Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್​ ಮುಖ್ಯ ಅಲ್ಲ; ಶಿಕ್ಷಣ ಎಲ್ಲದನ್ನ ಮೀರಿದೆ -ಗಾಯಕಿ ಸುಹಾನಾ ಸೈಯದ್

ಗಾಯಕಿ ಸುಹಾನಾ ಸೈಯದ್, ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಹಿಜಾಬ್ ಧರಿಸಿ ಶ್ರೀಕಾರನೇ ಶ್ರೀನಿವಾಸನೇ ಎಂಬ ಗೀತೆ ಹಾಡಿದ್ದರು. ಇದೇ ಕಾರಣಕ್ಕೆ ಸುಹಾನಾ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ತಿರುಗಿಬಿದ್ದಿದ್ದರು. ಸದ್ಯದ ಹಿಜಾಬ್ ವಿವಾದದ ಬಗ್ಗೆ ಸುಹಾನಾ ಪ್ರತಿಕ್ರಿಯಿಸಿದ್ದಾರೆ.

ಹಿಜಾಬ್​ ಮುಖ್ಯ ಅಲ್ಲ; ಶಿಕ್ಷಣ ಎಲ್ಲದನ್ನ ಮೀರಿದೆ -ಗಾಯಕಿ ಸುಹಾನಾ ಸೈಯದ್
ಗಾಯಕಿ ಸುಹಾನಾ ಸೈಯದ್
Follow us
TV9 Web
| Updated By: ಆಯೇಷಾ ಬಾನು

Updated on:Feb 09, 2022 | 2:34 PM

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಘರ್ಷ ನಡೆಯುತ್ತಿದೆ. ಹಿಜಾಬ್(Hijab) ಧರಿಸುವವರ ವಿರುದ್ಧ ಕೇಸರಿ ಶಾಲ್(Kesari Shwal) ಧರಿಸಿ ಯುವಕ-ಯುವತಿಯರು ರಸ್ತೆಗಿಳಿದಿದ್ದಾರೆ. ಜ್ಞಾನ ದೇಗುಲದಲ್ಲಿ ಧರ್ಮ, ಜಾತಿಗಳ ನಡುವೆ ಸಂಘರ್ಷವಾಗುತ್ತಿದೆ. ಫೆಬ್ರವರಿ 08ರಂದು ರಾಜ್ಯದ 19 ಜಿಲ್ಲೆಗಳ 55 ಕಾಲೇಜುಗಳಲ್ಲಿ ಪ್ರತಿಭಟನೆ ನಡೆದಿದೆ. 5 ಜಿಲ್ಲೆಗಳ 7 ಕಾಲೇಜುಗಳಲ್ಲಿ ಘರ್ಷಣೆಯಾಗಿದೆ. ಸದ್ಯ ಹಿಜಾಬ್ ವಿವಾದದ ಬಗ್ಗೆ‌ ಗಾಯಕಿ ಸುಹಾನಾ ಸೈಯದ್(Suhana Syed) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಹಿಂದೇ ಗಾಯಕಿ ಸುಹಾನಾ ಕೂಡ ಇದೇ ರೀತಿ ವಿವಾದಕ್ಕೆ ಗುರಿಯಾಗಿದ್ದರು. ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಹಿಂದೂ ದೇವರನಾಮ ಹಾಡಿದ್ದ ಸುಹಾನಾ ವಿವಾದಕ್ಕೆ ಒಳಗಾಗಿದ್ದರು.

ಗಾಯಕಿ ಸುಹಾನಾ ಸೈಯದ್, ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಹಿಜಾಬ್ ಧರಿಸಿ ಶ್ರೀಕಾರನೇ ಶ್ರೀನಿವಾಸನೇ ಎಂಬ ಗೀತೆ ಹಾಡಿದ್ದರು. ಇದೇ ಕಾರಣಕ್ಕೆ ಸುಹಾನಾ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ತಿರುಗಿಬಿದ್ದಿದ್ದರು. ಸದ್ಯದ ಹಿಜಾಬ್ ವಿವಾದದ ಬಗ್ಗೆ ಸುಹಾನಾ ಪ್ರತಿಕ್ರಿಯಿಸಿದ್ದಾರೆ. ನಾನು ಮುಸ್ಲಿಂ ಕುಟುಂಬಕ್ಕೆ ಸೇರಿದವಳು. ಆದರೆ ನಾನು ಹಿಜಾಬ್ ಹಾಕುವುದಿಲ್ಲ. ಹಾಗಂತ ನಾನು ಹಿಜಾಬ್ ವಿರೋಧಿ ಖಂಡಿತ ಅಲ್ಲ. ನಾನು ಹಿಜಾಬ್ ಹಾಕುವುದಿಲ್ಲ ಎಂದು ವಿರೋಧಿಸಿದವರೂ ಇದ್ದಾರೆ. ಬಟ್ಟೆ ಹಾಕೋದು ಅವರವರ ಸ್ವಾತಂತ್ರ್ಯ. ಆದರೆ ಶಿಕ್ಷಣ ಎಲ್ಲದನ್ನೂ ಮೀರಿ ನಿಂತಿದೆ. ಹೆಣ್ಣು ಮಕ್ಕಳ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಧರ್ಮ, ಜಾತಿ, ಲಿಂಗ, ಬಟ್ಟೆ ಎಲ್ಲದನ್ನೂ ಮೀರಿರೋದು ಶಿಕ್ಷಣ. ಹಿಂದೆ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಓದಲು ಕಷ್ಟಪಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ಸಿಕ್ತಿದೆ. ಇದಕ್ಕಿಂತ ಖುಷಿ ವಿಚಾರ ಇನ್ನೊಂದಿಲ್ಲ. ಶಿಕ್ಷಣ ಪಡೆಯುವ ಪ್ರತಿ ಹೆಣ್ಣಿನ ಪರ ನನ್ನ ಬೆಂಬಲವಿದೆ. ಕೇವಲ ಬಟ್ಟೆ ವಿಚಾರಕ್ಕೆ ಶಿಕ್ಷಣ ವಂಚಿತರಾಗೋದು ತಪ್ಪು ಎಂದು ಸುಹಾನಾ ಸೈಯದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Hijab Row Hearing Live: ಹಿಜಾಬ್ v/s ಕೇಸರಿ ಸಂಘರ್ಷ! ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಚರ್ಚೆ

Published On - 10:23 am, Wed, 9 February 22

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ
ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ