10 ವರ್ಷದಲ್ಲಿ ಭಾರತದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ, ಅದಕ್ಕೆ ನಮ್ಮ ಸರ್ಕಾರವೇ ಕಾರಣ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್‌ ಟುಡೇ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಬಿಚ್ಚಿಟ್ಟರು. ಅಲ್ಲದೇ ಕಳೆದ 10 ವರ್ಷಗಳಲ್ಲಿ ಡಿಜಿಟಲ್ ಕ್ರಾಂತಿ, ದೇಶದ ಮೇಲೆ ಜನರ ನಂಬಿಕೆ ಬಗ್ಗೆಯೂ ಹೇಳಿದ್ದಾರೆ.

10 ವರ್ಷದಲ್ಲಿ ಭಾರತದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ, ಅದಕ್ಕೆ ನಮ್ಮ ಸರ್ಕಾರವೇ ಕಾರಣ ಎಂದ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 26, 2024 | 10:24 PM

ನವದೆಹಲಿ, (ಫೆಬ್ರವರಿ 26): ಟಿವಿ9 ನೆಟ್‌ವರ್ಕ್ ನವದೆಹಲಿಯಲ್ಲಿ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್‌ ಟುಡೇ’ ಕಾರ್ಯಕ್ರಮದಲ್ಲಿ  (What India Thinks Today’ Global Summit)  ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಮೋದಿ, ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಮತ್ತು ವ್ಯವಸ್ಥೆಯಲ್ಲಿ ಭಾರತದ ಜನರ ನಂಬಿಕೆ ಹೆಚ್ಚಾಗಿದೆ. ಜನರಿಗೆ ತಮ್ಮ ಮೇಲೆ ಇರುವಷ್ಟೇ ನಂಬಿಕೆ ದೇಶದ ಮೇಲೆ ಇದೆ. ಪ್ರತಿಯೊಬ್ಬ ಭಾರತೀಯನೂ ನಾನು ಏನು ಬೇಕಾದರೂ ಮಾಡಬಲ್ಲೆ, ನನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಯೋಚಿಸುತ್ತಿದ್ದಾರೆ. ಜನರ ಮನಸ್ಥಿತಿ ಮತ್ತು ನಂಬಿಕೆಯ ಬದಲಾವಣೆಗೆ ನಮ್ಮ ಸರ್ಕಾರದ ಕಾರ್ಯ ಸಂಸ್ಕೃತಿಯೇ ದೊಡ್ಡ ಕಾರಣ ಎಂದು ಹೇಳಿದರು.

ಭಾರತದಲ್ಲಿ ಬಡತನ ರೇಖೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ದಶಕಕ್ಕೆ ಹೋಲಿಸಿದರೆ, ಬಳಕೆ ಎರಡೂವರೆ ಪಟ್ಟು ಹೆಚ್ಚಾಗಿದೆ. ವಿವಿಧ ಸೇವೆಗಳಿಗೆ ವೆಚ್ಚ ಮಾಡುವ ಭಾರತದ ಸಾಮರ್ಥ್ಯ ಹೆಚ್ಚಿದೆ. ಕಳೆದ 10 ವರ್ಷಗಳಲ್ಲಿ, ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಬಳಕೆ ಹೆಚ್ಚಾಗಿದೆ. ಅಲ್ಲದೇ ಭಾರತದಲ್ಲಿ ಪ್ರತಿದಿನ 75,000 ಜನರು ಬಡತನದಿಂದ ರೇಖೆಯಿಂದ ಹೊರಬರುತ್ತಿದ್ದಾರೆ. ಭಾರತದಲ್ಲಿ ಬಡತನವು ತನ್ನ ವಿವಿಧ ಸೇವೆಗಳು ಮತ್ತು ಸೌಲಭ್ಯಗಳ ಮೇಲೆ ಭಾರತದ ಜನರ ಖರ್ಚು ಮಾಡುವ ಶಕ್ತಿ ಹೆಚ್ಚಾಗಿದೆ ಎಂದರು.

ಇದನ್ನೂ ಓದಿ: WITT Global Summit: 10 ವರ್ಷದಲ್ಲಿ ಬಾಕಿ ಇದ್ದ 17 ಲಕ್ಷ ಕೋಟಿ ರೂ. ಯೋಜನೆಗಳ ಕಡತಗಳನ್ನು ನಾನೇ ಪರಿಶೀಲಿಸಿದ್ದೇನೆ: ಮೋದಿ

ಆರ್ಟಿಕಲ್ 370 ರದ್ದತಿಯಿಂದ ರಾಮಮಂದಿರ ನಿರ್ಮಾಣದವರೆಗೆ, ತ್ರಿವಳಿ ತಲಾಖ್ ಅಂತ್ಯದಿಂದ ಮಹಿಳಾ ಮೀಸಲಾತಿ ಮತ್ತು ಒಂದು ಶ್ರೇಣಿಯಿಂದ ಒಂದು ಪಿಂಚಣಿವರೆಗೆ, ಸರ್ಕಾರವು ಪ್ರತಿಯೊಂದು ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಿದೆ. ಭಾರತ ಇಂದು ಡಿಜಿಟಲ್ ಪಾವತಿಯಲ್ಲಿ ಬಲಿಷ್ಠ ರಾಷ್ಟ್ರವಾಗಿದೆ. ಸೌರಶಕ್ತಿಯಲ್ಲಿ ವಿಶ್ವ ನಾಯಕ. ಹಸಿರು ಹೈಡ್ರೋಜನ್ ಇಂಧನ. ಹೀಗೆ ಹಲವು ಕಾರ್ಯಗಳೊಂದಿಗೆ ಭಾರತ ಈಗ ವಿಶ್ವದ ಮೊದಲ ಸಾಲಿಗೆ ತಲುಪಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮೋದಿಯ ಗ್ಯಾರಂಟಿಯ ಬಗ್ಗೆ ಪ್ರತಿಯೊಬ್ಬರಿಗೂ ಸಿಗಲೇಬೇಕು. ನಾವು, ದೇಶವೇ ಪ್ರಥಮ ಎಂಬ ಸಿದ್ದಾಂತದಿಂದ ದೇಶ ನಡೆಸುತ್ತಿದ್ದೇವೆ. ತ್ರಿವಳಿ ತಲಾಖ್​ ಅಂತಹ ಹಲವಾರು ಜನಪರ ಕಾರ್ಯಗಳನ್ನು ಮಾಡಿದೆ. 5ಜಿ ನೆಟ್​ವರ್ಕ್​ ಕ್ಷೇತ್ರದಲ್ಲಿ ಯೂರೋಪ ದೇಶವನ್ನು ಹಿಂದೆ ಹಾಕಿದೆ. ಭಾರತ ಮುಂದಿನ ಭವಿಷ್ಯದ ಹೆಚ್ಚು ಹೆಚ್ಚು ಆಲೋಚನೆ ಮಾಡುತ್ತಿದೆ ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ