ಮೊದಲಿಗೆ ಟಿವಿ9 ಸುದ್ದಿ ಸಂಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ಹಲವಾರು ಭಾಷೆಗಳಲ್ಲಿ ಟಿವಿ9 ಸುದ್ದಿ ಪ್ರಸಾರ ಮಾಡುತ್ತಿದೆ. ಇದಕ್ಕಾಗಿ ಟಿವಿ9 ನೆಟ್‌ವರ್ಕ್‌ನ ಎಲ್ಲಾ ಸಿಬ್ಬಂದಿಗೆ ನನ್ನ ನಮಸ್ಕಾರಗಳು ಎಂದ ಮೋದಿ, ಇಡೀ ವಿಶ್ವಕ್ಕೆ ಭಾರತದ 10 ವರ್ಷದ ಪರಿಶ್ರಮ ಕಾಣುತ್ತಿದೆ. ಕಳೆದ 10 ವರ್ಷದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಬದಲಾಗಿದೆ. ದೇಶದ ಸಾಮಾನ್ಯ ವ್ಯಕ್ತಿಯನ್ನು ಬೇರೆ ದೇಶಗಳು ನೋಡುವ ದೃಷ್ಟಿ ಬದಲಾಗಿದೆ. ಕೆಂಪು ಕೋಟೆಯಲ್ಲಿ ನಿಂತು ಭಾರತದ ಬಗ್ಗೆ ಮಾತನಾಡುತ್ತಿದ್ದರು. ಭಾರತ ದೇಶದ ಪ್ರಜೆಗಳು ಸೋಮಾರಿಗಳೆಂದು ಭಾಷಣ ಮಾಡಿದ್ದರು. ಈಗ ಇಡೀ ವಿಶ್ವವೇ ಭಾರತದ ಜೊತೆ ಸ್ನೇಹ ಮಾಡಲು ಮತ್ತು ವ್ಯವಹರಿಸಲು ಇಚ್ಚಿಸುತ್ತಿದೆ ಎಂದು ಹೇಳಿದರು.

ನಾನೇ ಖುದ್ದು ಫೈಲ್​ಗಳನ್ನು ಪರಿಶೀಲನೆ ಮಾಡ್ತೇನೆ

10 ವರ್ಷದಲ್ಲಿ ಡಿಜಿಟಲ್​ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ. 2024ರಲ್ಲಿ ದೇಶದ ಮ್ಯೂಚುಯಲ್‌ ಫಂಡ್​ನಲ್ಲಿ ಹೆಚ್ಚು ಹಣ ಸಂದಾಯ ಮಾಡಿದೆ. ಭಾರತೀಯನ ಆಲೋಚನೆ ಎಲ್ಲವನ್ನು ಸಾಧಿಸುವ ಛಲ ಹೆಚ್ಚಾಗಿದೆ. 10 ವರ್ಷದಲ್ಲಿ ಸರ್ಕಾರದ ಚಿಂತನೆಯಿಂದ ಆಡಳಿತ ಸುಧಾರಣೆ ಆಗಿದೆ. ಪಂಡಿತ್​ ನೆಹರು ಮಾಡಿದ ಡ್ಯಾಂ ಶಿಲಾನ್ಯಾಸ 60 ವರ್ಷದವರೆಗೂ ನೆನಗುದಿಗೆ ಬಿದ್ದಿತ್ತು. ಈಗ ಸರ್ದಾರ ಸರೋವರದ ಕಾರ್ಯವನ್ನು ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಪ್ರತಿ ತಿಂಗಳ ನಾನು ದಶಕದಿಂದ ಬಾಕಿ ಇರುವ ಫೈಲ್​ಗಳ ಅವಲೋಕನ ಮಾಡುತ್ತೇನೆ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಇರುವ ಫೈಲ್​ಗಳನ್ನು ಖುದ್ದು ನಾನೇ ನೋಡುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ 17 ಲಕ್ಷ ಕೋಟಿ ರೂಪಾಯಿ ಯೋಜನೆಗಳ ಕಡತಗಳನ್ನು ಪರಿಶೀಲಿಸಿದ್ದೇನೆ. ಆದ್ದರಿಂದ ಈ ಯೋಜನೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಇದನ್ನೂ ಓದಿ: WITT Global Summit: ವಿಶ್ವ ವೇದಿಕೆಯಲ್ಲಿ ಪ್ರಾತಿನಿಧ್ಯವನ್ನು ಬಯಸುವ 125 ರಾಷ್ಟ್ರಗಳ ಒಕ್ಕೂಟಕ್ಕೆ ಧ್ವನಿ ಭಾರತ: ಜೈಶಂಕರ್

ಅಪೂರ್ಣವಾಗಿದ್ದ ನೂರಾರು ಯೋಜನೆಗಳನ್ನು ನಮ್ಮ ಸರ್ಕಾರ ಪೂರ್ಣಗೊಳಿಸಿದೆ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತವು ರಿವರ್ಸ್ ಗೇರ್‌ನಲ್ಲಿತ್ತು. ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ಯೋಜನೆಗೆ 80ರ ದಶಕದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದ್ರೆ, ಈ ಯೋಜನೆಯು 4 ದಶಕಗಳಿಂದ ಹಾಗೇ ಇತ್ತು. ನಮ್ಮ ಸರ್ಕಾರಕ್ಕೆ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. 60ರ ದಶಕದಲ್ಲಿ ಸರ್ದಾರ್ ಸರೋವರ ಯೋಜನೆಯ ಅಡಿಗಲ್ಲು ಹಾಕಲಾಯಿತ್ತು. ಅದರ ಕೆಲಸವೂ ಬಾಕಿ ಉಳಿದಿತ್ತು. ನಮ್ಮ ಸರ್ಕಾರ ರಚನೆಯಾದ ನಂತರ ಆ ಅಣೆಕಟ್ಟಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ್ದೇವೆ.. 2002ರಲ್ಲಿ ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಈ ಕೆಲಸವೂ ಸ್ಥಗಿತಗೊಂಡಿತ್ತು. ಅದನ್ನು ಸಹ ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಅಸ್ಸಾಂನ ಬೋಡಿ ಬಿಲ್ ಸೇತುವೆಯನ್ನು ನಮ್ಮ ಸರ್ಕಾರ ಬಂದ ನಂತರ ಅದನ್ನು ಪೂರ್ಣಗೊಳಿಸಿದ್ದೇವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಪೂರ್ಣವಾಗಿರುವ ನೂರಾರು ಯೋಜನೆಗಳನ್ನು ನಾನು ಲೆಕ್ಕ ಹಾಕಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್​ಗೆ ಟಾಂಗ್ ಕೊಟ್ಟರು.

10 ವರ್ಷದಲ್ಲಿ ಭಾರತದ ಜನರ ನಂಬಿಕೆ ಹೆಚ್ಚಾಗಿದೆ

ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಮತ್ತು ವ್ಯವಸ್ಥೆಯಲ್ಲಿ ಭಾರತದ ಜನರ ನಂಬಿಕೆ ಹೆಚ್ಚಾಗಿದೆ. ಜನರಿಗೆ ತಮ್ಮ ಮೇಲೆ ಇರುವಷ್ಟೇ ನಂಬಿಕೆ ದೇಶದ ಮೇಲೆ ಇದೆ, ಪ್ರತಿಯೊಬ್ಬ ಭಾರತೀಯನೂ ನಾನು ಏನು ಬೇಕಾದರೂ ಮಾಡಬಲ್ಲೆ, ನನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಯೋಚಿಸುತ್ತಿರುತ್ತಾನೆ. ಜನರ ಮನಸ್ಥಿತಿ ಮತ್ತು ನಂಬಿಕೆಯ ಬದಲಾವಣೆಗೆ ನಮ್ಮ ಸರ್ಕಾರದ ಕಾರ್ಯ ಸಂಸ್ಕೃತಿಯೇ ದೊಡ್ಡ ಕಾರಣ. ಅದೇ ಅಧಿಕಾರಿಗಳಿದ್ದಾರೆ, ಅದೇ ಕಚೇರಿಗಳಿವೆ, ಅದೇ ಕಡತಗಳಿವೆ. ಸರ್ಕಾರಿ ಕಚೇರಿಗಳು ಸಮಸ್ಯೆಯಾಗಿಲ್ಲ. ಬದಲಾಗಿ ದೇಶದ ಜನರಿಗೆ ಸಹಾಯವಾಗುತ್ತಿವೆ ಎಂದರು.

ನಮ್ಮ ಸರ್ಕಾರ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ

ದೇಶದಲ್ಲಿ ಹಲವಾರು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದೇವೆ. ಲಕ್ಷದ್ವೀಪದಲ್ಲಿ ಆಪಟಿಕಲ್​ ಕೇಬಲ್​ ಅಳವಡಿಸಿದ್ದೇವೆ. ಲಕ್ಷದ್ವೀಪದಲ್ಲಿ ಆಪಟಿಕಲ್​ ಕೇಬಲ್ ಅಳವಡಿಸುವುದು ಸವಾಲಿನ ಸಂಗತಿಯಾಗಿತ್ತು. ಭಾರದಲ್ಲಿ ಪ್ರತಿದಿನ 2 ಹೊಸ ಕಾಲೇಜು ಪ್ರಾರಂಭವಾಗುತ್ತಿವೆ. ಭಾರತದಲ್ಲಿ ಪ್ರತಿದಿನ 55 ಸಾವಿರ ಜನರನ್ನು ಬಡತನ ರೇಖೆಯಿಂದ ಹೊರಗೆ ತಂದಿದ್ದೇವೆ. ಈವರೆಗೆ 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರ ತರುವ ಕಾರ್ಯ ಮಾಡಿದ್ದೇವೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ನಮ್ಮ ಸರ್ಕಾರ ಕೈಗೊಂಡ ಜನಪರ ಯೋಜನೆಗಳಿಂದ ಇದು ಸಾಧ್ಯವಾಗಿದೆ. ದೇಶದ ಜನರನ್ನು ಸಂಕಷ್ಟದಲ್ಲಿ ಇರಿಸಲು ಈ ಹಿಂದಿನ ಸರ್ಕಾರ ಯತ್ನಿಸಿತ್ತು. ಆದರೆ ನಮ್ಮ ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮೋದಿಯ ಗ್ಯಾರಂಟಿಯ ಬಗ್ಗೆ ಪ್ರತಿಯೊಬ್ಬರಿಗೂ ಸಿಗಲೇಬೇಕು. ನಾವು, ದೇಶವೇ ಪ್ರಥಮ ಎಂಬ ಸಿದ್ದಾಂತದಿಂದ ದೇಶ ನಡೆಸುತ್ತಿದ್ದೇವೆ. ತ್ರಿವಳಿ ತಲಾಖ್​ ಅಂತಹ ಹಲವಾರು ಜನಪರ ಕಾರ್ಯಗಳನ್ನು ಮಾಡಿದೆ. 5ಜಿ ನೆಟ್​ವರ್ಕ್​ ಕ್ಷೇತ್ರದಲ್ಲಿ ಯೂರೋಪ ದೇಶವನ್ನು ಹಿಂದೆ ಹಾಕಿದೆ. ಭಾರತ ಮುಂದಿನ ಭವಿಷ್ಯದ ಹೆಚ್ಚು ಹೆಚ್ಚು ಆಲೋಚನೆ ಮಾಡುತ್ತಿದೆ ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Mon, 26 February 24

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ