AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ!

Bengaluru: KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ!

ಪ್ರಸನ್ನ ಹೆಗಡೆ
|

Updated on:Feb 19, 2026 | 8:40 AM

Share

ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಟಿಕೆಟ್ ಮೆಷಿನ್ ಕಳ್ಳತನವಾಗಿದೆ. ಬೆಂಗಳೂರು-ಶಿರಸಿ ಬಸ್​ನ ಕಂಡಕ್ಟರ್ ಬ್ಯಾಗ್‌ನಿಂದ ಖದೀಮರು ಮೆಷಿನ್ ಕದ್ದೊಯ್ದಿದ್ದಾರೆ. ಇದರಿಂದ ಎರಡು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದ್ದು, ಬಸ್ ನಿಲ್ಲಬೇಕಾಯಿತು. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಮ್ಯಾನುವಲ್ ಟಿಕೆಟ್ ನೀಡಿ ಸೇವೆ ಆರಂಭಿಸಲಾಯಿತು.

ಬೆಂಗಳೂರು, ಫೆಬ್ರವರಿ 19: ಮೆಜೆಸ್ಟಿಕ್​​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳ ಬಸ್ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದಿದ ಘಟನೆ ನಡೆದಿದೆ. ಬೆಂಗಳೂರು-ಶಿರಸಿ ಮಾರ್ಗದ ನಾನ್-ಎಸಿ ಸ್ಲೀಪರ್ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ಬ್ಯಾಗ್‌ನಲ್ಲಿದ್ದ ಟಿಕೆಟ್ ಮೆಷಿನ್ ಕಳ್ಳತನವಾಗಿದೆ. ಕೃತ್ಯದಿಂದಾಗಿ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್ ಎರಡು ಗಂಟೆಗಳ ಕಾಲ ನಿಂತಲ್ಲೇ ನಿಂತಿದ್ದು, ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.  ಅಂತಿಮವಾಗಿ ಸಿಬ್ಬಂದಿ ಮ್ಯಾನುವಲ್​​ ಟಿಕೆಟ್ ನೀಡಿ ಬಸ್ ಸೇವೆ ಆರಂಭಿಸಿದ್ದಾರೆ. ಖದೀಮರು ಬ್ಯಾಗ್ ಕದ್ದೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳು ಟಿವಿ9ಗೆ ಲಭ್ಯವಾಗಿವೆ. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಪ್ರದೀಪ್,​​ ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 19, 2026 08:38 AM