ಭ್ರಷ್ಟಾಚಾರ, ಹಗರಣಗಳೆಂಬ ಭಯಾನಕ ಪರಿಸ್ಥಿತಿಯಿಂದ ಭಾರತವನ್ನು ಹೊರತಂದಿದ್ದೇವೆ: ಪ್ರಧಾನಿ ಮೋದಿ

ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾವಣೆ ಆಗಿದೆ. ಅದರಲ್ಲಿಯೂ ಭ್ರಷ್ಟಾಚಾರ, ಸಾವಿರಾರು ಕೋಟಿ ರೂ. ಹಗರಣಗಳು, ಸ್ವಜನಪಕ್ಷಪಾತ, ಇವೆಲ್ಲವು ದೇಶದ ಬುನಾದಿಯನ್ನು ಹಾಳು ಮಾಡಿತ್ತು. ಕಳೆದ 10 ವರ್ಷಗಳಲ್ಲಿ ನಾವು ದೇಶವನ್ನು ಆ ಭಯಾನಕ ಪರಿಸ್ಥಿತಿಯಿಂದ ಹೊರತಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭ್ರಷ್ಟಾಚಾರ, ಹಗರಣಗಳೆಂಬ ಭಯಾನಕ ಪರಿಸ್ಥಿತಿಯಿಂದ ಭಾರತವನ್ನು ಹೊರತಂದಿದ್ದೇವೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2024 | 11:01 PM

ದೆಹಲಿ, ಫೆಬ್ರವರಿ 26: ಟಿವಿ9 ಆಯೋಜಿಸಿದ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ (WITT) ಶೃಂಗಸಭೆ ನಡೆಯುತ್ತಿದೆ. 2ನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್​ ಅವರು ದೇಶ ವಿದೇಶಗಳ ಗಣ್ಯರನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾವಣೆ ಆಗಿದೆ. ಅದರಲ್ಲಿಯೂ ಭ್ರಷ್ಟಾಚಾರ, ಸಾವಿರಾರು ಕೋಟಿ ರೂ. ಹಗರಣಗಳು, ಸ್ವಜನಪಕ್ಷಪಾತ, ಇವೆಲ್ಲವು ದೇಶದ ಬುನಾದಿಯನ್ನು ಹಾಳು ಮಾಡಿತ್ತು. ಕಳೆದ 10 ವರ್ಷಗಳಲ್ಲಿ ನಾವು ದೇಶವನ್ನು ಆ ಭಯಾನಕ ಪರಿಸ್ಥಿತಿಯಿಂದ ಹೊರತಂದಿದ್ದೇವೆ ಎಂದು ಹೇಳಿದ್ದಾರೆ.

ಈ ಬದಲಾವಣೆಯು ಮನಸ್ಥಿತಿಗೆ ಸಂಬಂಧಿಸಿದೆ. ಈ ಬದಲಾವಣೆಯು ವಿಶ್ವಾಸ, ನಂಬಿಕೆ ಮತ್ತು ಉತ್ತಮ ಆಡಳಿತವಾಗಿದೆ. ಮನ್ ಕೆ ಹರೇ ಹರ್ ಹೈ, ಮನ್ ಕೆ ಜೀತ್ ಜೀತ್ ಎಂಬ ಹಳೆಯ ಮಾತನ್ನು ಈ ವೇಳೆ ಅವರು ನೆನಪು ಮಾಡಿಕೊಂಡರು.

ಇದನ್ನೂ ಓದಿ: ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ದೇಶವಾಗಿದೆ, ಪ್ರತಿದಿನವು ನವಭಾರತದ ದರ್ಶನವಾಗುತ್ತಿದೆ: ಪ್ರಧಾನಿ ಮೋದಿ

ಸೋತ ಮನಸ್ಸಿನಿಂದ ಗೆಲ್ಲುವುದು ಕಷ್ಟ. ಕಳೆದ 10 ವರ್ಷಗಳಲ್ಲಿ ಮನಸ್ಸಿನ ಬದಲಾವಣೆಯು ನಿಜಕ್ಕೂ ಅದ್ಭುತವಾಗಿದೆ. ದಶಕಗಳ ಕಾಲ ಸರ್ಕಾರವನ್ನು ನಡೆಸುತ್ತಿರುವವರಿಗೆ ಭಾರತೀಯರ ಸಾಮರ್ಥ್ಯದ ಮೇಲೆ ನಂಬಿಕೆಯೇ ಇರಲಿಲ್ಲ. ಅವರು ದೇಶದ ಜನರ ಸಾಮರ್ಥ್ಯವನ್ನು ಕಡೆಗಣಿಸಿದ್ದರು.

ದೇಶದ ನಾಯಕತ್ವವು ಹತಾಶೆಯಿಂದ ತುಂಬಿರುವಾಗ ಯಾವುದೇ ಭರವಸೆ ಇರಲಾರದು. ಹಾಗಾಗಿ ದೇಶ ಹೀಗೆಯೇ ಮುಂದುವರಿಯುತ್ತದೆ ಎಂದು ದೇಶದ ಬಹುತೇಕ ಜನರು ಒಪ್ಪಿಕೊಂಡರು.

ಇದನ್ನೂ ಓದಿ: 10 ವರ್ಷದಲ್ಲಿ ಭಾರತದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ, ಅದಕ್ಕೆ ನಮ್ಮ ಸರ್ಕಾರವೇ ಕಾರಣ ಎಂದ ಮೋದಿ

21ನೇ ಶತಮಾನದಲ್ಲಿ ಭಾರತ ಸಣ್ಣ ಯೋಚನೆ ಮಾಡೋದನ್ನೇ ಬಿಟ್ಟಿದೆ. ಭಾರತದ ಸಾಧನೆ ನೋಡಿ ಇಡೀ ಜಗತ್ತೇ ನಿಬ್ಬೆರಗಾಗಿದೆ. ಜಗತ್ತು ಭಾರತದೊಂದಿಗೆ ಸಾಗುವಾಗ ತನ್ನ ಲಾಭ ಏನು ಅಂತ ನೋಡುತ್ತಿದೆ. ನಮ್ಮ ಸರ್ಕಾರ 10 ವರ್ಷದಲ್ಲಿ 640 ಬಿಲಿಯನ್‌ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳವನ್ನ ಭಾರತಕ್ಕೆ ತಂದಿದೆ ಎಂದರು.

ಇನ್ನು ಭಾರತದಲ್ಲಿ ಪ್ರತಿದಿನ 55 ಸಾವಿರ ಜನರನ್ನು ಬಡತನ ರೇಖೆಯಿಂದ ಹೊರಗೆ ತಂದಿದ್ದೇವೆ. 25ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆ ಎತ್ತುವ ಕಾರ್ಯ ಮಾಡಿದ್ದೇವೆ. ಭಾರತದಲ್ಲಿ ಪ್ರತಿದಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಅಂತ ಪ್ರಧಾನಿ ಮೋದಿ ಗರ್ವದಿಂದ ಹೇಳಿಕೊಂಡರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್