AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಕಸದ ಸಮಸ್ಯೆ: ಕೆ.ಆರ್​​. ಮಾರ್ಕೆಟ್​​ನಲ್ಲಿ ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು

ಬೆಂಗಳೂರಿನಲ್ಲಿ ಕಸದ ಸಮಸ್ಯೆ: ಕೆ.ಆರ್​​. ಮಾರ್ಕೆಟ್​​ನಲ್ಲಿ ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು

TV9 Web
| Edited By: |

Updated on: Feb 19, 2026 | 9:02 AM

Share

ಅಭಿವೃದ್ಧಿ ಶುಲ್ಕದ ವಿವಾದದಿಂದ ಬೆಂಗಳೂರಿನಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದೆ. ಬೆಳ್ಳಹಳ್ಳಿ, ದೊಡ್ಡಬಳ್ಳಾಪುರ, ಮಹದೇವಪುರ ಡಂಪಿಂಗ್ ಯಾರ್ಡ್‌ಗಳಲ್ಲಿ 400ಕ್ಕೂ ಹೆಚ್ಚು ಕಸದ ಲಾರಿಗಳನ್ನು ಪ್ರವೇಶಿಸಲು ಗ್ರಾಮಸ್ಥರು ಬಿಡುತ್ತಿಲ್ಲ. ಇದರಿಂದಾಗಿ ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದಾದ್ಯಂತ ಕಸ ಸಂಗ್ರಹ ಸ್ಥಗಿತಗೊಂಡಿದ್ದು, ಕಸ ತುಂಬಿದ ಆಟೋಗಳು ಮತ್ತು ಲಾರಿಗಳು ನಿಂತಲ್ಲೇ ನಿಂತಿವೆ. ರಾಜ್ಯ ಸರ್ಕಾರ ಮತ್ತು ಜಿಬಿಎ ಅಧಿಕಾರಿಗಳು ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಬೆಂಗಳೂರು, ಫೆಬ್ರವರಿ 19: ಅಭಿವೃದ್ಧಿ ಶುಲ್ಕದ ವಿಚಾರವಾಗಿ ಜಿಬಿಎ ಮತ್ತು ಗ್ರಾಮಸ್ಥರ ನಡುವೆ ಉಂಟಾಗಿರುವ ಭಿನ್ನಮತದಿಂದ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ತಲೆದೂರಿದೆ. ಕೆ.ಆರ್. ಮಾರುಕಟ್ಟೆ ಬಳಿ 25-30ಕ್ಕೂ ಹೆಚ್ಚು ಆಟೋಗಳು ಮತ್ತು ಲಾರಿಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ನಿನ್ನೆಯಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರಿನಿಂದ ಹೊರಟಿರುವ ಕಸ ತುಂಬಿದ ಲಾರಿಗಳನ್ನು ಬೆಳ್ಳಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ ಡಂಪ್ ಮಾಡಲು ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಅಡ್ಡಿಪಡಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಶುಲ್ಕ ಬಿಡುಗಡೆ ಮಾಡಿಲ್ಲ ಎಂಬುದು ಅವರ ಆರೋಪ. ದೊಡ್ಡಬಳ್ಳಾಪುರದಲ್ಲಿ ಕಸವೂ ಬೇಡ, ಹಣವೂ ಬೇಡ ಎಂಬ ವಾದವಿದ್ದರೆ, ಇತರೆ ಡಂಪಿಂಗ್ ಯಾರ್ಡ್‌ಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಬೇಡಿಕೆಯಿದೆ. ಹೀಗಾಗಿ ಕಸದ ಲಾರಿಗಳು ಡಂಪಿಂಗ್ ಯಾರ್ಡ್‌ಗಳ ಹೊರಗೆ ನಿಂತಿವೆ. ಇದರಿಂದಾಗಿ ಹೊಸ ಕಸ ಸಂಗ್ರಹಿಸಲು ಲಾರಿಗಳ ಕೊರತೆಯಾಗಿದ್ದು, ಪರಿಸರ ಕಲುಷಿತವಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.