AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Result 2025: UPSC ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ; ಅನುಜ್ ಅಗ್ನಿಹೋತ್ರಿ ದೇಶಕ್ಕೇ ಪ್ರಥಮ

ಕೇಂದ್ರ ಲೋಕಸೇವಾ ಆಯೋಗವು (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಿದೆ. ಅನುಜ್ ಅಗ್ನಿಹೋತ್ರಿ ಪ್ರಥಮ ಸ್ಥಾನ ಪಡೆದರೆ, ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡನೇ ಮತ್ತು ಮೂರನೇ ರ್ಯಾಂಕ್​ ಗಳಿಸಿದ್ದಾರೆ. ಒಟ್ಟು 958 ಅಭ್ಯರ್ಥಿಗಳು IAS, IPS, IFS ಸೇರಿದಂತೆ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಕಿರಣ್ ಕಮಾಟೆ ದೇಶಕ್ಕೆ 53ನೇ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಮೊದಲ ಟಾಪರ್ ಆಗಿ ಮಿಂಚಿದ್ದಾರೆ.

UPSC Result 2025: UPSC ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ; ಅನುಜ್ ಅಗ್ನಿಹೋತ್ರಿ ದೇಶಕ್ಕೇ ಪ್ರಥಮ
ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ
ಅಕ್ಷತಾ ವರ್ಕಾಡಿ
|

Updated on:Mar 06, 2026 | 4:14 PM

Share

ಕೇಂದ್ರ ಲೋಕಸೇವಾ ಆಯೋಗವು (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ದೇಶದಾದ್ಯಂತ ಕುತೂಹಲಕ್ಕೆ ತೆರೆ ಎಳೆದಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಅವರು ಮೊದಲ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಅವರ ಬೆನ್ನಲ್ಲೇ ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ.

ಕಳೆದ ವರ್ಷದ ಮೇ 25 ರಂದು ಪೂರ್ವಭಾವಿ ಪರೀಕ್ಷೆ ಆರಂಭವಾಗಿತ್ತು. ನಂತರ ಆಗಸ್ಟ್ 22 ರಿಂದ 31 ರವರೆಗೆ ನಡೆದ ಕಠಿಣ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 2,736 ಅಭ್ಯರ್ಥಿಗಳನ್ನು ಅಂತಿಮ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಬಳಿಕ  ಜನವರಿ 5 ರಿಂದ ಫೆಬ್ರವರಿ 27 ರವರೆಗೆ ನಡೆದ  ಪರೀಕ್ಷೆಯು ಅಭ್ಯರ್ಥಿಗಳ ತಾಳ್ಮೆ ಮತ್ತು ಜ್ಞಾನಕ್ಕೆ ಒಡ್ಡಿದ ಅಂತಿಮ ಸವಾಲಾಗಿತ್ತು. ಇದೀಗ ಪ್ರಕಟವಾಗಿರುವ ಫಲಿತಾಂಶದ ಅನ್ವಯ, ಒಟ್ಟು 958 ಅಭ್ಯರ್ಥಿಗಳು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ನೇಮಕಾತಿಯ ವಿವರಗಳನ್ನು ನೋಡುವುದಾದರೆ, ಒಟ್ಟು 180 ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆಗೆ (IAS) ಆಯ್ಕೆಯಾಗಿದ್ದು, 150 ಅಭ್ಯರ್ಥಿಗಳು ಭಾರತೀಯ ಪೊಲೀಸ್ ಸೇವೆಗೆ (IPS) ಮತ್ತು 55 ಅಭ್ಯರ್ಥಿಗಳು ಭಾರತೀಯ ವಿದೇಶಾಂಗ ಸೇವೆಗೆ (IFS) ನಿಯೋಜನೆಗೊಂಡಿದ್ದಾರೆ. ವಿಶೇಷವಾಗಿ 180 ಐಎಎಸ್ ಹುದ್ದೆಗಳಲ್ಲಿ 74 ಸಾಮಾನ್ಯ ವರ್ಗಕ್ಕೆ, 47 ಒಬಿಸಿ, 28 ಪರಿಶಿಷ್ಟ ಜಾತಿ, 13 ಪರಿಶಿಷ್ಟ ಪಂಗಡ ಮತ್ತು 18 ಅಭ್ಯರ್ಥಿಗಳು ಇಡಬ್ಲ್ಯೂಎಸ್ ವರ್ಗದಡಿ ಸ್ಥಾನ ಪಡೆದಿದ್ದಾರೆ. ಈ ಫಲಿತಾಂಶದ ಅಧಿಕೃತ ಅಂಕಪಟ್ಟಿಗಳು ಮುಂದಿನ 15 ದಿನಗಳಲ್ಲಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿವೆ.

ಕಿರಣ್ ಕಮಾಟೆ ಕರ್ನಾಟಕ ರಾಜ್ಯಕ್ಕೆ ಮೊದಲ ಟಾಪರ್:

2025-26ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆ ಫಲಿತಾಂಶದಲ್ಲಿ ಕರ್ನಾಟಕದಿಂದ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಕಿರಣ್ ಕಮಾಟೆ ದೇಶಕ್ಕೆ 53ನೇ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಮೊದಲ ಟಾಪರ್ ಆಗಿ ಮಿಂಚಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ: 

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Fri, 6 March 26

Follow Us
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು