‘ಇಂಟರ್ವಲ್’ ಸಿನಿಮಾ ಗೆದ್ದಿದ್ದು ಹೇಗೆ? 25 ದಿನಗಳ ಸಂಭ್ರಮದಲ್ಲಿ ಚಿತ್ರತಂಡ
‘ಸಿನಿಮಾದ ಕಥೆ ಮೇಲೆ ನನಗೆ ದೊಡ್ಡ ನಂಬಿಕೆ ಇರಲಿಲ್ಲ. ಆದರೆ ತುಂಬ ಭರವಸೆ ಇದ್ದಿದ್ದು ದೃಶ್ಯಗಳ ಮೇಲೆ. ಕಾಲೇಜಿನಲ್ಲಿ ತರಲೆ ಸಂಗತಿಗಳು ಇರುತ್ತವೆ. ಅದು ಕ್ಲಿಕ್ ಆಗುತ್ತದೆ ಎಂಬುದು ನನಗೆ ಗೊತ್ತಿತ್ತು’ ಎಂದು ‘ಇಂಟರ್ವಲ್’ ಸಿನಿಮಾದ ನಟ, ಕಥೆಗಾರ ಸುಕೇಶ್ ಸುಖಿ ಅವರು ಹೇಳಿದ್ದಾರೆ.
ಮಾರ್ಚ್ 7ರಂದು ‘ಇಂಟರ್ವಲ್’ ಸಿನಿಮಾ (Interval Movie) ಬಿಡುಗಡೆ ಆಗಿತ್ತು. ಹೊಸಬರ ಈ ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ಗೆಲುವಿಗೆ ಕಾರಣ ಏನು ಎಂಬುದನ್ನು ಚಿತ್ರತಂಡ ವಿವರಿಸಿದೆ. ‘25 ದಿನ ಪೂರೈಸುತ್ತದೆ ಎಂಬುದು ನಮಗೂ ಗೊತ್ತಿರಲಿಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಈ ಸಿನಿಮಾ ತುಂಬ ಇಷ್ಟ ಆಯಿತು. ಕಾಮಿಡಿ ಕಥೆ ಆದ್ದರಿಂದ ಕಾಲೇಜು ಹುಡುಗರು ಬಂದು ಸಿನಿಮಾ ನೋಡಿದರು’ ಎಂದು ಸುಕೇಶ್ ಸುಖಿ ಹೇಳಿದ್ದಾರೆ. ಭಾರತ್ವರ್ಷ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುಕೇಶ್ ಜೊತೆ ಶಶಿರಾಜ್, ಪ್ರಜ್ವಲ್ ಮುಂತಾದವರು ‘ಇಂಟರ್ವಲ್’ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
