ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ದೇಶವಾಗಿದೆ, ಪ್ರತಿದಿನವು ನವಭಾರತದ ದರ್ಶನವಾಗುತ್ತಿದೆ: ಪ್ರಧಾನಿ ಮೋದಿ
WITT Global Summit: ಟಿವಿ9 ನೆಟ್‌ವರ್ಕ್ ಆಯೋಜಿಸಿದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಿದ್ದು, ಕಳೆದ 10 ವರ್ಷಗಳಲ್ಲಿ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಪ್ರತಿದಿನ 55 ಪೇಟೆಂಟ್‌ಗಳು, 37 ಹೊಸ ಸ್ಟಾರ್ಟ್‌ಅಪ್‌ಗಳು, 16 ಸಾವಿರ ಕೋಟಿ ರೂ. ಮೌಲ್ಯದ ಯುಪಿಐ ವಹಿವಾಟು ಮತ್ತು 50 ಸಾವಿರಕ್ಕೂ ಹೆಚ್ಚು ಎಲ್‌ಪಿಜಿ ವಿತರಣೆಗಳಾಗುತ್ತಿವೆ ಎಂದಿದ್ದಾರೆ.

ದೆಹಲಿ, ಫೆಬ್ರವರಿ 26: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿವಿ9 ಆಯೋಜಿಸಿದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT) ಶೃಂಗಸಭೆ ನಡೆಯುತ್ತಿದೆ. 2ನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ದೇಶ ವಿದೇಶಗಳ ಗಣ್ಯರನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿದಿನವು ನವಭಾರತದ ದರ್ಶನವಾಗುತ್ತಿದೆ. ಪ್ರತಿದಿನ 55 ಪೇಟೆಂಟ್‌ಗಳು, 37 ಹೊಸ ಸ್ಟಾರ್ಟ್‌ಅಪ್‌ಗಳು, 16 ಸಾವಿರ ಕೋಟಿ ರೂ. ಮೌಲ್ಯದ ಯುಪಿಐ ವಹಿವಾಟು ಮತ್ತು 50 ಸಾವಿರಕ್ಕೂ ಹೆಚ್ಚು ಎಲ್‌ಪಿಜಿ ವಿತರಣೆಗಳಾಗುತ್ತಿವೆ. ಹಳ್ಳಿಯ ಜನರ ಆರ್ಥಿಕತೆ ಹೆಚ್ಚುತ್ತಿದೆ. ಬಡ ಹಳ್ಳಿಯ ರೈತರ ಅಭಿವೃದ್ಧಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಇದು ಉತ್ತಮ ಆಡಳಿತದ ಫಲ ಎಂದ ಪ್ರಧಾನಿ ಮೋದಿ
ದೇಶದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಜನರಲ್ಲಿ ತಿಳುವಳಿಕೆ ಬೆಳೆದಿದೆ. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಿದೆ. 2014 ರಲ್ಲಿ ಜನರು 9 ಲಕ್ಷ ಕೋಟಿ ರೂ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. 2024ರಲ್ಲಿ ಇದು 52 ಲಕ್ಷ ಕೋಟಿ ರೂ. ದಾಟಲಿದೆ. ಇದೆಲ್ಲವೂ ಉತ್ತಮ ಆಡಳಿತದ ಫಲ ಎಂದಿದ್ದಾರೆ.
ಇದನ್ನೂ ಓದಿ: WITT Global Summit: 10 ವರ್ಷದಲ್ಲಿ ಬಾಕಿ ಇದ್ದ 17 ಲಕ್ಷ ಕೋಟಿ ರೂ. ಯೋಜನೆಗಳ ಕಡತಗಳನ್ನು ನಾನೇ ಪರಿಶೀಲಿಸಿದ್ದೇನೆ: ಮೋದಿ
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತವು ರಿವರ್ಸ್ ಗೇರ್‌ನಲ್ಲಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಅದು ವೇಗ ಪಡೆಯುತ್ತಿದೆ. ಸರ್ದಾರ್ ಸರೋವರ ಅಣೆಕಟ್ಟಿನ ಕಾಮಗಾರಿ 60 ವರ್ಷಗಳಿಂದ ಬಾಕಿ ಉಳಿದಿದೆ. 60ರ ದಶಕದಲ್ಲಿ ನೆಹರೂ ಅವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆದರೆ ಇಷ್ಟು ವರ್ಷಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮೋದಿ ಅಧಿಕಾರಾವಧಿಯಲ್ಲಿ ಇದರ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: WITT Global Summit: ಮೋದಿಜೀ, ನೀವು ಚುಕ್ಕಾಣಿ ಹಿಡಿದಿರುವುದು ಭಾರತದ ಅದೃಷ್ಟ: ಟಿವಿ9 ನೆಟ್‌ವರ್ಕ್ ಸಿಇಒ ಬರುಣ್ ದಾಸ್
ಮಹಾರಾಷ್ಟ್ರದ ಕೃಷ್ಣಾ ಅಣೆಕಟ್ಟು ಯೋಜನೆಯು 80ರ ದಶಕದಲ್ಲಿ ಪ್ರಾರಂಭವಾಯಿತು. ಆದರೆ ಅದರ ಕೆಲಸ 2014 ರವರೆಗೂ ಪೂರ್ಣಗೊಂಡಿಲ್ಲ. ಅದು ಕೂಡ ಮೋದಿಯವರ ಅವಧಿಯಲ್ಲಿಯೇ ಪೂರ್ಣಗೊಂಡಿತು. ಅಸ್ಸಾಂನ ಬೋಗಿ ಬಿಲ್ ಸೇತುವೆಯನ್ನು 90 ರ ದಶಕದಲ್ಲಿ ಪ್ರಾರಂಭಿಸಲಾಯಿತು. ಆದರೆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮೋದಿ ಸರ್ಕಾರ ಅದನ್ನು ಪೂರ್ಣಗೊಳಿಸಿ 2018 ರಲ್ಲಿ ಪ್ರಾರಂಭಿಸಿದೆ.
ದೇಶದ ನಂಬರ್-1 ಸುದ್ದಿ ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT) ಶೃಂಗಸಭೆಯಲ್ಲಿ ಕ್ರೀಡೆ, ಮನರಂಜನೆ ಮತ್ತು ವ್ಯಾಣಿಜ್ಯ ಕ್ಷೇತ್ರದ ಜಗತ್ತಿನ ಗಣ್ಯ ವ್ಯಕ್ತಿಗಳು ಭಾಗವಹಿಸಿದರು. ಭಾರತ ಮತ್ತು ವಿದೇಶಗಳ ಅನೇಕ ಗಣ್ಯರು ಮತ್ತು ನೀತಿ ನಿರೂಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಭಾರತದ ವರ್ತಮಾನ ಮತ್ತು ಭವಿಷ್ಯದ ರೂಪುರೇಷೆ ಜೊತೆಗೆ ಅದರ ಮೃದು ಶಕ್ತಿ ಮತ್ತು ಕಠಿಣ ಶಕ್ತಿ, ಜಗತ್ತಿನಲ್ಲಿ ಅದರ ಪಾತ್ರದ ಬಗ್ಗೆ ಚರ್ಚೆಗಳು ನಡೆದವು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:34 pm, Mon, 26 February 24