Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಪಡೆದ ಅವಳಿ ಸಹೋದರಿಯರು

ಸೂರತ್‌ನ ಅವಳಿ ಸಹೋದರಿಯರು ರೀಬಾ ಮತ್ತು ರಹಿನ್ ಹಫೀಜಿ ಅಂತಿಮ ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಗಳಿಸುವ ಮೂಲಕ ಅಪರೂಪ ಸಾಧನೆ ಮಾಡಿದ್ದಾರೆ. ವಡೋದರಾದ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜಿನಿಂದ 935 ಅಂಕ (ಶೇ. 66.8) ಗಳಿಸಿದ್ದಾರೆ. ನೀಟ್ ಪರೀಕ್ಷೆಯಲ್ಲೂ ಇವರು ಒಂದೇ ರೀತಿಯ ಅಂಕಗಳನ್ನು ಗಳಿಸಿದ್ದರು.

ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕ ಪಡೆದ ಅವಳಿ ಸಹೋದರಿಯರು
Gujarat Twins Score Identical Marks In Mbbs Exams
Follow us
ಅಕ್ಷತಾ ವರ್ಕಾಡಿ
|

Updated on: Apr 09, 2025 | 2:25 PM

ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿ ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿರುವ ಅವಳಿ ಸಹೋದರಿಯರು ಸುದ್ದಿಯಲ್ಲಿದ್ದಾರೆ. ಈ ಅವಳಿ ಸಹೋದರಿಯರು ಗುಜರಾತ್‌ನ ಸೂರತ್ ನಿವಾಸಿಗಳಾಗಿದ್ದು, ಅವರ ಹೆಸರುಗಳು ರೀಬಾ ಮತ್ತು ರಹಿನ್ ಹಫೀಜಿ. ಅಂತಿಮ MBBS ಪರೀಕ್ಷೆಗಳಲ್ಲಿ ಅದೇ ಅಂಕಗಳನ್ನು ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ಅವಳಿ ಸಹೋದರಿಯರು ಏಕಕಾಲದಲ್ಲಿ ವಡೋದರಾದ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಒಟ್ಟು 935 ಅಂಕಗಳನ್ನು ಅಂದರೆ ಶೇ. 66.8 ಅಂಕಗಳನ್ನು ಗಳಿಸಿದ್ದಾರೆ.

ನೀಟ್ ಯುಜಿಯಲ್ಲೂ ಅದೇ ಅಂಕ ಗಳಿಸಿದ್ದ ಅವಳಿ ಸಹೋದರಿಯರು:

ವರದಿಗಳ ಪ್ರಕಾರ, ರೀಬಾ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99 ಅಂಕಗಳನ್ನು ಗಳಿಸಿದ್ದರೆ, ರಹಿನ್ ಶೇಕಡಾ 98.5 ಅಂಕಗಳನ್ನು ಪಡೆದಿದ್ದರು. ಆದರೆ 12ನೇ ತರಗತಿಯಲ್ಲಿ ಇವರು ಕ್ರಮವಾಗಿ 98.2 ಮತ್ತು 97.3 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ತರಬೇತಿ ಇಲ್ಲದೆಯೇ ಅವರು ನೀಟ್ ಯುಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ರೀಬಾ ಶೇ. 97 ಅಂಕಗಳನ್ನು ಗಳಿಸಿದ್ದರೆ, ರಹಿನ್ ಶೇ. 97.7 ಅಂಕಗಳನ್ನು ಗಳಿಸಿದ್ದರು.

ಇದನ್ನೂ ಓದಿ: ಪ್ರತಿಭಾವಂತ ಕ್ರಿಕೆಟ್​​ ಆಟಗಾರ ಇಂದು ಐಪಿಎಸ್ ಅಧಿಕಾರಿ; ಕಾರ್ತಿಕ್ ಮಧಿರಾ ಅವರ ಸ್ಪೂರ್ತಿದಾಯಕ ಕಥೆಯಿದು

ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜಿನಲ್ಲಿ, ಈ ಇಬ್ಬರೂ ಸಹೋದರಿಯರು ಒಂದೇ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಒಟ್ಟಿಗೆ ಓದುತ್ತಿದ್ದರು. ಇದೀಗ ಈ ಅವಳಿ ಸಹೋದರಿಯರು ತಮ್ಮ ಯಶಸ್ಸಿಗೆ ತಮ್ಮ ತಾಯಿ ಮತ್ತು ಅಜ್ಜ-ಅಜ್ಜಿ ಕಾರಣ ಎಂದು ಹೇಳುತ್ತಾರೆ. “ನಾವು ಅನೇಕ ಏರಿಳಿತಗಳನ್ನು ಕಂಡಿದ್ದೇವೆ, ಆದರೆ ನನ್ನ ತಾಯಿ ನಮಗೆ ನಿರಂತರ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದ್ದರು” ಎಂದು ರಹಿನ್ ಹೇಳುತ್ತಾರೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ