Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಾವಂತ ಕ್ರಿಕೆಟ್​​ ಆಟಗಾರ ಇಂದು ಐಪಿಎಸ್ ಅಧಿಕಾರಿ; ಕಾರ್ತಿಕ್ ಮಧಿರಾ ಅವರ ಸ್ಪೂರ್ತಿದಾಯಕ ಕಥೆಯಿದು

ಕಾರ್ತಿಕ್ ಮಧಿರ, ಹೈದರಾಬಾದ್‌ನ ಕ್ರಿಕೆಟ್ ಆಟಗಾರ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ 103ನೇ ರ‍್ಯಾಂಕ್ ಗಳಿಸಿ, 996 ಅಂಕಗಳೊಂದಿಗೆ ಅವರು ಮಹಾರಾಷ್ಟ್ರ ಕೇಡರ್ ಪಡೆದಿದ್ದಾರೆ. ಕ್ರಿಕೆಟ್ ಅವರ ಆಸಕ್ತಿಯಾಗಿದ್ದರೂ, ಅವರ ಐಪಿಎಸ್ ಆಗುವ ಛಲ ಮತ್ತು ಪರಿಶ್ರಮ ಅವರನ್ನು ಯಶಸ್ಸಿನತ್ತ ಕೊಂಡೊಯ್ದಿದೆ. ಈ ಸ್ಫೂರ್ತಿದಾಯಿಕ ಕಥೆ ಯುವಜನರಿಗೆ ಮಾದರಿಯಾಗಲಿದೆ.

ಪ್ರತಿಭಾವಂತ ಕ್ರಿಕೆಟ್​​ ಆಟಗಾರ ಇಂದು ಐಪಿಎಸ್ ಅಧಿಕಾರಿ; ಕಾರ್ತಿಕ್ ಮಧಿರಾ ಅವರ ಸ್ಪೂರ್ತಿದಾಯಕ ಕಥೆಯಿದು
Karthik Madhira
Follow us
ಅಕ್ಷತಾ ವರ್ಕಾಡಿ
|

Updated on:Apr 06, 2025 | 3:21 PM

ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳು ಕಲಿಕೆಯಲ್ಲಿ ಹಿಂದುಳಿದು ಬಿಡುತ್ತಾರೆ. ಆದರೆ, ಕೆಲವು ಮಕ್ಕಳು ಕ್ರೀಡೆ ಜೊತೆಗೆ, ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾರೆ. ಇಂದು ಅದೇ ರೀತಿಯ ವ್ಯಕ್ತಿಯೊಬ್ಬರ ಸ್ಪೂರ್ತಿದಾಯಕ ಕಥೆ ಇಲ್ಲಿದೆ. ಕ್ರಿಕೆಟಿಗನಾಗಲು ಬಯಸಿದ್ದ ಯುವಕನೊಬ್ಬ ಐಪಿಎಸ್ ಅಧಿಕಾರಿಯಾದ ಕಥೆಯಿದು. ಈ ಐಪಿಎಸ್ ಅಧಿಕಾರಿಯ ಹೆಸರು ಕಾರ್ತಿಕ್ ಮಧಿರಾ.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಕಾರ್ತಿಕ್ ಆಂಡರ್​ 13, 15, 17 ಮತ್ತು 19 ಸೇರಿದಂತೆ ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಆದರೆ ನಂತರ ಅವರು ಯುಪಿಎಸ್‌ಸಿಗೆ ತಯಾರಿ ಆರಂಭಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಾರ್ತಿಕ್ ವೈಯಕ್ತಿಕ ಕಾರಣಗಳು ಮತ್ತು ಗಾಯದಿಂದಾಗಿ ಕ್ರಿಕೆಟ್ ತೊರೆದಿದ್ದರು.

ಭಾರತೀಯ ಪೊಲೀಸ್ ಸೇವೆಗೆ ಸೇರುವ ಮೊದಲು, ಕಾರ್ತಿಕ್ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ (ಜೆಎನ್‌ಟಿಯು) ಕಂಪ್ಯೂಟರ್ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ್ದಿದ್ದರು. ಇದಲ್ಲದೇ ಒಂದು ಕಂಪನಿಯಲ್ಲಿ 6 ತಿಂಗಳು ಕೆಲಸ ಮಾಡಿ, ಬಳಿಕ ನಾಗರಿಕ ಸೇವೆಗಳಿಗೆ ಸೇರಬೇಕೆಂದು ಭಾವಿಸಿದ್ದರು. ಆದರೆ ಯುಪಿಎಸ್ಸಿ ಮೇಲೆ ಒಲವು ಹೆಚ್ಚಿದ್ದು, ಇದಕ್ಕಾಗಿ ಅಧ್ಯಯನದಲ್ಲಿ ತೊಡಗಿದರು.

ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು:

ತನ್ನ ಮೊದಲ ಮೂರು UPSC ಪ್ರಯತ್ನಗಳಲ್ಲಿ ವಿಫಲನಾಗಿ 2019 ರಲ್ಲಿ UPSC ಪರೀಕ್ಷೆಯಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ, ಅಖಿಲ ಭಾರತ 103 ನೇ ರ‍್ಯಾಂಕ್ ಗಳಿಸಿದರು, ನಂತರ ಅವರು IPS ಗೆ ಆಯ್ಕೆಯಾದರು.

ಇದನ್ನೂ ಓದಿ: ಕೃಷಿ ಎಂಜಿನಿಯರಿಂಗ್‌ನಲ್ಲಿ ಹಲವು ಉದ್ಯೋಗವಕಾಶ; ತಿಂಗಳಿಗೆ ಲಕ್ಷ ಲಕ್ಷ ಸಂಬಳ!

UPSC ಪರೀಕ್ಷೆಯಲ್ಲಿ996 ಅಂಕಗಳು:

ಐಪಿಎಸ್ ಕಾರ್ತಿಕ್ ಮಧಿರ ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ 817 ಅಂಕಗಳನ್ನು ಮತ್ತು ಸಂದರ್ಶನದಲ್ಲಿ 179 ಅಂಕಗಳನ್ನು ಗಳಿಸಿದ್ದರು, ಅಂದರೆ, ಅವರು ಒಟ್ಟು 996 ಅಂಕಗಳನ್ನು ಗಳಿಸಿದ್ದರು. ಅವರಿಗೆ ಮಹಾರಾಷ್ಟ್ರ ಕೇಡರ್ ಸಿಕ್ಕಿದೆ. ಪ್ರಸ್ತುತ ಅವರು ಲೋನಾವಾಲದಲ್ಲಿ ASP ಆಗಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ, ಕ್ರಿಕೆಟ್ ಮೇಲಿನ ಅವರ ಉತ್ಸಾಹ ಕಡಿಮೆಯಾಗಿಲ್ಲ, ಬದಲಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ಕ್ರಿಕೆಟ್ ಆಡುತ್ತಾರೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sun, 6 April 25

ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ