AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ

What India Thinks Today, Address by PM Modi: ಟಿವಿ9 ಸಂಸ್ಥೆಯ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗೆ ಮಹಾ ವೇದಿಕೆ ಸಜ್ಜಾಗಿದ್ದು, ಹಲವು ರಾಜಕೀಯ ನಾಯಕರು ಸೇರಿದಂತೆ ಉದ್ಯಮ ಕ್ಷೇತ್ರದ ಗಣ್ಯರು ಕೂಡ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅತಿಥಿಯಾಗಿದ್ದು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಭಾರತದ ಅಭಿವೃದ್ಧಿ ಮತ್ತು ವಿವಿಧ ಕ್ಷೇತ್ರಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.

WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
What India Thinks Today
ಗಂಗಾಧರ​ ಬ. ಸಾಬೋಜಿ
| Updated By: ರಮೇಶ್ ಬಿ. ಜವಳಗೇರಾ|

Updated on:Mar 28, 2025 | 4:53 PM

Share

ನವದೆಹಲಿ, ಮಾರ್ಚ್​ 28: ದೇಶದ ಅತಿದೊಡ್ಡ ಸುದ್ದಿ ಜಾಲವಾದ ಟಿವಿ9 ಸಂಸ್ಥೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT 2025- What India Thinks Today) ಎಂಬ ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿಯನ್ನು ಇಂದಿನಿಂದ (ಮಾರ್ಚ್​​ 28) ರಿಂದ ಆಯೋಜಿಸುತ್ತಿದೆ. ಟಿವಿ9 ನ ಜಾಗತಿಕ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷ ಅತಿಥಿಯಾಗಿದ್ದು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ರಾಜಕೀಯ ನಾಯಕರು ಮಾತ್ರವಲ್ಲದೆ ಉದ್ಯಮ, ಕ್ರೀಡೆ, ಸಿನಿಮಾ ಜಗತ್ತಿನ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ.

ಟಿವಿ9 ಸಂಸ್ಥೆ ರಾಜಧಾನಿ ದೆಹಲಿಯ ಭಾರತ ಮಂಟಪದಲ್ಲಿ ಮತ್ತೊಮ್ಮೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮಕ್ಕೆ ಮಹಾ ವೇದಿಕೆ ಸಜ್ಜಾಗಿದೆ. ಎರಡು ದಿನಗಳು (ಮಾರ್ಚ್ 28, 29 ) ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ವಿಚಾರ ವಿನಿಮಯ ಮಾಡಿದರು.

ಟಿವಿ9 ಸಂಸ್ಥೆಯ ಈ ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದು, ಸಂಜೆ ಭವ್ಯ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಕಳೆದ ಭಾರಿಯ ಆವೃತ್ತಿಯಲ್ಲೂ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದರು. ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸುವುದರ ಜೊತೆಗೆ ಟಿವಿ9 ಸಂಸ್ಥೆಯನ್ನು ಶ್ಲಾಘಿಸಿದ್ದರು. ಇನ್ನು ಪ್ರಧಾನಿ ಮೋದಿಯವರೊಂದಿಗೆ ಅನೇಕ ಕೇಂದ್ರ ಸಚಿವರು ಕೂಡ ಭಾಗವಹಿಸಿದ್ದಾರೆ.

ಇದನ್ನೂ ಓದಿ
Image
WITT 2025: ಪಿಎಂ ಮೋದಿ ಭಾಗಿ; ನೇರಪ್ರಸಾರ ವೀಕ್ಷಿಸಿ
Image
ಟಿವಿ9 ನೆಟ್​ವರ್ಕ್​ನ WITT ಶೃಂಗಸಭೆಗೆ ಮತ್ತೆ ವೇದಿಕೆ ಸಿದ್ಧ
Image
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?
Image
WITT 2024:ಪಿಎಂ ಟಾರ್ಗೆಟ್​ ರಹಸ್ಯ ಬಿಚ್ಚಿಟ್ಟ ಅಮಿತ್​ ಶಾ;ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಾ. 28, 29ರಂದು ಟಿವಿ9 WITT 2025 ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ; ನೇರಪ್ರಸಾರದ ಲಿಂಕ್

ಕೇಂದ್ರ ಸಚಿವ ನಿತಿನ್ ಗಡ್ಕರಿ, ಮನೋಹರ್ ಲಾಲ್ ಖಟ್ಟರ್, ಪೀಯುಷ್ ಗೋಯಲ್, ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ಜಿ ಕಿಶನ್ ರೆಡ್ಡಿ ಮತ್ತು ಚಿರಾಗ್ ಪಾಸ್ವಾನ್ ಮಹಾಮಂಚ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಧಾರ್ಮಿಕ ಗುರು ಧೀರೇಂದ್ರ ಕೃಷ್ಣ ಶಾಸ್ತ್ರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಸುನೀಲ್ ಅಂಬೇಕರ್ ಕೂಡ ವೇದಿಕೆ ಅಲಂಕರಿಸಲಿದ್ದಾರೆ. ಭಾರತದ ಮಾಜಿ ಹೈಕಮಿಷನರ್​ ಅಜಯ್ ಬಿಸಾರಿಯಾ ಕೂಡ ಉಪಸ್ಥಿತರಿದ್ದಾರೆ.

ಇದನ್ನೂ ಓದಿ: ಟಿವಿ9 ನೆಟ್​ವರ್ಕ್​ನ WITT ಶೃಂಗಸಭೆಗೆ ಮತ್ತೆ ವೇದಿಕೆ ಸಿದ್ಧ, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಭಾಗಿ

ಇನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ ವಿರೋಧ ಪಕ್ಷದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಭವ್ಯ ವೇದಿಕೆಯನ್ನು ಅಲಂಕರಿಸಿದ್ದಾರೆ.

ಉದ್ಯಮ ಕ್ಷೇತ್ರದ ಗಣ್ಯರು ಭಾಗಿ

ರಾಜಕೀಯ ನಾಯರನ್ನು ಹೊರತುಪಡಿಸಿ ಉದ್ಯಮ ಕ್ಷೇತ್ರದ ಅನೇಕ ಹೆಸರಾಂತ ವ್ಯಕ್ತಿಗಳು ಸಹ ಉಪಸ್ಥಿತರಿರಲಿದ್ದಾರೆ. ಮಾರುತಿ ಸುಜುಕಿ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರ್ತಿ, ಮೈಕ್ರೋಸಾಫ್ಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಉಪಾಸನಾ ಅರೋರಾ ಮತ್ತು ಯಶೋದಾ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಎಂಡಿ ಸೇರಿದಂತೆ ಉದ್ಯಮ ಕ್ಷೇತ್ರದ ಗಣ್ಯರು ತಮ್ಮ ವಿಚಾರಧಾರೆಗಳನ್ನು ಹೇಳುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:04 am, Fri, 28 March 25

Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​