Sign In

By signing in or creating an account, you agree with Associated Broadcasting Company's Terms & Conditions and Privacy Policy.

Interval Movie Review: ಇಂಟರ್​​ವಲ್ ಸಿನಿಮಾದ ತುಂಬೆಲ್ಲ ಡೈಲಾಗ್​ಗಳ ಕಚಗುಳಿ, ಹುಡುಗರ ಹಾವಳಿ

‘ಇಂಟರ್​ವಲ್’ ಒಂದು ಹೊಸ ತಂಡದ ಪ್ರಯತ್ನ. ಕಥೆಗಿಂತಲೂ ಮುಖ್ಯವಾಗಿ ಡೈಲಾಗ್​ಗಳಿಗೆ ಪ್ರಾಧಾನ್ಯತೆ ನೀಡಿ ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಲಾಗಿದೆ. ಭರತ್​ವರ್ಷ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸುಕಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

Interval Movie Review: ಇಂಟರ್​​ವಲ್ ಸಿನಿಮಾದ ತುಂಬೆಲ್ಲ ಡೈಲಾಗ್​ಗಳ ಕಚಗುಳಿ, ಹುಡುಗರ ಹಾವಳಿ
Interval Movie Poster
Follow us
ಮದನ್​ ಕುಮಾರ್​
|

Updated on: Mar 09, 2025 | 12:38 PM

ಸಿನಿಮಾ: ಇಂಟರ್​ವಲ್. ನಿರ್ಮಾಣ: ಭರತ್​ವರ್ಷ್​ ಪಿಕ್ಚರ್ಸ್​. ನಿರ್ದೇಶನ: ಭರತ್​ವರ್ಷ್​. ಪಾತ್ರವರ್ಗ: ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರಾ ರಾವ್, ಸಹನಾ, ಆರಾಧ್ಯಾ, ರಂಗನಾಥ್ ಶಿವಮೊಗ್ಗ, ಧನಂ ಶಿವಮೊಗ್ಗ ಮುಂತಾದವರು.

ಹದಿಹರೆಯದ ಹುಡುಗರ ತರಲೆ, ತಮಾಷೆ ಒಂದೆರಡಲ್ಲ. ಆದರೆ ಎಲ್ಲದಕ್ಕೂ ಒಂದು ಇತಿ-ಮಿತಿ ಬೇಕಾಗುತ್ತದೆ. ಜವಾಬ್ದಾರಿ ಬೆಳೆಸಿಕೊಳ್ಳಬೇಕಾದ ವಯಸ್ಸಿನಲ್ಲೂ ಅಷ್ಟೇ ತರಲೆ-ತಮಾಷೆ ಮುಂದುವರಿದರೆ ಜೀವನ ಕಷ್ಟ ಆಗುತ್ತದೆ. ಅಂಥ ಹುಡುಗರ ಕಹಾನಿಯನ್ನು ಇಟ್ಟುಕೊಂಡು ‘ಇಂಟರ್​ವಲ್’ ಸಿನಿಮಾ ಮಾಡಲಾಗಿದೆ. ಹೊಸ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರನ್ನು ನಗಿಸಬೇಕು ಎಂಬುದೇ ಈ ಸಿನಿಮಾದ ಮುಖ್ಯ ಉದ್ದೇಶ. ಹಾಗಾದ್ರೆ ಆ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ತಿಳಿಯಲು ಈ ವಿಮರ್ಶೆ ಓದಿ..

‘ಇಂಟರ್​ವಲ್’ ಸಿನಿಮಾದ ಕಥೆ ಹೀಗಿದೆ.. ಒಂದು ಹಳ್ಳಿಯಲ್ಲಿ ಮೂವರು ಬಾಲ್ಯ ಸ್ನೇಹಿತರು ಇರುತ್ತಾರೆ. ಕಾಕತಾಳೀಯ ಎಂದರೆ ಆ ಮೂವರ ಹೆಸರು ಗಣೇಶ್! ಆದರೆ ಇನಿಷಿಯಲ್ ಮಾತ್ರ ಬೇರೆ. ಶಾಲೆಯಿಂದ ಕಾಲೇಜ್​ ಓದುವ ತನಕ, ಕಾಲೇಜಿನಿಂದ ಕೆಲಸ ಹುಡುಕುವ ತನಕ ಈ ಮೂವರೂ ಒಟ್ಟೊಟ್ಟಿಗೆ ಇರುತ್ತಾರೆ. ಜೀವನದಲ್ಲಿ ಅಷ್ಟೇನೂ ಸೀರಿಯಸ್​ನೆಸ್​ ಇಲ್ಲದ ಈ ಹುಡುಗರು ಹತ್ತಾರು ಕೀಟಲೆ ಮಾಡುತ್ತಾರೆ. ಆ ಕೀಟಲೆಗಳ ಮೂಲಕ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ನೀಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಭರತ್​ವರ್ಷ್​.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಕಥೆಯ ಆರಂಭದಲ್ಲಿ ಈ ಮೂವರ ಹುಡುಗಾಟ ಇದೆ. ನಂತರ ಕೆಲಸಕ್ಕಾಗಿ ಹುಡುಕಾಟ ಇದೆ. ಇಡೀ ಸಿನಿಮಾವನ್ನು ಈ ಹುಡುಗಾಟ ಮತ್ತು ಹುಡುಕಾಟವೇ ಆವರಿಸಿಕೊಂಡಿದೆ. ಕಾಲೇಜ್ ಕ್ಯಾಂಪಸ್​ನಲ್ಲಿ, ಊರಿನ ಎಲೆಕ್ಷನ್​ನಲ್ಲಿ, ಅಂಗಡಿ ಕಟ್ಟೆಯಲ್ಲಿ ಹೀಗೆ ಎಲ್ಲಿಯೇ ಹೋದರೂ ಮೂವರು ಗಣೇಶರ ಹಾವಳಿ ಇದ್ದೇ ಇರುತ್ತದೆ. ಅದು ಅತಿರೇಕಕ್ಕೆ ಹೋದ ಮೇಲೆ ಊರು ಬಿಡುವ ಪರಿಸ್ಥಿತಿ ಬರುತ್ತದೆ. ಆಮೇಲಾದರೂ ಈ ಹುಡುಗರ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತೋ ಇಲ್ಲವೋ ಎಂಬುದನ್ನು ಪೂರ್ತಿ ಸಿನಿಮಾ ನೋಡಿ ತಿಳಿಯಬೇಕು.

ಏನೂ ಇಲ್ಲದಿದ್ದರೂ ಹಳ್ಳಿಯಲ್ಲಿ ಸಿಗಬಹುದು ನೆಮ್ಮದಿ. ನಗರದಲ್ಲಿ ಎಲ್ಲವೂ ಇದ್ದರೂ ಏನೂ ಇಲ್ಲ ಎಂಬಂತಹ ಪರಿಸ್ಥಿತಿ. ಈ ಥೀಮ್​ನಲ್ಲಿ ‘ಇಂಟರ್​ವಲ್’ ಸಿನಿಮಾದ ಕಥೆಯನ್ನು ಕಟ್ಟಿಕೊಡಲಾಗಿದೆ. ಹುಟ್ಟೂರಿನಲ್ಲಿ ಇರುವ ಖುಷಿಗೆ ಬೆಲೆ ಕೊಡದೇ ಪರ ಊರಿನಲ್ಲಿ ಖುಷಿ ಹುಡುಕುವವರಿಗೆ ಈ ಸಿನಿಮಾದಲ್ಲಿ ಮೆಸೇಜ್ ಕೂಡ ಇದೆ. ತಂದೆ-ತಾಯಿ ಪ್ರೀತಿಯನ್ನು ಕಡೆಗಣಿಸಬಾರದು ಎಂಬ ಪಾಠವನ್ನೂ ಮಾಡಲಾಗಿದೆ. ಕೈತಪ್ಪಿದ ಒಂದು ಲವ್ ಸ್ಟೋರಿಯೂ ಈ ಸಿನಿಮಾದಲ್ಲಿದೆ.

ಸುಕಿ ಅವರು ಒಂದು ಪಾತ್ರ ಮಾಡುವುದರ ಜೊತೆಗೆ ಕಥೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇಡೀ ಕಥೆಯಲ್ಲಿ ತುಂಬ ಹೊಸದಾಗಿ ಏನನ್ನೋ ನಿರೀಕ್ಷಿಸಿದರೆ ಸಿಗದೇ ಇರಬಹುದು. ಆದರೆ ಡೈಲಾಗ್​ಗಳ ಮೂಲಕ ಹಿಡಿದಿಡಲು ಅವರು ಪ್ರಯತ್ನಿಸಿದ್ದಾರೆ. ಇಂಟರ್​ವಲ್ ಎಂಬ ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದ ಕ್ಲೈಮ್ಯಾಕ್ಸ್ ಬಂದರೂ ಬರೀ ಇಂಟರ್​ವಲ್ ತನಕ ಕಥೆ ಸಾಗಿದೆ ಎನಿಸುತ್ತದೆ. ಮುಂದೇನಾಯ್ತು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಇದನ್ನೂ ಓದಿ: Tarka Movie Review: ತರ್ಕ ಚಿತ್ರದಲ್ಲಿದೆ ಲವ್ ಸ್ಟೋರಿ ಜೊತೆ ಎಚ್ಚರಿಕೆಯ ಪಾಠ

ಶುರುವಿನಿಂದ ಕೊನೆತನಕ ಹಲವಾರು ವಿಷಯಗಳನ್ನು ನಿರ್ದೇಶಕರು ಪ್ರೇಕ್ಷಕರ ಮುಂದೆ ಇರಿಸಿದ್ದಾರೆ. ಆದರೆ ಆ ಎಲ್ಲ ವಿಷಯಗಳನ್ನು ಒಂದು ಸರಿಯಾದ ಚೌಕಟ್ಟಿನಲ್ಲಿ ಕೂರಿಸಲು ಸ್ವಲ್ಪ ಎಡವಿದಂತಿದೆ. ದೊಡ್ಡ ಏರಿಳಿತ ಏನೂ ಇಲ್ಲದೇ ಮೂವರು ಗಣೇಶರ ಹುಡುಗಾಟವೇ ಕೊನೆತನಕ ಮುಂದುವರಿದಿದ್ದರಿಂದ ನೋಡುಗರಿಗೆ ಏಕತಾನತೆ ಕಾಡುತ್ತದೆ. ಇದರಿಂದ ಚಿತ್ರದ ಅವಧಿ ಕೂಡ ದೀರ್ಘ ಎನಿಸುತ್ತದೆ. ಇನ್ನು, ಲವ್​ ಸ್ಟೋರಿಯಲ್ಲಿ ಕಾಡುವ ಗುಣ ಮಿಸ್ ಆದಂತಿದೆ. ಡೈಲಾಗ್​ಗಳನ್ನು ಕೇಳಿ ಎಂಜಾಯ್ ಮಾಡುವವರಿಗೆ ಈ ಸಿನಿಮಾ ಮನರಂಜನೆ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ